ಅಕ್ಷಯ್ ಕುಮಾರ್ , ಜಯ ಬಚ್ಚನ್ 
ಬಾಲಿವುಡ್

'ಟಾಯ್ಲೆಟ್ ಏಕ್ ಪ್ರೇಮ್ ಕಥಾ': ಜಯ ಬಚ್ಚನ್ ಟೀಕೆಗೆ ಅಕ್ಷಯ್ ಕುಮಾರ್ ತೀಕ್ಷ್ಣ ಪ್ರತಿಕ್ರಿಯೆ!

ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಏರ್ ಲಿಫ್ಟ್, ಕೇಸರಿ1 ಮಾಡಿದ್ದೇನೆ. ಈಗ ಕೇಸರಿ 2 ಮಾಡಲಾಗಿದೆ. ಅಂತಹ ಅನೇಕ ಚಿತ್ರಗಳಿವೆ.ಈ ಸಿನಿಮಾಗಳನ್ನು ನನ್ನ ಹೃದಯದಿಂದ ಮಾಡಿದ್ದೇನೆ

ಮುಂಬೈ: ನನ್ನ ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾದಂತಹ ಸಿನಿಮಾಗಳನ್ನು ಮೂರ್ಖರು ಮಾತ್ರ ಟೀಕಿಸುತ್ತಾರೆ ಎಂದು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹೇಳಿದ್ದಾರೆ.

'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಚಿತ್ರದ ಟೈಟಲ್ ಕುರಿತು ಜಯ ಬಚ್ಚನ್ ಇತ್ತೀಚಿಗೆ ಟೀಕೆ ಮಾಡಿದ್ದರು. ಈ ಟೀಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ನಟ ಅಕ್ಷಯ್ ಕುಮಾರ್, ಅವರು ಹಾಗೇ ಹೇಳಿದ್ದರೆ ಅವರು ಹೇಳಿದ್ದು ಸರಿ, ನಾನು ಅಂತಹ ಸಿನಿಮಾ ಮಾಡುವ ಮೂಲಕ ತಪ್ಪು ಮಾಡಿದ್ದರೆ ಅವರು ಹೇಳಿದ್ದು ಸರಿ ಇರಬಹುದು ಎಂದರು.

ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಏರ್ ಲಿಫ್ಟ್, ಕೇಸರಿ1 ಮಾಡಿದ್ದೇನೆ. ಈಗ ಕೇಸರಿ 2 ಮಾಡಲಾಗಿದೆ. ಅಂತಹ ಅನೇಕ ಚಿತ್ರಗಳಿವೆ.ಈ ಸಿನಿಮಾಗಳನ್ನು ನನ್ನ ಹೃದಯದಿಂದ ಮಾಡಿದ್ದೇನೆ . ಒಂದು ಸಿನಿಮಾ ಜನರಿಗೆ ಹಲವು ವಿಷಯಗಳನ್ನು ಕಲಿಸುತ್ತದೆ. ಯಾರೂ ಅದನ್ನು ಟೀಕಿಸಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಕೆಲ ಮೂರ್ಖರು ಮಾತ್ರ ಟೀಕಿಸುತ್ತಾರೆ ಎಂದು ಹೇಳಿದರು.

ಜಯಾ ಬಚ್ಚನ್ ಹೇಳಿದ್ದೇನು?

ಟಾಯ್ಲೆಟ್ ಏಕ್ ಪ್ರೇಮ್ ಕಥಾ ಟೈಟಲ್ ಕುರಿತು ಮಾತನಾಡಿದ್ದ ಜಯಾ ಬಚ್ಚನ್, ನಾನು ಅಂತಹ ಹೆಸರಿನ ಚಿತ್ರವನ್ನು ಎಂದಿಗೂ ನೋಡುವುದಿಲ್ಲ. ಇದು ಹೆಸರೇ? ಅಂತಹ ಟೈಟಲಿನ ಸಿನಿಮಾವನ್ನು ನೀವು ನೋಡಲು ಬಯಸುತ್ತೀರಾ? ಇಷ್ಟೊಂದು ಜನರಲ್ಲಿ ಕೇವಲ ನಾಲ್ಕು ಜನರು ಮಾತ್ರ ಅಂತಹ ಸಿನಿಮಾ ನೋಡಲು ಬಯಸುತ್ತಾರೆ. ಆ ಸಿನಿಮಾ ವಿಫಲವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್