ತಮ್ಮ ಕ್ರಿಕೆಟಿಗ-ಪತಿಗಳಾದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಗೆ ಬೆಂಬಲ ನೀಡಲು ಆಥಿಯಾ ಶೆಟ್ಟಿ ಮತ್ತು ಅನುಷ್ಕಾ ಶರ್ಮಾ ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ. ಪಂದ್ಯದ ನಂತರ ಆಥಿಯಾ ಹಾಗೂ ಅನುಷ್ಕಾ ರೆಸ್ಟೋರೆಂಟ್‌ವೊಂದಕ್ಕೆ ಭೇಟಿ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಆಥಿಯಾ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡಿರುವುದು ಇದೇ ಮೊದಲು. ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಳೆದ ನವೆಂಬರ್‌ನಲ್ಲಿ ಶೀಘ್ರದಲ್ಲೇ ತಾವು ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿದ್ದರು.
ವಿಡಿಯೋದಲ್ಲಿ, ಇಬ್ಬರು ನಟಿಯರು ಒಟ್ಟಿಗೆ ಉಪಾಹಾರ ಗೃಹದೊಳಗೆ ಹೋಗುತ್ತಿರುವುದು ಕಂಡುಬಂದಿದೆ. ಅನುಷ್ಕಾ ಬಿಳಿ ಶರ್ಟ್ ಮತ್ತು ತಿಳಿ ನೀಲಿ ಬಣ್ಣದ ಜೀನ್ಸ್ ಧರಿಸಿದ್ದರೆ, ಅಥಿಯಾ ಟಿ-ಶರ್ಟ್ ಮತ್ತು ಡೆನಿಮ್ ಸ್ಕರ್ಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಸಾಗುತ್ತಿದ್ದ ಅನುಷ್ಕಾರನ್ನು ಆಥಿಯಾ ಹಿಂಬಾಲಿಸಿದ್ದಾರೆ.
ಶನಿವಾರ, ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ ಕುಟುಂಬದೊಂದಿಗೆ ಅನುಷ್ಕಾ ಪೋಸ್ ನೀಡಿರುವ ಚಿತ್ರ ಹೊರಬಿದ್ದಿದೆ. ನಿತೀಶ್ ಅವರು ಬಾಕ್ಸಿಂಗ್ ಡೇ ಟೆಸ್ಟ್‌ನ 3 ನೇ ದಿನದ ತಾರೆಯಾಗಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದರು. ಅವರ ತಂದೆ ಮುತ್ಯಾಲ ರೆಡ್ಡಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಒಂದು ಸುಂದರ ಕ್ಷಣ ಎಂಬ ಶೀರ್ಷಿಕೆ ನೀಡಿದ್ದಾರೆ.
ನವೆಂಬರ್‌ನಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇನ್‌ಸ್ಟಾಗ್ರಾಂನಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. 'ನಮ್ಮ ಸುಂದರ ಆಶೀರ್ವಾದ ಶೀಘ್ರದಲ್ಲೇ ಬರಲಿದೆ. 2025' ಎಂದು ಪೋಸ್ಟರ್ ಹಂಚಿಕೊಂಡಿದ್ದರು.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಆಥಿಯಾ 2023 ರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ವಿವಾಹವಾದರು. ಖಂಡಾಲಾದ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನಡೆಯಿತು.