ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಬ್ರೇಕಪ್‌ನಿಂದ ಹೊರಬಂದು ಜೀವನದಲ್ಲಿ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಸಲಹೆಯನ್ನು ಹಂಚಿಕೊಂಡಿದ್ದಾರೆ.
ಅವರ ಸೋದರಳಿಯ ಅರ್ಹಾನ್ ಖಾನ್ ಅವರ ಪಾಡ್‌ಕಾಸ್ಟ್ ಡಂಬ್ ಬಿರಿಯಾನಿಯಲ್ಲಿ ಮಾತನಾಡುವಾಗ, ಸಲ್ಮಾನ್ ಪ್ರೀತಿ, ವೃತ್ತಿ ಮತ್ತು ಕುಟುಂಬದ ಕುರಿತು ತಮ್ಮ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
'ನಾನು ನನ್ನ ಸೋದರಳಿಯನಿಗೆ ಸಲಹೆ ನೀಡುತ್ತಿದ್ದೇನೆ. ಇದು ನಿಮಗೂ ಸೂಕ್ತ ಅನ್ನಿಸಿದರೆ ಇದನ್ನು ಯುವ ಪೀಳಿಗೆಗೆ ಎಂದೇ ನಾನು ಭಾವಿಸುತ್ತೇನೆ. ನೀವು ನಿಜವಾಗಿಯೂ ಏನನ್ನಾದರೂ ಬಯಸಿದರೆ, ಇತರರ ಆಯ್ಕೆಗಳನ್ನು ನೋಡುತ್ತಾ ಸಮಯ ವ್ಯರ್ಥ ಮಾಡದಿರಿ. ನೀವು ಏನಂದುಕೊಂಡಿದ್ದೀರೋ ಅದರತ್ತ ಗಮನಹರಿಸಿ' ಎಂದರು.
'ನಿನ್ನ ಕಾಲು ನೋಯುತ್ತಿದ್ದರೆ, ತಲೆ ನೋಯುತ್ತಿದ್ದರೆ, ನಿದ್ದೆ ಮಾಡಿಲ್ಲದಿದ್ದರೆ.. ನೀವು ಸುಮ್ಮನೆ ಅದರತ್ತ ಗಮನ ವಹಿಸಿ. ಗೆಳತಿಯೊಂದಿಗೆ ಬ್ರೇಕಪ್ ಆದಾಗ ಮತ್ತು ನಿಮ್ಮನ್ನು ಬಿಟ್ಟು ಹೋಗುವಾಗ, ಓಕೆ ಹೋಗು. ಬೈ ಬೈ ಎಂದು ಹೇಳಿ ಕಳುಹಿಸಿ. ನೋವಿನ ಅಥವಾ ಅಹಿತಕರವಾದ ಸಂದರ್ಭವು ಎದುರಾದರೆ, ಅದರಿಂದ ಶೀಘ್ರವೇ ಹೊರಬನ್ನಿ. ನಂತರ ಕೋಣೆಗೆ ಹೋಗಿ, ಅತ್ತುಬಿಡಿ, ನಂತರ ಅದನ್ನು ಮರೆತುಬಿಡಿ ಮತ್ತು ಹೊರಗೆ ಬನ್ನಿ. ನಂತರ ಏನಾಯಿತು, ಹೇಗೆ ನಡೆಯುತ್ತಿದೆ ಎಂದು ಚಿಲ್ ಆಗಿ' ಎಂದಿದ್ದಾರೆ.
ತಪ್ಪು ಮಾಡದವರು ಯಾರೂ ಇಲ್ಲ ಎಂದಿರುವ ಸಲ್ಮಾನ್ ಶುದ್ಧ ಹೃದಯದಿಂದ ಕ್ಷಮೆ ಕೇಳಬೇಕು ಎಂದಿದ್ದಾರೆ.
'ತಪ್ಪುಗಳು ಸಂಭವಿಸುತ್ತವೆ. ಆದರೆ, ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬಾರದು. ತಪ್ಪು ಮೊದಲ ಬಾರಿಗೆ ಸಂಭವಿಸುತ್ತದೆ ಮತ್ತು ತಪ್ಪು ಸಂಭವಿಸಿದೆ ಎಂದು ನೀವು ತಿಳಿದ ತಕ್ಷಣವೇ ಶುದ್ಧ ಹೃದಯದಿಂದ ಅವರ ಬಳಿ ಕ್ಷಮೆಯಾಚಿಸಿ. ಧನ್ಯವಾದಗಳು ಮತ್ತು ಕ್ಷಮಿಸಿ ಎನ್ನುವ ಪದಗಳು ಸ್ವಯಂಪ್ರೇರಿತವಾಗಿ ಹೊರಬರಬೇಕು' ಎಂದು ಅವರು ಹೇಳಿದರು.
'ಕುಟುಂಬದ ಮುಖ್ಯಸ್ಥನಿರುತ್ತಾರೆ ಮತ್ತು ಕುಟುಂಬದ ಮುಖ್ಯಸ್ಥನನ್ನು ಗೌರವಿಸಬೇಕು. ಏಕೆಂದರೆ ನೀವು ನಿಮ್ಮ ಜೀವನದಲ್ಲಿ ವಿಫಲರಾಗುವುದು ಅಥವಾ ನಿಮ್ಮ ಜೀವನದಲ್ಲಿ ಕುಂದುವುದನ್ನು ಯಾರೂ ಬಯಸುವುದಿಲ್ಲ. ನಾನು ಮತ್ತು ನನ್ನ ತಂದೆಯು ಜೀವನದಲ್ಲಿ ಈ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ನೀವು ಕೂಡ ಇದನ್ನು ಮಾಡಬೇಡಿ' ಎಂದಿದ್ದಾರೆ.
ಇದಕ್ಕೂ ಮೊದಲು, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಎಪಿಸೋಡ್ ಟೀಸರ್ ಅನ್ನು ಹಂಚಿಕೊಂಡ ಸಲ್ಮಾನ್ ಖಾನ್, 'ನಾನು ಒಂದು ವರ್ಷದ ಹಿಂದೆ ಹುಡುಗನೊಂದಿಗೆ ಮಾತನಾಡಿದ್ದೇನೆ. ಆತ ನನ್ನೆಲ್ಲ ಸಲಹೆಗಳನ್ನು ನೆನಪಿಟ್ಟುಕೊಂಡಿದ್ದಾನೆಯೋ ಎಂಬುದು ನನಗೆ ಖಚಿತವಿಲ್ಲ. ನನ್ನ ಮೊದಲ ಪಾಡ್‌ಕ್ಯಾಸ್ಟ್ ಕಾಣಿಸಿಕೊಂಡ @dumbbiryani ಶೀಘ್ರದಲ್ಲೇ ಹೊರಬರುತ್ತದೆ' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.