ನಟಿ ಅಂಜಲಿ ರಾಘವ್ 
ಬಾಲಿವುಡ್

ವೇದಿಕೆಯಲ್ಲೇ ಸೊಂಟ ಮುಟ್ಟಿದ ನಟ: 'ಸಿನಿಮಾ ರಂಗವೇ ಬೇಡ' ಎಂದು ಕಣ್ಣೀರು ಹಾಕಿದ ನಟಿ Anjali Raghav! ಹೇಳಿದ್ದೇನು?

ನಟಿ ಅಂಜಲಿ ರಾಘವ್ ಕೊನೆಗೂ ಘಟನೆ ಕುರಿತು ಮೌನ ಮುರಿದಿದ್ದು ನಟ ಪವನ್ ಸಿಂಗ್ ಕೃತ್ಯವನ್ನು ಖಂಡಿಸಿ, 'ಇನ್ನು ಮುಂದೆ ಭೋಜ್‌ಪುರಿ ಚಿತ್ರರಂಗದಲ್ಲಿ ನಟಿಸುವುದಿಲ್ಲ' ಎಂದು ಘೋಷಣೆ ಮಾಡಿದ್ದಾರೆ.

ಲಖನೌ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಹ ನಟ ಸೊಂಟ ಮುಟ್ಟಿದ ಬಳಿಕ ಮುಜುಗರಕ್ಕೀಡಾಗಿದ್ದ ಭೋಜ್ ಪುರಿ ನಟಿ ಅಂಜಲಿ ರಾಘವ್ (Anjali Raghav) ಕಣ್ಣೀರು ಹಾಕುತ್ತಾ ಸಿನಿಮಾ ರಂಗವನ್ನೇ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭೋಜ್‌ಪುರಿ ನಟ ಪವನ್ ಸಿಂಗ್ ತಮ್ಮ ಸೊಂಟವನ್ನು ಅನುಚಿತವಾಗಿ ಮುಟ್ಟುತ್ತಿರುವ ವಿಡಿಯೋ ವೈರಲ್ ಆದ ಬಳಿಕ ನಟಿ ಅಂಜಲಿ ತೀವ್ರ ಮುಜುಗರಕ್ಕೀಡಾಗಿದ್ದು, ಚಿತ್ರರಂಗವನ್ನೇ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.

ಹರಿಯಾಣವಿ ಸಂಗೀತ ವೀಡಿಯೊ ಆಲ್ಬಂಗಳಲ್ಲಿ ನಟಿಸುತ್ತಾ ಖ್ಯಾತಿ ಗಳಿಸಿದ್ದ ನಟಿ ಅಂಜಲಿ ರಾಘವ್ ಕೊನೆಗೂ ಘಟನೆ ಕುರಿತು ಮೌನ ಮುರಿದಿದ್ದು ನಟ ಪವನ್ ಸಿಂಗ್ ಕೃತ್ಯವನ್ನು ಖಂಡಿಸಿ, 'ಇನ್ನು ಮುಂದೆ ಭೋಜ್‌ಪುರಿ ಚಿತ್ರರಂಗದಲ್ಲಿ ನಟಿಸುವುದಿಲ್ಲ' ಎಂದು ಘೋಷಣೆ ಮಾಡಿದ್ದಾರೆ.

ವಿಡಿಯೋ ಮಾಡಿ ಕಣ್ಣೀರು ಹಾಕಿದ ನಟಿ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗಿನಿಂದ ನಾನು ಸಾಕಷ್ಟು ನೋವು ಅನುಭವಿಸುತ್ತಿದ್ದೇನೆ. ಘಟನೆ ನಡೆಯುವಾಗ ವೇದಿಕೆಯಲ್ಲೇ ಪ್ರಶ್ನಿಸಬಹುದಿತ್ತು ಎಂದು ಕೆಲವರು ನಿಂದಿಸುತ್ತಿದ್ದಾರೆ. ಜನರಿಂದ ನಿರಂತರ ಸಂದೇಶಗಳು ಬರುತ್ತಿವೆ. ಆತನಿಗೆ ಏಕೆ ಕಪಾಳಮೋಕ್ಷ ಮಾಡಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ನನ್ನ ನಗುವನ್ನೂ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

"ಕಳೆದ ಎರಡು ದಿನಗಳಿಂದ ನಾನು ತುಂಬಾ ಚಿಂತಿತಳಾಗಿದ್ದೇನೆ. ನಾನು ಯಾಕೆ ಏನನ್ನೂ ಹೇಳಲಿಲ್ಲ?, ನಾನು ಏಕೆ ಕ್ರಮ ತೆಗೆದುಕೊಳ್ಳಲಿಲ್ಲ?, ನಾನು ಅವನನ್ನು ಏಕೆ ಕಪಾಳಮೋಕ್ಷ ಮಾಡಲಿಲ್ಲ ಎಂದು ಕೇಳುವ ಡಿಎಂಗಳು ನನಗೆ ಬರುತ್ತಲೇ ಇವೆ. ಕೆಲವರು ನನ್ನನ್ನು ದೂಷಿಸುತ್ತಿದ್ದಾರೆ, ಮೀಮ್ಸ್‌ನಲ್ಲಿ 'ಅವಳು ನಗುತ್ತಿದ್ದಳು, ಅದನ್ನು ಆನಂದಿಸುತ್ತಿದ್ದಳು' ಎಂದು ಬರೆಯುತ್ತಿದ್ದಾರೆ. ನನ್ನ ಒಪ್ಪಿಗೆಯಿಲ್ಲದೆ ಯಾರಾದರೂ ನನ್ನನ್ನು ಸಾರ್ವಜನಿಕವಾಗಿ ಮುಟ್ಟಿದರೆ ನಾನು ಸಂತೋಷಪಡುತ್ತೇನೆಯೇ ಅಥವಾ ಆನಂದಿಸುತ್ತೇನೆಯೇ?" ಎಂದು ನಟಿ ಅಂಜಲಿ ಕಣ್ಣೀರು ಹಾಕಿದ್ದಾರೆ.

ಆಗಿದ್ದೇನು?

ವೇದಿಕೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ, ಪವನ್ ತನ್ನ ಸೊಂಟದ ಕಡೆಗೆ ತೋರಿಸುತ್ತಾ, ಅಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದರು. ಆಗ ನಾನು 'ನನ್ನ ಸೀರೆ ಹೊಸದು ಅಂತ ನನಗೆ ಅರ್ಥ ಆಯ್ತು, ಬಹುಶಃ ಕೆಳಭಾಗದಲ್ಲಿರುವ ಟ್ಯಾಗ್ ಕಾಣಿಸುತ್ತಿರಬಹುದು. ಬ್ಲೌಸ್ ಟ್ಯಾಗ್ ಕೂಡ ಕಾಣಿಸುತ್ತಿರಬಹುದು. ನಂತರ ಅದನ್ನು ಸರಿಪಡಿಸಿಕೊಳ್ಳಬಹುದು ಅಂತ ಅಂದುಕೊಂಡು ನಾನು ನಕ್ಕು ಸುಮ್ಮನಾದೆ. ಅದಕ್ಕಾಗಿಯೇ ನಾನು ಮುಗುಳ್ನಕ್ಕು ಪ್ರೇಕ್ಷಕರೊಂದಿಗೆ ಮಾತನಾಡುವುದನ್ನು ಮುಂದುವರಿಸಿದೆ" ಎಂದು ನಟಿ ಅಂಜಲಿ ಸ್ಪಷ್ಟಪಡಿಸಿದ್ದಾರೆ.

"ಕೋಪ ಬಂತು, ಅಳು ಕೂಡ ಬಂತು"

ಅಂತೆಯೇ ಪವನ್ ಮತ್ತೆ ಒತ್ತಾಯಿಸಿದಾಗ, ನಿಜವಾಗಿಯೂ ಏನೋ ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿದ್ದಾಗಿ ಅಂಜಲಿ ನೆನಪಿಸಿಕೊಂಡರು. "ನಂತರ, ನನ್ನ ತಂಡದ ಸದಸ್ಯರನ್ನು ಏನಾದರೂ ಇದೆಯೇ ಎಂದು ನಾನು ಕೇಳಿದಾಗ, ಅವರು ಏನೂ ಇಲ್ಲ ಎಂದು ಹೇಳಿದರು. ಆಗ ನನಗೆ ತುಂಬಾ ಬೇಸರವಾಯಿತು, ನನಗೆ ಕೋಪ ಬಂತು, ಮತ್ತು ಅಳು ಕೂಡ ಬಂತು. ಆದರೆ ಆ ಕ್ಷಣದಲ್ಲಿ, ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ" ಎಂದು ಅಂಜಲಿ ಹೇಳಿದ್ದಾರೆ.

ವೇದಿಕೆಯ ಹಿಂದೆ ಅವನನ್ನು ಪ್ರಶ್ನಿಸಬೇಕು ಎಂದುಕೊಂಡೆ. ಆದರೆ ರೀಲ್‌ಗಳನ್ನು ಮಾಡಿದ ನಂತರ ಪವನ್ ಕಾರ್ಯಕ್ರಮವನ್ನು ತೊರೆದು ಹೊರಟು ಹೋಗಿದ್ದರು. ಮರುದಿನ ಮನೆಗೆ ಹಿಂದಿರುಗುವಷ್ಟರಲ್ಲೇ ವಿಡಿಯೋ ವೈರಲ್ ಆಗಿತ್ತು ಎಂದು ಅಂಜಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ 1,950 ಕೋಟಿ ರೂ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ!

News headlines 19-10-2025 | ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; DK Shivakumar- Kiran Majumdar ನಡುವೆ ನಿಲ್ಲದ ವಾಕ್ಸಮರ

SCROLL FOR NEXT