ಸುರಭಿ ಜೈನ್  
ಬಾಲಿವುಡ್

ಖ್ಯಾತ ಫ್ಯಾಶನ್ ಇನ್ ಫ್ಲುಯೆನ್ಸರ್ Surbhi Jain ಕ್ಯಾನ್ಸರ್ ಗೆ ಬಲಿ!

ಖ್ಯಾತ ರೂಪದರ್ಶಿ ಮತ್ತು ಫ್ಯಾಶನ್ ಇನ್ ಫ್ಲುಯೆನ್ಸರ್ ಸುರಭಿ ಜೈನ್ ಕ್ಯಾನ್ಸರ್ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಅವರಿಗೆ 30 ವರ್ಷ ವಯಸ್ಸಾಗಿತ್ತು.

ಮುಂಬೈ: ಖ್ಯಾತ ರೂಪದರ್ಶಿ ಮತ್ತು ಫ್ಯಾಶನ್ ಇನ್ ಫ್ಲುಯೆನ್ಸರ್ ಸುರಭಿ ಜೈನ್ ಕ್ಯಾನ್ಸರ್ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಅವರಿಗೆ 30 ವರ್ಷ ವಯಸ್ಸಾಗಿತ್ತು.

ಸುಮಾರು ವರ್ಷಗಳಿಂದಲೇ ಕ್ಯಾನ್ಸರ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಸುರಭಿ ಜೈನ್ ಚಿಕಿತ್ಸೆ ಫಲಿಸದೇ ಗುರುವಾರ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸುರಭಿ ಜೈನ್ ಅವರ ಕುಟುಂಬವೇ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಎಂಟು ವಾರಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಹಾಕಿದ ತನ್ನ ಕೊನೆಯ ಪೋಸ್ಟ್​ನಲ್ಲಿ ಸುರಭಿ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ವೇಳೆ ತುಂಬಾ ನೋವಿನಿಂದಲೇ ತಮ್ಮ ಚಿಕಿತ್ಸೆಯ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದರು.

“ನನ್ನ ಆರೋಗ್ಯದ ಬಗ್ಗೆ ನಾನು ನಿಮಗೆ ಅಪ್ಡೇಟ್ ಮಾಡಿಲ್ಲ ಎಂದು ನನಗೆ ತಿಳಿದಿದೆ. ಅದರ ಬಗ್ಗೆ ನನಗೆ ಪ್ರತಿದಿನ ಬರುತ್ತಿರುವ ಮೆಸೆಜ್ ಗಳ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತಿದೆ. ಇಲ್ಲಿ ಉತ್ತಮ ಚಿಕಿತ್ಸೆ ನಡೆಯುತ್ತಿದೆಯಾದರೂ ದೇಹ ಅದಕ್ಕೆ ಸ್ಪಂದಿಸುತ್ತಿಲ್ಲ. ಅದ್ದರಿಂದ ನಿಮ್ಮೊಂದಿಗೆ ಹಂಚಿಕೊಳ್ಳಲು ಏನೂ ಇಲ್ಲ. ಕಳೆದ 2 ತಿಂಗಳುಗಳಲ್ಲಿ ನಾನು ಹೆಚ್ಚಾಗಿ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಚಿಕಿತ್ಸೆ ನಡೆಯುತ್ತಿದೆ. ಕಷ್ಟ ಮತ್ತು ಇದೆಲ್ಲವೂ ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಬರೆದುಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ 3ನೇ ತಿಂಗಳಿಗೆ ಕಾಲಿಡುತ್ತಿರುವುದರಿಂದ '3F' ಮೇಲೆ ನಿಗಾ ವಹಿಸುವಂತೆ ಕೇಂದ್ರ ಸಚಿವೆ ಸೀತಾರಾಮನ್ ಕರೆ

'ಡಿಜಿಟಲ್ ಅರೆಸ್ಟ್': 24 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ನಿವೃತ್ತ ಶಿಕ್ಷಕಿ; ವಿವಿಧ ರಾಜ್ಯಗಳ ಆರು ಜನರ ಬಂಧನ!

'ಇಂದೇ ಬರೆದಿಟ್ಕೊಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್, ಇದೇ ಸರ್ಕಾರ': ಪವರ್​ ಶೇರಿಂಗ್​ ನಡುವೆಯೇ DCM ಬಿಗ್ ಸಂದೇಶ

ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣ: CBI ತನಿಖೆಗೆ ಸುಪ್ರೀಂ ಕೋರ್ಟ್ ಅಸ್ತು; ಸಾಕ್ಷ್ಯ-ಹೇಳಿಕೆಗಳ ಪ್ರಕಟಿಸದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ..!

ಲೈಂಗಿಕ ಅಪರಾಧಗಳನ್ನು ಹತ್ತಿಕ್ಕುವಂತೆ ಪೊಲೀಸರಿಗೆ ತಮಿಳುನಾಡು ಸಿಎಂ ವಿಜಯ್ ಖಡಕ್ ಸೂಚನೆ

SCROLL FOR NEXT