ಅನುರಾಗ್ ಕಶ್ಯಪ್ 
ಬಾಲಿವುಡ್

ಬ್ರಾಹ್ಮಣ ಸಮುದಾಯದ ನಿಂದನೆ: ಕ್ಷಮೆಯಾಚಿಸಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್!

ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ವಿವಾದಕ್ಕೆ ಗುರಿಯಾಗಿದ್ದ ಅನುರಾಗ್ ಕಶ್ಯಪ್, ಇಡೀ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮುಂಬೈ: ಬ್ರಾಹ್ಮಣರನ್ನು ನಿಂದಿಸಿದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಕೋಪದ ಭರದಲ್ಲಿ ಯಾರಿಗೂ ಉತ್ತರಿಸುವಾಗ ಎಲ್ಲೆ ಮೇರೆ ನಿಂದನಾತ್ಮಕ ಭಾಷೆ ಬಳಸಿರುವುದಾಗಿ ಅವರು ಹೇಳಿದ್ದಾರೆ.

ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ವಿವಾದಕ್ಕೆ ಗುರಿಯಾಗಿದ್ದ ಅನುರಾಗ್ ಕಶ್ಯಪ್, ಇಡೀ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ Instagram ನಲ್ಲಿ ಫೋಸ್ಟ್ ಮಾಡಿರುವ ಅನುರಾಗ್ ಕಶ್ಯಪ್, ನನ್ನ ಜೀವನದಲ್ಲಿ ಮತ್ತು ಈಗಲೂ ಅನೇಕ ಬ್ರಾಹ್ಮಣರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂದು ಅವರೆಲ್ಲರೂ ನನ್ನಿಂದ ನೋಂದಿದ್ದಾರೆ. ನನ್ನ ಕುಟುಂಬಕ್ಕೂ ನನ್ನಿಂದ ನೋವಾಗಿದೆ. ನಾನು ಗೌರವಿಸುವ ಅನೇಕ ಬುದ್ಧಿಜೀವಿಗಳು ನನ್ನ ಕೋಪ ಮತ್ತು ನನ್ನ ಮಾತಿನ ಶೈಲಿಯಿಂದ ನೋಂದಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಹಿಂದಿ ಚಿತ್ರ "ಫುಲೆ" ಬಿಡುಗಡೆಯ ವಿರುದ್ಧ ಬ್ರಾಹ್ಮಣ ಸಮುದಾಯದ ಪ್ರತಿಭಟನೆಗಳು ಮತ್ತು "ಸಂತೋಷ್" ಮತ್ತು "ಧಡಕ್ 2" ನಂತಹ ಜಾತಿ ಆಧಾರಿತ ಚಿತ್ರಗಳು ಎದುರಿಸುತ್ತಿರುವ ಸೆನ್ಸಾರ್ ಸಮಸ್ಯೆಗಳನ್ನು ಟೀಕಿಸುವ ಭರದಲ್ಲಿ ಕಶ್ಯಪ್, ಆ ರೀತಿಯ ಪದಗಳನ್ನು ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ನಾನು ಇದನ್ನು ಹೇಳಲು ಬಯಸದ ಈ ಸಮುದಾಯದವರಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಆದರೆ ಯಾರಿಗೂ ಉತ್ತರಿಸುವಾಗ ಕೋಪದಿಂದ ಹೀಗೆ ಪ್ರತಿಕ್ರಿಯಿಸಿದ್ದೇನೆ. ನನ್ನ ಮಾತಿನ ರೀತಿ ಮತ್ತು ನಿಂದನೀಯ ಭಾಷೆಗಾಗಿ ನಾನು ನನ್ನ ಎಲ್ಲಾ ಸ್ನೇಹಿತರು, ನನ್ನ ಕುಟುಂಬ ಮತ್ತು (ಬ್ರಾಹ್ಮಣ) ಸಮಾಜದ ಕ್ಷಮೆಯಾಚಿಸುತ್ತೇನೆ. ಮುಂದೆ ಅಂತಹ ಪರಿಸ್ಥಿತಿ ಬರದಂತೆ ತನ್ನ ಕೋಪವನ್ನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

ಇಂತಹ ವಿಷಯಗಳ ಬಗ್ಗೆ ಮಾತನಾಡುವಾಗ ಸರಿಯಾದ ಪದಗಳನ್ನು ಬಳಸುತ್ತೇನೆ. ನೀವು ನನ್ನನ್ನು ಕ್ಷಮಿಸುವಿರಿ ಎಂದು ಭಾವಿಸುತ್ತೇನೆ" ಎಂದು ಕಶ್ಯಪ್ ಹಿಂದಿಯಲ್ಲಿ ಬರೆದಿದ್ದಾರೆ. ತನ್ನ ಹೇಳಿಕೆಗಾಗಿ ತನ್ನ ಕುಟುಂಬಕ್ಕೆ ಅತ್ಯಾಚಾರ ಹಾಗೂ ಕೊಲೆಯ ಬೆದರಿಕೆ ಬರುತ್ತಿದ್ದ 52 ವರ್ಷದ ಕಶ್ಯಪ್ ಶುಕ್ರವಾರ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ