ನಟ ರಣ್ವೀರ್ ಸಿಂಗ್ 
ಬಾಲಿವುಡ್

ಮಾರ್ಚ್ 2026 ರಲ್ಲಿ 'ಧುರಂಧರ್ 2' ಐದು ಭಾಷೆಗಳಲ್ಲಿ ಬಿಡುಗಡೆ

ನಿರ್ದೇಶಕ ಆದಿತ್ಯ ಧಾರ್ ಅವರು, ಧುರಂಧರ್ 2 ಚಿತ್ರವನ್ನು ಮಾರ್ಚ್ 19 ರಂದು ಈದ್ ಹಬ್ಬದಂದು ಬಿಡುಗಡೆ ಮಾಡುವುದಾಗಿ ಬುಧವಾರ ಘೋಷಿಸಿದ್ದಾರೆ.

ಬಾಲಿವುಡ್ ನಟ ರಣ್ವೀರ್ ಸಿಂಗ್ ನಟನೆಯ 'ಧುರಂಧರ್' ಬಾಕ್ಸಾಫೀಸ್‌ ಕೊಳ್ಳೆ ಹೊಡೆದು ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ.

‘ಧರುಂಧರ್’ ಸಿನಿಮಾ ಡಿಸೆಂಬರ್ 5 ರಂದು ಕೇವಲ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಇದೀಗ ಸಿನಿಮಾಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ನಿರ್ದೇಶಕ ಆದಿತ್ಯ ಧಾರ್ ಅವರು, ಧುರಂಧರ್ 2 ಚಿತ್ರವನ್ನು ಮಾರ್ಚ್ 19 ರಂದು ಈದ್ ಹಬ್ಬದಂದು ಬಿಡುಗಡೆ ಮಾಡುವುದಾಗಿ ಬುಧವಾರ ಘೋಷಿಸಿದ್ದಾರೆ.

ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಖ್ಯಾತಿಯ ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಸ್ಪೈ ಥ್ರಿಲ್ಲರ್ ಆಗಿದ್ದು, ರಣ್ವೀರ್ ಸಿಂಗ್ ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅಕ್ಷನ್ ಖನ್ನ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾನಲ್ಲಿ ಮಾಧವನ್ ಸಹ ನಟಿಸಿದ್ದಾರೆ.

ಡಿಸೆಂಬರ್ 5 ರಂದು ಬಿಡುಗಡೆಯಾದ ‘ಧರುಂಧರ್’ಭಾರತದಲ್ಲಿ 597 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಮತ್ತು ಇದುವರೆಗೆ ಅತಿ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳಲ್ಲಿ ಟಾಪ್ 10 ಸ್ಥಾನವನ್ನು ಪಡೆದಿದೆ.

ಧುರಂಧರ್ 2 ಅನ್ನು ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ತಯಾರಕರು ಅಧಿಕೃತವಾಗಿ ಘೋಷಿಸಿದ್ದಾರೆ, ಇದು ಐದು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮತ್ತು ಜಾಗತಿಕವಾಗಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ನಡೆ 'ಹೇಡಿತನದ ಪರಮಾವಧಿ'; ನರವಾಣೆ ಪುಸ್ತಕ 56 ಇಂಚಿನ ಎದೆಯೊಳಗಿನ ಪುಕ್ಕಲುತನ ಬಯಲು ಮಾಡಿದೆ!

ರಕ್ಷಣಾ ಕೈಗಾರಿಕಾ ಸಹಕಾರವನ್ನು ಹೆಚ್ಚಿಸುವ ಜಂಟಿ ಘೋಷಣೆಗೆ ಭಾರತ ಮತ್ತು ಗ್ರೀಸ್ ಸಹಿ!

BCCI ಆಟಗಾರರ ಒಪ್ಪಂದ: ಇಶಾನ್ ಕಿಶನ್, ಮಹಮದ್ ಶಮಿ, ಶ್ರೇಯಾಂಕ ಪಾಟೀಲ್ ಸೇರಿ 8 ಮಂದಿಗೆ ಗೇಟ್ ಪಾಸ್!

ಟಿ20 ವಿಶ್ವಕಪ್ 2026: ಭರ್ಜರಿ ಬ್ಯಾಟಿಂಗ್, ಕೆನಡಾ ವಿರುದ್ಧ ದಕ್ಷಿಣ ಆಫ್ರಿಕಾಗೆ 57 ರನ್ ಜಯ

ಸಣ್ಣ ಉದ್ದಿಮೆದಾರರಿಗೆ ಸಿಹಿಸುದ್ದಿ.. ಮೇಲಾಧಾರ ರಹಿತ ಸಾಲ ದ್ವಿಗುಣ: RBI ಘೋಷಣೆ!

SCROLL FOR NEXT