ದೀಪಿಕಾ ಪಡುಕೋಣೆ 
ಬಾಲಿವುಡ್

ಸೆಟ್‌ನಲ್ಲಿ ಘರ್ಷಣೆ: 'ಸ್ಪಿರಿಟ್' ನಂತರ ಪ್ರಭಾಸ್ ನಟನೆಯ 'ಕಲ್ಕಿ 2' ಚಿತ್ರದಿಂದಲೂ ದೀಪಿಕಾ ಪಡುಕೋಣೆ ಔಟ್?

'ಕಲ್ಕಿ 2' ಚಿತ್ರದ ನಿರ್ಮಾಪಕರು ಈಗ ಅವರನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದ್ದು, ನಟಿ ಅಥವಾ ನಿರ್ಮಾಪಕರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ನವದೆಹಲಿ: ಇತ್ತೀಚೆಗಷ್ಟೇ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇದೀಗ ತಮ್ಮ ವೃತ್ತಿಜೀವನದಲ್ಲಿ ಹಿನ್ನಡೆ ಉಂಟಾಗಿದೆ ಎಂದು ವರದಿಯಾಗಿದೆ. ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರದಿಂದ ನಟಿಯನ್ನು 'ಕೈಬಿಟ್ಟ' ನಂತರ, ಪ್ರಭಾಸ್ ನಟನೆಯ 'ಕಲ್ಕಿ 2' ಚಿತ್ರದಿಂದಲೂ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

Bollywood.mobi ವರದಿ ಪ್ರಕಾರ, ತಾಯಿಯಾದ ನಂತರ 'ಕೆಲಸದ ಅವಧಿಯನ್ನು ಕಡಿಮೆ' ಮಾಡುವಂತೆ ದೀಪಿಕಾ ಅವರು ವಿನಂತಿ ಮಾಡಿರುವುದು 'ಸೆಟ್‌ಗಳಲ್ಲಿ ಘರ್ಷಣೆ'ಗೆ ಕಾರಣವಾಗಿದೆ ಎಂದು ವರದಿಯಾಗಿದೆ.

'ಕಲ್ಕಿ 2' ಚಿತ್ರದ ನಿರ್ಮಾಪಕರು ಈಗ ಅವರನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದ್ದು, ನಟಿ ಅಥವಾ ನಿರ್ಮಾಪಕರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಈ ಹಿಂದೆ, ಸಂಭಾವನೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಮತ್ತು ವೃತ್ತಿಪರವಲ್ಲದ ನಡವಳಿಕೆಯಿಂದಾಗಿ ದೀಪಿಕಾ ಪಡುಕೋಣೆ ಅವರನ್ನು ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರದಿಂದ ಕೈಬಿಡಲಾಗಿತ್ತು.

ದೀಪಿಕಾ ಪಡುಕೋಣೆ 'ಸ್ಪಿರಿಟ್' ಸಿನಿಮಾಗಾಗಿ ದಿನಕ್ಕೆ 6 ಗಂಟೆಗಳಿಗಿಂತ ಹೆಚ್ಚು ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. ಇದು ಸಂದೀಪ್ ರೆಡ್ಡಿ ವಂಗಾ ಅವರ ಆಘಾತಕ್ಕೆ ಕಾರಣವಾಯಿತು. ಅಲ್ಲದೆ, ನಟಿ ತಮ್ಮ ಸಂಸ್ಥೆಯ ಮೂಲಕ ಒಪ್ಪಂದಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು. ಒಂದು ವೇಳೆ ಚಿತ್ರೀಕರಣ 100 ದಿನಗಳನ್ನು ಮೀರಿದರೆ, ಪ್ರತಿ ದಿನದ ಚಿತ್ರೀಕರಣಕ್ಕೂ ಹೆಚ್ಚುವರಿ ಹಣವನ್ನು ಪಾವತಿಸಬೇಕು' ಎಂದು ದೀಪಿಕಾ ಬೇಡಿಕೆ ಇಟ್ಟಿದ್ದರು ಎಂದು ಬಾಲಿವುಡ್ ಹಂಗಾಮಾಗೆ ಆಪ್ತ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ 613 ಕೋಟಿ ರೂ. ಬಾಡಿಗೆ; ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಹೀಗಿವೆ

ಬಾಗಲಕೋಟೆ: ಕಟ್ಟೆ ಹೊಡೆದ ಕಬ್ಬು ಬೆಳೆಗಾರರ ಆಕ್ರೋಶದ ಕಿಚ್ಚು; 100ಕ್ಕೂ ಹೆಚ್ಚು ಟ್ರಾಲಿಗಳಿಗೆ ಬೆಂಕಿ, Video!

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

2026ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಸಂಪುಟ ಅನುಮೋದನೆ; ಒಟ್ಟು ಎಷ್ಟು ದಿನ ರಜೆ ಗೊತ್ತಾ?

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

SCROLL FOR NEXT