ಮುಂಬೈ: ಟಿ-ಸೀರೀಸ್ ಅಧ್ಯಕ್ಷ ಭೂಷಣ್ ಕುಮಾರ್ ಅವರ ಚಿಕ್ಕಪ್ಪ, ನಟ-ನಿರ್ಮಾಪಕ ಕೃಷ್ಣ ಕುಮಾರ್ ಅವರ ಪುತ್ರಿ 21 ವರ್ಷದ ತಿಶಾ ಕುಮಾರ್ ಅವರು ಕ್ಯಾನ್ಸರ್ನೊಂದಿಗೆ ಸುದೀರ್ಘ ಹೋರಾಟದ ನಂತರ ನಿನ್ನೆ ಮೃತಪಟ್ಟಿದ್ದಾರೆ.
ಕೃಷ್ಣ ಕುಮಾರ್ ಅವರ ಪುತ್ರಿ ತಿಶಾ ಕುಮಾರ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ನಿನ್ನೆ ನಿಧನರಾಗಿದ್ದಾರೆ. ಇದು ಕುಟುಂಬಕ್ಕೆ ಕಷ್ಟಕರ ಸಮಯ, ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ ಎಂದು ಟಿ-ಸೀರೀಸ್ ಹೇಳಿಕೆ ಬಿಡುಗಡೆ ಮಾಡಿದೆ.
ಕೃಷ್ಣ ಕುಮಾರ್ ಮತ್ತು ತಾನ್ಯಾ ಸಿಂಗ್ ದಂಪತಿಗೆ ತಿಶಾ ಕುಮಾರ್ 2023ರ ಸೆಪ್ಟೆಂಬರ್ 6ರಂದು ಜನಿಸಿದ್ದರು. 2023ರ ನವೆಂಬರ್ 30ರಂದು ರಣಬೀರ್ ಕಪೂರ್ ಅವರ 'ಅನಿಮಲ್' ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಕೃಷ್ಣ ಕುಮಾರ್ ಅವರ ಮಗಳು ತಿಶಾ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಕೃಷ್ಣ ಕುಮಾರ್ ಅವರು 90ರ ದಶಕದಲ್ಲಿ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ನಂತರ ಚಿತ್ರ ನಿರ್ಮಾಣದಲ್ಲಿ ತೊಡಗಿದರು.