ಉದ್ಯಮಿ ರಾಜ್ ಕುಂದ್ರಾ ಮತ್ತು ನಟಿ ಶಿಲ್ಪಾ ಶೆಟ್ಟಿ 
ಬಾಲಿವುಡ್

Porn Content Case: Shilpa Shetty ಪತಿ ರಾಜ್ ಕುಂದ್ರಾ ಮನೆ ಮೇಲೆ ED ಅಧಿಕಾರಿಗಳ ದಾಳಿ

ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಮನೆ ಹಾಗೂ ಆಫೀಸ್​​ಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದು, ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಈ ಹಿಂದೆ ರಾಜ್ ಕುಂದ್ರಾ ಬಂಧನಕ್ಕೀಡಾಗಿದ್ದರು.

ಮುಂಬೈ: ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಮನೆ ಹಾಗೂ ಆಫೀಸ್​​ಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದು, ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಈ ಹಿಂದೆ ರಾಜ್ ಕುಂದ್ರಾ ಬಂಧನಕ್ಕೀಡಾಗಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಜ್ ಕುಂದ್ರಾ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಉದ್ಯಮಿಯಾಗಿ ಗುರುತಿಸಿಕೊಂಡಿರುವ ರಾಜ್ ಕುಂದ್ರಾ ಅವರು ಮುಂಬೈನಲ್ಲಿ ವಾಸಿಸುತ್ತಿದ್ದು, ನಟರಿಗೆ ಹಣ ವಂಚನೆ ಕೇಸ್​​ಗೆ ಸಂಬಂಧಿಸಿದಂತೆ ಹಲವಾರು ಸಲ ಕಾನೂನು ಸಮಸ್ಯೆ ಎದುರಿಸಿದ್ದಾರೆ.

ನೀಲಿ ಚಿತ್ರ ತಾರೆ ಬಂಧನ

ಬಾಂಗ್ಲಾದೇಶದ ಅಡಲ್ಟ್ ಫಿಲ್ಮ್ ಆ್ಯಕ್ಟರ್ ರಿಯಾ ಅರವಿಂದ ಬರ್ದೆ ಅವರು ಮಹಾರಾಷ್ಟ್ರದ ಉಲ್ಹಾಸನಗರದಲ್ಲಿ ಅರೆಸ್ಟ್ ಆಗಿದ್ದರು. ಅವರು ನಕಲಿ ದಾಖಲೆಗಳನ್ನು ಇಟ್ಟುಕೊಂಡು ಭಾರತದಲ್ಲಿ ಇದ್ದ ಆರೋಪದ ಮೇಲೆ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಅವರು ರಾಜ್​ ಕುಂದ್ರಾ ಮಾಡಿದ್ದ ಪ್ರಾಜೆಕ್ಟ್​ಗಳಲ್ಲಿಯೂ ಕೆಲಸ ಮಾಡಿದ್ದರು ಎನ್ನಲಾಗಿತ್ತು.

ಏನಿದು ಪ್ರಕರಣ?

ರಾಜ್ ಕುಂದ್ರಾ ಅವರು 2021ರಲ್ಲಿ ಜೂನ್​ನಲ್ಲಿ ಅರೆಸ್ಟ್ ಆಗಿದ್ದರು. ನೀಲಿ ಚಿತ್ರಗಳನ್ನು ನಿರ್ಮಿಸಿದ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಪತಿ ಕೂಡ ಆಗಿರುವ ರಾಜ್ ಕುಂದ್ರಾರನ್ನು ಬಂಧಿಸಲಾಗಿತ್ತು. ನಂತರ ಸೆಪ್ಟೆಂಬರ್ ತಿಂಗಳಲ್ಲಿ ಜಾಮೀನು ಸಿಕ್ಕಿತ್ತು. ಶಿಲ್ಪಾ ಶೆಟ್ಟಿ ಪತಿ 2 ತಿಂಗಳು ಜೈಲಿನಲ್ಲಿ ಕಳೆದಿದ್ದರು.

ಈ ಇಡೀ ಕೇಸ್​ನಲ್ಲಿ ರಾಜ್ ಕುಂದ್ರಾ ಮುಖ್ಯ ಮಾಸ್ಟರ್ ಪ್ಲಾನರ್ ಎಂದು ಮುಂಬೈ ಪೊಲೀಸರು ಹೇಳಿಕೆ ಕೊಟ್ಟಿದ್ದರು. 2021 ಫೆಬ್ರವರಿಯಲ್ಲಿ ಮುಂಬೈ ಪೊಲೀಸರು ನೀಲಿ ಚಿತ್ರ ನೆಟ್​ವರ್ಕ್ ಬೇಧಿಸಿದ್ದರು. ಈ ಒಂದು ಪ್ರಕರಣದಲ್ಲಿ ಐದು ಜನರನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಹೆಚ್ಚಿನ ತನಿಖೆಯಾಗಿ ಮತ್ತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ ಆ ನಂತರ ಮುಂಬೈ ಪೊಲೀಸ್​​ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡದ ನೇತೃತ್ವ ಬದಲಾಗಿ ಈ ಕೇಸ್ ಸುದ್ದಿಯಿಂದ ದೂರವಾಗಿತ್ತು.

ಜೂನ್​ನಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ತನಿಖೆಯಲ್ಲಿ ರಾಜ್ ಕುಂದ್ರಾ ಒಡೆತನದ ಹಾಟ್ ಶಾಟ್ಸ್ ಎಂಬ ಎಪ್ಲಿಕೇಷನ್ ಬಗ್ಗೆ ರಿವೀಲ್ ಆಗಿತ್ತು. ಈ ಎಪ್ಲಿಕೇಷನ್​​ಗೆ ರಾಜ್ ಕುಂದ್ರಾ ಕಂಪೆನಿಯ ಮಾಲೀಕತ್ವ ಇತ್ತು. ನಂತರದಲ್ಲಿ ಈ ಕುರಿತು ತನಿಖೆಯಾಗಿ ಇದರಲ್ಲಿ ಅಡಲ್ಟ್ ಕಂಟೆಂಟ್​ ಪತ್ತೆಯಾಗಿ ಸರ್ವರ್ ಸೀಜ್ ಮಾಡಲಾಗಿತ್ತು. ಇದೀಗ ಮತ್ತೆ ರಾಜ್ ಕುಂದ್ರಾ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡುವ ಮೂಲಕ ಮತ್ತೆ ಈ ಪ್ರಕರಣ ಜೀವ ಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT