ಆಲಿಯಾ ಭಟ್, ಮಾಜಿ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ (ಸಂಗ್ರಹ ಚಿತ್ರ) 
ಬಾಲಿವುಡ್

77 ಲಕ್ಷ ರೂ ವಂಚನೆ ಆರೋಪ: ನಟಿ ಆಲಿಯಾ ಭಟ್ ಮಾಜಿ ಸಹಾಯಕಿ ಬಂಧನ

ಆಲಿಯಾ ಅವರ ಸಹಿಯನ್ನು ನಕಲು ಮಾಡಿ ತಾನು ಸಹಿ ಹಾಕಿ ಹಣಕಾಸು ವಂಚನೆ ಮಾಡುತ್ತಿದ್ದರು ಎಂದು ದೂರು ನೀಡಲಾಗಿತ್ತು.

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮಾಜಿ ಆಪ್ತ ಸಹಾಯಕಿಯನ್ನು ವಂಚನೆ ಆರೋಪದಲ್ಲಿ ಮುಂಬೈಯ ಜುಹು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟಿ ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಹಣಕಾಸು ವ್ಯವಹಾರದಲ್ಲಿ ವಂಚನೆ ಮಾಡಿದ ಆರೋಪದ ಮೇಲೆ 5 ತಿಂಗಳ ಹಿಂದೆ ನೀಡಿದ್ದ ದೂರಿನ ನಂತರ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆಲಿಯಾ ಭಟ್ ಅವರ ನಿರ್ಮಾಣ ಸಂಸ್ಥೆಗೆ 77 ಲಕ್ಷ ರೂಪಾಯಿ ಹಣಕಾಸು ವಂಚನೆ ಮಾಡಿರುವ ಆರೋಪದಲ್ಲಿ ಆಲಿಯಾರ ಮಾಜಿ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ (32ವ) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ವೇದಿಕಾ ಪ್ರಕಾಶ್ ಶೆಟ್ಟಿ, ಆಲಿಯಾ ಭಟ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. 2022 ರಿಂದ 2024 ರ ಅವಧಿಯಲ್ಲಿ ವೇದಿಕಾ ಪ್ರಕಾಶ್ ಶೆಟ್ಟಿ ಅವರು ಆಲಿಯಾರ ಖಾಸಗಿ ಹಾಗೂ ಆಲಿಯಾರ ಎಟರ್ನಲ್ ಸನ್​​ಶೈನ್ ನಿರ್ಮಾಣ ಸಂಸ್ಥೆಗೆ 76.9 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

ಆಲಿಯಾ ಅವರ ಸಹಿಯನ್ನು ನಕಲು ಮಾಡಿ ತಾನು ಸಹಿ ಹಾಕಿ ಹಣಕಾಸು ವಂಚನೆ ಮಾಡುತ್ತಿದ್ದರು ಎಂದು ದೂರು ನೀಡಲಾಗಿತ್ತು.

2021 ರಿಂದ 2024ರ ವರೆಗೆ ವೇದಿಕಾ, ಆಲಿಯಾ ಭಟ್ ಅವರ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಇದೇ ಅವಧಿಯಲ್ಲಿ ಅವರು ಆಲಿಯಾ ಭಟ್​ರ ಶೂಟಿಂಗ್ ಡೇಟ್ಸ್ ಮತ್ತು ಕೆಲ ಹಣಕಾಸು ದಾಖಲೆಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಜೊತೆಗೆ ಅವರ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್ ಶೈನ್ ನ ಹಣಕಾಸು ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದರು.

ಘಟನೆ ಬೆಳಕಿಗೆ ಬರುತ್ತಲೇ ವೇದಿಕಾ ಪರಾರಿ ಆಗಿದ್ದು ಬೆಂಗಳೂರಿನಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಸೋನಿ ರಜ್ದಾನ್ ಅವರು ದೂರು ನೀಡಿದ ಐದು ತಿಂಗಳ ಬಳಿಕ ಇತ್ತೀಚೆಗಷ್ಟೆ ವೇದಿಕಾರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಜುಲೈ 10ರ ವರೆಗೆ ಪೊಲೀಸರ ವಶಕ್ಕೆ ನೀಡಿದೆ.

ಆಲಿಯಾ ಭಟ್ ಅವರು ತಮ್ಮ ಎಟರ್ನಲ್ ಸನ್​ಶೈನ್ ಪ್ರೊಡಕ್ಷನ್ ಸಂಸ್ಥೆಯಿಂದ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಟನೆಯ ‘ಡಾರ್ಲಿಂಗ್ಸ್’, ‘ಜಿಗ್ರಾ’ ಸೇರಿದಂತೆ ಇನ್ನೂ ಕೆಲವಾರು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ‘ಲವ್ ಆಂಡ್ ವಾರ್’ ಮತ್ತು ಅಲ್ಫಾ ಚಿತ್ರಗಳಲ್ಲಿ ಪತಿ ರಣ್​ಬೀರ್ ಕಪೂರ್ ಜೊತೆಗೆ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI ಇಂಪ್ಯಾಕ್ಟ್ ಶೃಂಗಸಭೆ ಟಾರ್ಗೆಟ್: ವಿದೇಶಿಗರಿಂದ ದಾಳಿ ಸಾಧ್ಯತೆ, ಗುಪ್ತಚರ ವರದಿ ಬೆನ್ನಲ್ಲೇ G20 ಗ್ರೇಡ್ ಸೈಬರ್ ಭದ್ರತಾ ವ್ಯವಸ್ಥೆ!

'ಕರಾವಳಿ' ಹೂಡಿಕೆ ವಿವಾದ: ಪ್ರಿಯಾಂಕ್ ಖರ್ಗೆ ಸಹಜವಾಗಿ ಹೇಳಿದ್ದಾರೆ, ಆದರೆ ದಕ್ಷಿಣ ಕನ್ನಡ ಬದಲಾಗುತ್ತಿದೆ; ಪರಮೇಶ್ವರ್

T20 World Cup: Super 8 ಪ್ರವೇಶಿಸಿ ಜಿಂಬಾಬ್ವೆ ಇತಿಹಾಸ ಸೃಷ್ಟಿ; 17 ವರ್ಷಗಳ ನಂತರ Australia ಟೂರ್ನಿನಿಂದ ಔಟ್!

News wrap of the day 17-02-2026| Muda case: CS ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ, ಆಡಿಯೋ ಬಿಡುಗಡೆ; ನಾಯಿ, ನಾಯಕತ್ವ: ಮಹದೇವಪ್ಪ ಹೇಳಿಕೆಗೆ DK Suresh ಪ್ರತಿಕ್ರಿಯೆ ಏನು?

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ: ಅಶ್ವಿನಿ ವೈಷ್ಣವ್

SCROLL FOR NEXT