ನಟ ರವಿ ಕಿಶನ್ ಮತ್ತು ನಟಿ ಶಿನ್ನೋವಾ 
ಬಾಲಿವುಡ್

BJP ಅಭ್ಯರ್ಥಿ, ನಟ ರವಿ ಕಿಶನ್ ನನ್ನ ತಂದೆ: ಬೇಕಾದ್ರೆ DNA ಪರೀಕ್ಷೆ ಮಾಡಿ ಎಂದ ನಟಿ Shinnova!

ಬಿಜೆಪಿಯ ಗೋರಖ್‌ಪುರ ಸಂಸದ ಮತ್ತು ಖ್ಯಾತ ನಟ ರವಿ ಕಿಶನ್ (Ravi Kishan) ತನ್ನ ಜೈವಿಕ ತಂದೆ ಎಂದು ನಟಿಯೊಬ್ಬರು ಆರೋಪಿಸಿದ್ದು, ಮಾತ್ರವಲ್ಲದೇ ಬೇಕಿದ್ದರೆ ನನ್ನ DNA ಟೆಸ್ಟ್ ಮಾಡಿ ಎಂದು ಸವಾಲೆಸೆದಿದ್ದಾರೆ.

ಮುಂಬೈ: ಬಿಜೆಪಿಯ ಗೋರಖ್‌ಪುರ ಸಂಸದ ಮತ್ತು ಖ್ಯಾತ ನಟ ರವಿ ಕಿಶನ್ (Ravi Kishan) ತನ್ನ ಜೈವಿಕ ತಂದೆ ಎಂದು ನಟಿಯೊಬ್ಬರು ಆರೋಪಿಸಿದ್ದು, ಮಾತ್ರವಲ್ಲದೇ ಬೇಕಿದ್ದರೆ ನನ್ನ DNA ಟೆಸ್ಟ್ ಮಾಡಿ ಎಂದು ಸವಾಲೆಸೆದಿದ್ದಾರೆ.

25 ವರ್ಷದ ನಟಿ ಶಿನೋವಾ ಶನಿವಾರ ಮುಂಬೈ ನ್ಯಾಯಾಲಯದಲ್ಲಿ ಈ ಸಂಬಂಧ ಸಿವಿಲ್ ಮೊಕದ್ದಮೆ ಹೂಡಿದ್ದು, ಡಿಎನ್‌ಎ ಪರೀಕ್ಷೆ ನಡೆಸಬೇಕು ಕೋರಿದ್ದಾರೆ.

ಮೂಲಗಳ ಪ್ರಕಾರ ಮೊಕದ್ದಮೆಯಲ್ಲಿ ನಟಿ ಶಿನೋವಾ ಅವರು ತಮ್ಮ ತಾಯಿ ಅಪರ್ಣಾ ಸೋನಿ ಜತೆ ರವಿ ಕಿಶನ್ ಅವರಿಗೆ ಸಂಬಂಧ ಇತ್ತು. ಆ ಸಂಬಂಧದಿಂದ ಜನಿಸಿದ ಮಗಳು ನಾನು ಎಂದು ಹೇಳಿಕೊಂಡಿದ್ದಾರೆ. ಕಿಶನ್ ತನ್ನ ತಂದೆ ಎಂದು ಬಹಿರಂಗಗೊಳಿಸಿದ ನಂತರ ಉತ್ತರ ಪ್ರದೇಶದಲ್ಲಿ ಸೋನಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ರವಿ ಕಿಶನ್ ಪತ್ನಿಯಿಂದ ದೂರು

ರವಿ ಕಿಶನ್‌ ಅವರು ತನ್ನ ತಂದೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಕಿಶನ್ ಅವರ ಪತ್ನಿ ಪ್ರೀತಿ ಶುಕ್ಲಾ ಅವರು ಶಿನೋವಾ ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ರವಿ ಕಿಶನ್ ಅವರು ತನ್ನ ಮಗಳಿಗೆ ಅಪ್ಪ ಎಂದು ಹೇಳಿಕೊಂಡಿರುವ ಮಹಿಳೆ ಅಪರ್ಣಾ ಠಾಕೂರ್ ಮಾತ್ರವಲ್ಲದೆ, ಆಕೆಯ ಪತಿ ರಾಜೇಶ್ ಸೋನಿ, ಮಗಳು ಶೆನೋವಾ ಸೋನಿ, ಮಗ ಸೋನಕ್ ಸೋನಿ ಹಾಗೂ ಸಮಾಜವಾದಿ ಪಕ್ಷದ ನಾಯಕ ವಿವೇಕ್ ಕುಮಾರ್ ಪಾಂಡೆ ಮತ್ತು ಪತ್ರಕರ್ತ ಖುರ್ಷಿದ್ ಖಾನ್ ಅವರನ್ನು ಕೂಡ ಎಫ್‌ಐಆರ್‌ನಲ್ಲಿ ಹೆಸರಿಸಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟು ಮಾತ್ರವಲ್ಲದೇ ತನಗೆ ಭೂಗತ ಲೋಕದ ಜತೆ ನಂಟು ಇದೆ ಎಂದು ಅಪರ್ಣಾ ಠಾಕೂರ್ ಬೆದರಿಕೆ ಹಾಕಿರುವುದಾಗಿ ಬಿಜೆಪಿ ಸಂಸದ ರವಿ ಕಿಶನ್ ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದರು. 20 ಕೋಟಿ ರೂ ಹಣ ನೀಡಬೇಕು. ತನ್ನ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ ರವಿ ಕಿಶನ್ ಅವರ ಹೆಸರು ಕೆಡಿಸುವುದಾಗಿ ಆಕೆ ಬೆದರಿಕೆ ಒಡ್ಡಿದ್ದಾಳೆ ಎಂದು ಆರೋಪಿಸಿದ್ದರು.

ನಟಿ ಶಿನೋವಾ ಆರೋಪ ಇದೀಗ ಭಾರಿ ಸುದ್ದಿಗೆ ಗ್ರಾಸವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT