ರಾಜ್ ನಿಡಿಮೋರು ಜೊತೆಗಿರುವ ಶ್ಯಾಮಲಿ ದೇ 
ಬಾಲಿವುಡ್

ನನ್ನ ಜ್ಯೋತಿಷಿ ಗುರುಗಳಿಗೆ 4 ನೇ ಹಂತದ ಕ್ಯಾನ್ಸರ್ ಇದೆ; ನಿದ್ರೆ ಇಲ್ಲದ ರಾತ್ರಿ ಕಳೆದಿದ್ದೇನೆ: ಕೌತುಕ ಹುಟ್ಟಿಸಿದ ರಾಜ್ ನಿಡಿಮೋರು ಮಾಜಿ ಪತ್ನಿ!

ಡಿಸೆಂಬರ್ 1 ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಒಳಭಾಗದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಸಮಂತಾ- ನಿಡಿಮೋರು ವಿವಾಹವಾಗಿದ್ದರು.

ನಟಿ ಸಮಂತಾ ಪ್ರಭು ಅವರನ್ನು ನಿರ್ದೇಶಕ ರಾಜ್ ನಿಡಿಮೋರು ಮದುವೆಯಾದ ನಂತರ ಅವರ ಮಾಜಿ ಪತ್ನಿ ಶ್ಯಾಮಲಿ ದೇ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ.

ಡಿಸೆಂಬರ್ 1 ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಒಳಭಾಗದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಸಮಂತಾ- ನಿಡಿಮೋರು ವಿವಾಹವಾಗಿದ್ದರು. ಅವರ ವಿವಾಹ ಬಹಿರಂಗವಾದ ನಂತರ ರಾಜ್ ನಿಧಿಮೋರು ಮತ್ತು ಅವರ ಮಾಜಿ ಪತ್ನಿ ಶ್ಯಾಮಲಿ ದೇ ನಡುವಿನ ಪರಸ್ಪರ ಸಂಬಂಧಗಳ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಉಂಟಾಗಿತ್ತು.

ಶ್ಯಾಮಲಿ ದೇ ಅವರು ಮದುವೆಗೂ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ರಹಸ್ಯ ಪೋಸ್ಟ್ ಹಂಚಿಕೊಂಡ ನಂತರ ವದಂತಿಗಳು ಮತ್ತಷ್ಟು ಹೆಚ್ಚಾಗಿತ್ತು.

ಗುರುವಾರ ಶ್ಯಾಮಲಿ ದೇ ಇನ್‌ಸ್ಟಾಗ್ರಾಮ್ ನಲ್ಲಿ ಸರಣಿ ಪೋಸ್ಟ್ ಮಾಡಿದ್ದು, ತಮ್ಮ ಅಗತ್ಯದ ವೇಳೆ ಸ್ಪಂದಿಸಿದ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ನನ್ನ ಜ್ಯೋತಿಷಿ ಗುರುಗಳಿಗೆ 4 ನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದು ಅವರನ್ನು ತುಂಬಾ ಅಸಮಾಧಾನಗೊಳಿಸಿರುವುದಾಗಿ ಉಲ್ಲೇಖಿಸಿದ್ದಾರೆ.

ನಾನು ನಿದ್ದೆಯಿಲ್ಲದ ರಾತ್ರಿಯನ್ನು ಅತ್ತಿತ್ತ ತಿರುಗಿಸುತ್ತಾ, ಚರ್ಚಿಸುತ್ತಾ ಕಳೆದೆ. ನನಗೆ ಬರುತ್ತಿರುವ ಎಲ್ಲಾ ಒಳ್ಳೆಯದನ್ನು ಒಪ್ಪಿಕೊಳ್ಳದಿರುವುದು ಕೃತಜ್ಞತೆಯಿಲ್ಲದ ಮತ್ತು ಕ್ರೂರತನ ಎಂದು ಅರಿತುಕೊಂಡೆ. ನಾನು ಹಲವು ವರ್ಷಗಳಿಂದ ಅವಳಿ ಹೃದಯಗಳಿಗಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೇನೆ. ಭೂಮಿ ತಾಯಿ ಮತ್ತು ಎಲ್ಲಾ ವ್ಯಕ್ತಿಗಳು ಮತ್ತು ಜೀವಿಗಳನ್ನು ಶಾಂತಿ, ಪ್ರೀತಿ, ಕ್ಷಮೆ, ಭರವಸೆ, ಬೆಳಕು, ಸಂತೋಷ, ಪ್ರೀತಿಯ ದಯೆ, ಸದ್ಭಾವನೆ ಮತ್ತು ಒಳ್ಳೆಯದನ್ನು ಮಾಡುವ ಇಚ್ಛೆಯಿಂದ ಆಶೀರ್ವದಿಸುವುದನ್ನು ಧ್ಯಾನ್ಯ ಒಳಗೊಂಡಿರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

"ಒಬ್ಬ ಸ್ನೇಹಿತ ನನಗೆ ನೆನಪಿಸಿದಂತೆ, ಈಗ ನಾನು ಅದನ್ನು ಪಡೆಬೇಕಾಗಿದೆ. ನನಗೆ ಯಾವುದೇ ತಂಡವಿಲ್ಲ, ಪಿಆರ್ ಇಲ್ಲ, ಸಿಬ್ಬಂದಿ ಇಲ್ಲ ಅಥವಾ ನನ್ನ ಪುಟವನ್ನು ನಿರ್ವಹಿಸುವ ಸಹಚರರು ಇಲ್ಲ ಎಂದಿದ್ದಾರೆ. ನವೆಂಬರ್ 9 ರಂದು, ನನ್ನ ಜ್ಯೋತಿಷಿ ಗುರುಗಳಿಗೆ ಹಂತ 4 ಕ್ಯಾನ್ಸರ್ ಇರುವುದು ಪತ್ತೆಯಾಯಿತು. ದುರದೃಷ್ಟವಶಾತ್ ಇದು ಮೆದುಳು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಹರಡಿದೆ. ನನ್ನ ಗಮನ ಈಗ ಎಲ್ಲಿದೆ ಎಂಬುದನ್ನು ನೀವೆಲ್ಲರೂ ಅರ್ಥಮಾಡಿಕೊಳ್ಳುತ್ತೀರಿ ಎಂದು ನನಗೆ ಖಚಿತವಾಗಿದೆ. ಆದ್ದರಿಂದ, ಒಂದು ವಿನಮ್ರ ವಿನಂತಿ: ದಯವಿಟ್ಟು ಈ ಜಾಗವನ್ನು ಸ್ವಚ್ಛವಾಗಿಡಿ. ಧನ್ಯವಾದಗಳು... ಧನ್ಯವಾದಗಳು... ಧನ್ಯವಾದಗಳು... ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಜೀವಿಗೂ ಉತ್ತಮ ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ಆಧ್ಯಾತ್ಮಿಕತೆ ಸಿಗಲಿ ಎಂದು ಶ್ಯಾಮಲಿ ಮುಗಿಸಿದ್ದಾರೆ.

ಸಮಂತಾ ಹಾಗೂ ರಾಜ್ ನಿಡಿಮೋರು ವಿವಾಹ ಘೋಷಣೆಯ ನಂತರ ಮನುಷ್ಯ ಮತ್ತು ಬ್ರಹ್ಮಾಂಡದ ನಡುವಿನ ವಿಶ್ವ ಸಂಪರ್ಕದ ಬಗ್ಗೆ ಚಿಂತಿಸುವ ಪೋಸ್ಟ್ ಅನ್ನು ಶ್ಯಾಮಲಿ ದೇ ಹಂಚಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರ ಬದಲಿಸಿದ ಅಮೆರಿಕ: ಇಂಡೋ-ಪೆಸಿಫಿಕ್‌ಗೆ ಮೊದಲ ಆದ್ಯತೆ; ಯುರೋಪ್‌ ಅನ್ನು ದೂರವಿಟ್ಟ ಟ್ರಂಪ್!

T20 World cup: ಬಾಂಗ್ಲಾವನ್ನು ಹೊರಗಿಟ್ಟಿದ್ದು 'ಅನ್ಯಾಯ', ಟೂರ್ನಿಯಲ್ಲಿ ನಾವು ಆಡಲ್ಲ?; ICCಗೆ ಪಾಕಿಸ್ತಾನ ಧಮ್ಕಿ!

ಮೆಜೆಸ್ಟಿಕ್​​​​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್!

ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ತಾರತಮ್ಯ: ವಿಶ್ವಸಂಸ್ಥೆ ಕಳವಳ

ನಾನು ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿಲ್ಲ; ಆಪರೇಷನ್ ಸಿಂಧೂರ್ ನಿಲುವಿನ ಬಗ್ಗೆ ವಿಷಾದವಿಲ್ಲ: ಶಶಿ ತರೂರ್; Video

SCROLL FOR NEXT