Dhurandhar box office DAY 1: Ranveer Singh's spy-thriller opens strong across India, mints Rs 28.60 cr 
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಅಬ್ಬರ: ಎರಡೇ ದಿನಕ್ಕೆ ರಣವೀರ್ ಸಿಂಗ್ ನಟನೆಯ ಚಿತ್ರ ಗಳಿಸಿದ್ದೆಷ್ಟು?

ಚಿತ್ರಕ್ಕೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಪ್ರದರ್ಶನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಶೀಘ್ರದಲ್ಲೇ 100 ಕೋಟಿ ರೂ.ಗಳ ಗಡಿಯನ್ನು ದಾಟುವ ಸಾಧ್ಯತೆ ಇದೆ.

ನವದೆಹಲಿ: ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಮೆಚ್ಚುಗೆಗೆ ಪಾತ್ರವಾಗಿದ್ದು, 27 ಕೋಟಿ ರೂಪಾಯಿಗಳ ಆರಂಭಿಕ ಗಳಿಕೆಯೊಂದಿಗೆ ಉತ್ತಮ ಆರಂಭ ಪಡೆದ ಚಿತ್ರ ಇದೀಗ ಮೊದಲ ಶನಿವಾರ ಮತ್ತಷ್ಟು ಬೆಳವಣಿಗೆ ಕಂಡಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಧುರಂಧರ್ ಚಿತ್ರ ಬಿಡುಗಡೆಯಾದ ಎರಡನೇ ದಿನದಂದು 31 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಒಟ್ಟು 58 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ಶನಿವಾರ ಒಟ್ಟಾರೆಯಾಗಿ ಥಿಯೇಟರ್‌ನಲ್ಲಿ ಶೇ 39.63ರಷ್ಟು ಜನರು ಈ ಆ್ಯಕ್ಷನ್ ಡ್ರಾಮಾವನ್ನು ವೀಕ್ಷಿಸಿದ್ದಾರೆ. ಬೆಳಗಿನ ಪ್ರದರ್ಶನಗಳು ಶೇ 17.26 ರಷ್ಟು, ಮಧ್ಯಾಹ್ನದ ಪ್ರದರ್ಶನಗಳು ಶೇ 35.46 ರಷ್ಟು, ಸಂಜೆ ಪ್ರದರ್ಶನಗಳು ಶೇ 42.65 ರಷ್ಟು ಮತ್ತು ರಾತ್ರಿ ಪ್ರದರ್ಶನಗಳು ಶೇ 63.16 ರಷ್ಟು ವೀಕ್ಷಣೆ ಪಡೆದಿವೆ.

ಪ್ರಮುಖ ನಗರಗಳ ಪೈಕಿ ಪುಣೆಯಲ್ಲಿ ಶೇ 49.50 ರಷ್ಟು ಜನರು ಚಿತ್ರವನ್ನು ವೀಕ್ಷಿಸಿದ್ದಾರೆ. ಚಿತ್ರಕ್ಕೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಪ್ರದರ್ಶನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಶೀಘ್ರದಲ್ಲೇ 100 ಕೋಟಿ ರೂ.ಗಳ ಗಡಿಯನ್ನು ದಾಟುವ ಸಾಧ್ಯತೆ ಇದೆ.

ರಣವೀರ್ ಸಿಂಗ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ಬಿಡುಗಡೆಯಾದಾಗ 11.1 ಕೋಟಿ ರೂ. ಆರಂಭಿಕ ಗಳಿಕೆ ಕಂಡಿತ್ತು. ಎರಡನೇ ದಿನ 16.05 ಕೋಟಿ ರೂ.ಗಳನ್ನು ಸಂಗ್ರಹಿಸಿತು ಮತ್ತು ಭಾರತದಲ್ಲಿ ಸುಮಾರು 182 ಕೋಟಿ ರೂ.ಗಳನ್ನು ಗಳಿಸಿತು.

ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ವಾರ್ 2 ಮತ್ತು ವಿಕ್ಕಿ ಕೌಶಲ್ ನಟನೆಯ ಛಾವಾ ನಂತರ ಇದು ವರ್ಷದ ಮೂರನೇ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಆರ್ ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಅಧಿವೇಶನ: ವಿಧಾಸಭೆ ಕಲಾಪ ಆರಂಭ; ಸಾಲುಮರದ ತಿಮ್ಮಕ್ಕ ಸೇರಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ

7ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು; ಬೆಂಗಳೂರಿನಲ್ಲಿ 127 ವಿಮಾನ ರದ್ದು; ಮುಂಬೈ, ದೆಹಲಿಯಲ್ಲೂ ಇದೆ ಕಥೆ!

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

ಕರ್ನಾಟಕದ 2.5 ಲಕ್ಷ ಹುದ್ದೆಗಳು ಖಾಲಿ: ಹಣಕಾಸಿನ ಒತ್ತಡ, ಕಾನೂನು ಅಡೆತಡೆಗಳು.. ಹೆಚ್ಚುತ್ತಿರುವ ಯುವಜನರ ಕೋಪ!

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರ-ವಿಪಕ್ಷಗಳ ನಡುವೆ ಜಟಾಪಟಿ ಸಾಧ್ಯತೆ, ಅವಿಶ್ವಾಸ ನಿರ್ಣಯ ಮಂಡಿಸಲು BJP ಮುಂದು..!

SCROLL FOR NEXT