ಧರ್ಮೇಂದ್ರ, ಹೇಮಾ ಮಾಲಿನಿ ಕುಟುಂಬ 
ಬಾಲಿವುಡ್

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಧರ್ಮೇಂದ್ರ ಇಬ್ಬರು ಪತ್ನಿಯರು ಮತ್ತು ಆರು ಜನ ಮಕ್ಕಳನ್ನು ಹೊಂದಿದ್ದಾರೆ. ಪ್ರಕಾಶ್ ಕೌರ್ ಮೊದಲ ಹೆಂಡತಿ. ಪ್ರಕಾಶ್ ಕೌರ್ ಅವರಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜಿತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್ ಇದ್ದಾರೆ.

ಹಿರಿಯ ನಟಿ-ರಾಜಕಾರಣಿ ಆಗಿರುವ ಹೇಮಾ ಮಾಲಿನಿ ತನ್ನ ದಿವಂಗತ ಪತಿ ಧರ್ಮೇಂದ್ರ ಅವರಿಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ್ದು, ಅವರು ನನ್ನ ಸಂಗಾತಿ, ಮಾರ್ಗದರ್ಶಕ ಮತ್ತು ಸ್ನೇಹಿತ ಎಲ್ಲವೂ ಆಗಿದ್ದರು. ಅವರ ನಿಧನ ಭರಿಸಲಾಗದ ನಷ್ಟವನ್ನುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಧರ್ಮೇಂದ್ರಗೆ ಇಬ್ಬರು ಪತ್ನಿಯರು, ಆರು ಜನ ಮಕ್ಕಳು:

ಧರ್ಮೇಂದ್ರ ತನ್ನ ಕುಟುಂಬಕ್ಕೆ ರೂ. 450 ಕೋಟಿ ಮೌಲ್ಯದ ಸಂಪತ್ತನ್ನು ಬಿಟ್ಟು ಸೋಮವಾರ ಇಹಲೋಕ ತ್ಯಜಿಸಿದರು. ಧರ್ಮೇಂದ್ರ ಇಬ್ಬರು ಪತ್ನಿಯರು ಮತ್ತು ಆರು ಜನ ಮಕ್ಕಳನ್ನು ಹೊಂದಿದ್ದಾರೆ. ಪ್ರಕಾಶ್ ಕೌರ್ ಮೊದಲ ಹೆಂಡತಿ. ಪ್ರಕಾಶ್ ಕೌರ್ ಅವರಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜಿತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್ ಇದ್ದಾರೆ.

ಕೊನೆಯ ದಿನಗಳಲ್ಲಿ ಕೊನೆಯ ಹೆಂಡತಿ ಮನೆಯಲ್ಲಿದ್ದ ಧರ್ಮೇಂದ್ರ

ತದನಂತರ ಧರ್ಮೇಂದ್ರ ಅವರು 1980 ರಲ್ಲಿ ಹೇಮಾ ಮಾಲಿನಿ ಎರಡನೇ ಬಾರಿ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್.ಅವರ ಕುಟುಂಬವು ಹೆಚ್ಚಾಗಿ ಸಾರ್ವಜನಿಕ ಗಮನದ ಕೇಂದ್ರಬಿಂದುವಾಗಿದ್ದರೂ, ಧರ್ಮೇಂದ್ರ ಮತ್ತು ಅವರ ಹೆಣ್ಣುಮಕ್ಕಳ ನಡುವಿನ ಭಾವನಾತ್ಮಕ ಬಾಂಧವ್ಯ ಯಾವಾಗಲೂ ಬಲವಾಗಿತ್ತು ಎನ್ನಲಾಗಿದೆ. ಆದರೆ ಧರ್ಮೇಂದ್ರ ಅವರು ಕೊನೆಯ ದಿನಗಳಲ್ಲಿ ಅವರ ಮೊದಲ ಹೆಂಡತಿಯ ಜೊತೆಗಿದ್ದರು ಎನ್ನಲಾಗುತ್ತದೆ.

ಧರ್ಮೇಂದ್ರ ನಿಧನ ನಂತರ ಅವರ ರೂ.450 ಕೋಟಿ ಮೌಲ್ಯದ ಸಂಪತ್ತು ಯಾರಿಗೆ ಸೇರುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿರುವಂತೆಯೇ ಹೇಮಾ ಮಾಲಿನಿ ಮಾಡಿರುವ ಪೋಸ್ಟ್ ಕುತೂಹಲಕ್ಕೆ ಕಾರಣವಾಗಿದೆ.

ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಟ್ವೀಟ್:

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತನ್ನ ನೋವು ತೋಡಿಕೊಂಡಿರುವ ಹೇಮಾ ಮಾಲಿನಿ, ಪ್ರೀತಿಯ ಪತಿ ಮತ್ತು ಹೆಣ್ಣುಮಕ್ಕಳಾದ ಇಶಾ ಮತ್ತು ಅಹಾನಾ ಅವರಿಗೆ ಪ್ರೀತಿಯ ತಂದೆಯಾಗಿ ನೆನಪಿಸಿಕೊಂಡಿದ್ದಾರೆ. ತಮ್ಮ ಕುಟುಂಬದ ಎಲ್ಲರಿಗೂ ಪ್ರೀತಿ ನೀಡಿದ್ದ ನೆಚ್ಚಿನ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದ್ದಾರೆ. ನನಗೆ ಎಲ್ಲವೂ ಧರ್ಮೇಂದ್ರ ಆಗಿದ್ದರು. ಪ್ರೀತಿಯ ಪತಿ, ಇಬ್ಬರು ಹೆಣ್ಣುಮಕ್ಕಳಾದ ಈಶಾ ಮತ್ತು ಅಹಾನಾ ಅವರ ಪ್ರೀತಿಯ ತಂದೆ, ಸ್ನೇಹಿತ, ಮಾರ್ಗದರ್ಶಕ, ಕವಿ, ಎಲ್ಲಾ ಸಮಯದಲ್ಲೂ ನಾನು ಭೇಟಿಯಾಗುವ ವ್ಯಕ್ತಿಯಾಗಿದ್ದರು. ವಾಸ್ತವವಾಗಿ, ಅವರು ನನಗೆ ಎಲ್ಲವೂ ಆಗಿದ್ದರು! ಯಾವಾಗಲೂ ಒಳ್ಳೆಯ ಸಮಯಗಳು ಮತ್ತು ಕೆಟ್ಟ ಸಮಯಗಳನ್ನು ಎದುರಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಕುಟುಂಬದ ಎಲ್ಲರಿಗೂ ಆತ್ಮೀಯ ಪ್ರೀತಿ ತೋರಿಸುತ್ತಿದ್ದರು ಎಂದು 77 ವರ್ಷದ ಹೇಮಾ ಮಾಲಿನಿ ತಮ್ಮ ಹಳೆಯ ಫೋಟೋಗಳನ್ನು ಹಂಚಿಕೊಂಡು ಬರೆದುಕೊಂಡಿದ್ದಾರೆ. ಧರ್ಮೇಂದ್ರ ಅವರ ನಿಧನದಿಂದ ಭರಿಸಲಾಗದಷ್ಟು ನಷ್ಟವಾಗಿದೆ. ತನ್ನ ಜೀವನದುದ್ದಕ್ಕೂ ಅದು ಉಳಿಯುತ್ತದೆ. ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಅನೇಕ ವಿಶೇಷ ಕ್ಷಣಗಳನ್ನು ಮೆಲುಕು ಹಾಕಲು ಅಸಂಖ್ಯಾತ ನೆನಪುಗಳಿವೆ ಎಂದು ಅವರು ಹೇಳಿದ್ದಾರೆ.

ಶೋಲೆ, ಸೀತಾ ಔರ್ ಗೀತಾ ಮತ್ತು "ಪ್ರತಿಜ್ಞ" ನಂತಹ ಅನೇಕ ಬ್ಲಾಕ್‌ಬಸ್ಟರ್‌ಗಳಲ್ಲಿ ಧರ್ಮೇಂದ್ರ ಅವರೊಂದಿಗೆ ಹೇಮಾ ಮಾಲಿನಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ರಾಜಕೀಯ ಅಂದ್ರೆ ಅದು.... ಸಿಎಂ ಕುರ್ಚಿ ಗುದ್ದಾಟದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಸಂಸದೆ ರಮ್ಯಾ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ಪಂಜಾಬ್‌: ಎಎಪಿ ನಾಯಕನ ಮನೆ ಮೇಲೆ ಬರೋಬ್ಬರಿ 23 ಸುತ್ತು ಫೈರಿಂಗ್!

'ಅರುಣಾಚಲ ಪ್ರದೇಶ ಚೈನಾ'ಗೆ : ಸೇನಾ ಮುಖ್ಯಸ್ಥರ ವೈರಲ್ Video ನಿಜವೇ? PIB fact check ಸ್ಪಷ್ಟನೆ

SCROLL FOR NEXT