ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ 
ಬಾಲಿವುಡ್

ನನ್ನ ಗರ್ಭಾವಸ್ಥೆ ತುಂಬಾ ಕ್ಲಿಷ್ಟವಾಗಿತ್ತು, ನಾನು ಬಹಳಷ್ಟು ಕಷ್ಟ ಅನುಭವಿಸಿದ್ದೇನೆ: ದೀಪಿಕಾ ಪಡುಕೋಣೆ

ಮೇರಿ ಕ್ಲೇರ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ನಟಿ, ಗರ್ಭಾವಸ್ಥೆಯಲ್ಲಿ ಮತ್ತು ಹೊಸ ತಾಯಿಯಾಗಿ ತಮ್ಮ ಪ್ರಯಾಣದ ಕುರಿತು ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಅವರು ತಮ್ಮ ಮಗಳಿಗೆ ದುವಾ ಎಂದು ಹೆಸರಿಟ್ಟಿದ್ದು, ತನ್ನ ಗರ್ಭಧಾರಣೆ ಎಷ್ಟು ಕಷ್ಟದಿಂದ ಕೂಡಿತ್ತು ಎಂಬುದನ್ನು ಬಾಲಿವುಡ್ ನಟಿ ದೀಪಿಕಾ ಇದೀಗ ಬಹಿರಂಗಪಡಿಸಿದ್ದಾರೆ.

ಮೇರಿ ಕ್ಲೇರ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ದೀಪಿಕಾ, ಗರ್ಭಾವಸ್ಥೆಯಲ್ಲಿ ಮತ್ತು ಹೊಸ ತಾಯಿಯಾಗಿ ತಮ್ಮ ಪ್ರಯಾಣದ ಕುರಿತು ಹಂಚಿಕೊಂಡಿದ್ದಾರೆ. 'ನಾನು ಗರ್ಭಿಣಿಯಾಗಿ ಎಂಟು, ಒಂಬತ್ತು ತಿಂಗಳುಗಳಲ್ಲಿ ಮತ್ತು ಹೆರಿಗೆ ವೇಳೆಯಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದೆ' ಎಂದು ಹೇಳಿದರು.

ತಮ್ಮ ಮಗಳಿಗೆ ಹೆಸರಿಟ್ಟ ಕುರಿತು ಮಾತನಾಡಿದ ದೀಪಿಕಾ, 'ಆರಂಭಿಕ ದಿನಗಳಲ್ಲಿ ನಮಗೆ ಹೆಚ್ಚು ಮುಖ್ಯವಾಗಿದ್ದು ಅವಳೊಂದಿಗೆ ನಾವು ಇರುವುದಾಗಿತ್ತು. ಅವಳು ಜಗತ್ತನ್ನು ನೋಡುವುದು ಮತ್ತು ತನ್ನದೇ ಆದ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಅವಕಾಶ ನೀಡುವುದಾಗಿತ್ತು. ಅವಳನ್ನು ಹಿಡಿದುಕೊಳ್ಳುವ ಅನುಭವ, ಅವಳನ್ನು ಮೊದಲ ಬಾರಿಗೆ ನೋಡುವುದು ಮತ್ತು ಅವಳು ನಮ್ಮ ಜೀವನಕ್ಕೆ ತರುವ ಪ್ರೀತಿ ಮತ್ತು ಅರ್ಥದ ಪರಿಪೂರ್ಣ ಪ್ರಾತಿನಿಧ್ಯದಂತೆ ಭಾಸವಾಯಿತು ಎಂದರು.

ದೀಪಿಕಾ ಮತ್ತು ರಣವೀರ್ ಸೆಪ್ಟೆಂಬರ್ 8, 2024 ರಂದು ತಮ್ಮ ಮಗಳನ್ನು ಸ್ವಾಗತಿಸಿದರು. ದೀಪಾವಳಿಯಂದು, ಅವರು ತಮ್ಮ ಮಗಳ ಫೋಟೊವನ್ನು ಹಂಚಿಕೊಂಡರು ಮತ್ತು ಆಕೆಯ ಹೆಸರನ್ನು ಬಹಿರಂಗಪಡಿಸಿದರು.

ಮಗಳಿಗೆ ಇಟ್ಟಿರುವ ಹೆಸರಿನ ಹಿಂದಿನ ಆಲೋಚನೆಯನ್ನು ಹಂಚಿಕೊಂಡ ದಂಪತಿ, 'ದುವಾ: ಅಂದರೆ ಪ್ರಾರ್ಥನೆ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ' ಎಂದು ಬರೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!