ನವದೆಹಲಿ: ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಅವರಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ವಿಚ್ಛೇದನ ನೀಡಿರುವುದು ಹಳೆಯ ವಿಚಾರ. ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ(ಮಾರ್ಚ್ 13) ಅಮೀರ್ ಖಾನ್ ತಮ್ಮ ಹೊಸ ಪ್ರೇಯಸಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ ನಂತರ ಇದೀಗ ಅಮೀರ್ ಖಾನ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಮೂಲತಃ ಬೆಂಗಳೂರಿನವರಾದ ಗೌರಿ ಸದ್ಯ ಅಣೀರ್ ಖಾನ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬಾಲಿವುಡ್ ಅಭಿಮಾನಿಯಲ್ಲ ಮತ್ತು ಅಮೀರ್ ಖಾನ್ ಅವರ ಎರಡು ಚಿತ್ರಗಳನ್ನು ಮಾತ್ರ ನೋಡಿದ್ದಾರೆ.
ಇದೀಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೌರಿ, ತನ್ನ ಸಂಗಾತಿಯಾಗುವವರಲ್ಲಿ ಏನನ್ನು ಹುಡುಕುತ್ತಿದ್ದರು ಮತ್ತು ಅಮೀರ್ ಖಾನ್ ಅವರನ್ನು ಏಕೆ ಆರಿಸಿಕೊಂಡರು ಎಂಬುದರ ಕುರಿತು ಮಾತನಾಡಿದ್ದಾರೆ. 'ನನಗೆ ದಯೆಯುಳ್ಳ, ಸಂಭಾವಿತ ಮತ್ತು ಕಾಳಜಿಯುಳ್ಳ ವ್ಯಕ್ತಿ ಬೇಕಾಗಿದ್ದರು' ಎಂದು ಹೇಳಿದ್ದಾರೆ. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಅಮೀರ್, 'ಮತ್ತು ಇಷ್ಟೆಲ್ಲ ಗುಣಗಳು ಕಂಡ ನಂತರ, ನೀವು ನನ್ನನ್ನು ಆರಿಸಿಕೊಂಡಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ.
ಅಮೀರ್ ಖಾನ್ ಮತ್ತು ಗೌರಿ ಅವರದ್ದು 25 ವರ್ಷಗಳ ಪರಿಚಯ. ಆದರೆ, ಇಬ್ಬರು ಸಂಪರ್ಕದಲ್ಲಿರಲಿಲ್ಲ. ಕೇವಲ ಎರಡು ವರ್ಷಗಳ ಹಿಂದಷ್ಟೇ ಪ್ರೀತಿಯಲ್ಲಿ ಬಿದ್ದಿದ್ದಾರೆ. 'ನಾನು ಶಾಂತವಾಗಿರಬಲ್ಲ, ನನಗೆ ಶಾಂತಿ ನೀಡುವ ವ್ಯಕ್ತಿಯನ್ನು ಹುಡುಕುತ್ತಿದ್ದೆ ಮತ್ತು ಅವರು ಅಲ್ಲಿದ್ದರು' ಎಂದು ಆಮಿರ್ ಹಂಚಿಕೊಂಡಿದ್ದಾರೆ.
ಗೌರಿ ಬೆಂಗಳೂರಿನಲ್ಲಿ ಬೆಳೆದಿದ್ದು, ಅವರಿಗೆ ವಿವಿಧ ರೀತಿಯ ಚಲನಚಿತ್ರಗಳು ಮತ್ತು ಕಲೆಗಳ ಪರಿಚಯವಿತ್ತು. ಆದ್ದರಿಂದಲೇ ಆಕೆ ಹಿಂದಿ ಚಲನಚಿತ್ರಗಳನ್ನು ಅಷ್ಟಾಗಿ ನೋಡುವುದಿಲ್ಲ. ಬಹುಶಃ ಆಕೆ ನನ್ನ ಹೆಚ್ಚಿನ ಸಿನಿಮಾಗಳನ್ನು ಕೂಡ ನೋಡಿಲ್ಲ' ಎಂದು ಅಮೀರ್ ವಿವರಿಸಿದರು.
ತಾನು ದಿಲ್ ಚಾಹತಾ ಹೈ ಮತ್ತು ಲಗಾನ್ ಚಿತ್ರಗಳನ್ನು ನೋಡಿದ್ದೇನೆ. ಆದರೆ, ಅವು ಬಹಳ ವರ್ಷಗಳ ಹಿಂದೆ ಎಂದು ಗೌರಿ ಹೇಳಿದರು.
ಗೌರಿ ಸಿನಿಮಾಗಳಿಂದ ದೂರವಿರುವುದರಿಂದ ಅವರ ಸಂಬಂಧದ ಮೇಲೆ ಪರಿಣಾಮ ಬೀರಿದೆಯೇ ಎಂದು ಕೇಳಿದಾಗ, ಉತ್ತರಿಸಿದ ಅಮೀರ್, 'ಆಕೆ ನನ್ನನ್ನು ಸೂಪರ್‌ಸ್ಟಾರ್ ಆಗಿ ನೋಡುವುದಿಲ್ಲ. ಬದಲಾಗಿ ಒಬ್ಬ ಸಂಗಾತಿಯಾಗಿ ನೋಡುತ್ತಾಳೆ' ಎಂದರು. ಆದರೂ, ತಮ್ಮ ನಟನೆಯ "ತಾರೇ ಜಮೀನ್ ಪರ್'' ಚಿತ್ರವನ್ನು ಗೌರಿ ನೋಡಬೇಕೆಂದು ಅಮೀರ್ ಬಯಸಿದ್ದರು.
ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಓದಿದ್ದಾರೆ. 2004 ರಲ್ಲಿ ಲಂಡನ್‌ನ ಕಲಾ ವಿಶ್ವವಿದ್ಯಾಲಯದಿಂದ FDA ಸ್ಟೈಲಿಂಗ್ ಮತ್ತು ಛಾಯಾಗ್ರಹಣ ಎಂಬ ಫ್ಯಾಷನ್ ಕೋರ್ಸ್ ಮಾಡಿದ್ದಾರೆ. ಅವರು ಸದ್ಯ ಮುಂಬೈನಲ್ಲಿ BBlunt ಸಲೂನ್ ಅನ್ನು ಸಹ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಅವರಿಗೆ ಆರು ವರ್ಷದ ಮಗುವಿದೆ.
ಇತ್ತೀಚೆಗೆ, ಅಮೀರ್ ಖಾನ್ ಅವರು ಗೌರಿ ಅವರನ್ನು ತಮ್ಮ ಮಕ್ಕಳು, ಕುಟುಂಬ ಮತ್ತು ಸ್ನೇಹಿತರಾದ ಶಾರುಖ್ ಮತ್ತು ಸಲ್ಮಾನ್ ಖಾನ್ ಅವರಿಗೆ ಪರಿಚಯಿಸಿದರು. ಮಾರ್ಚ್ 12 ರಂದು, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರು ಗೌರಿ ಅವರನ್ನು ಭೇಟಿ ಮಾಡಲು ನಟನ ಮನೆಗೆ ಭೇಟಿ ನೀಡಿದ್ದರು.