ನಟಿ ಕಾಜೋಲ್ 
ಬಾಲಿವುಡ್

'ದುರ್ಗಾ ಪೂಜೆ ವೇಳೆ ನಟಿ Kajol ಖಾಸಗಿ ಭಾಗ ಮುಟ್ಟಿ ಅನುಚಿತ ವರ್ತನೆ'; ಸಾಮಾಜಿಕ ಜಾಲತಾಣದಲ್ಲಿ Video ವೈರಲ್, ಅಸಲೀಯತ್ತೇನು?

ನಟಿ ಕಾಜೋಲ್ ವಿಧಿವಿಧಾನಗಳ ನಂತರ ಪೂಜೆ ಮುಗಿಸಿಕೊಂಡು ಮೆಟ್ಟಿಲುಗಳಿಂದ ಇಳಿಯುತ್ತಿದ್ದಾಗ ವ್ಯಕ್ತಿಯೋರ್ವ ಅವರನ್ನು ಮುಟ್ಟಿ ಹಿಂದಕ್ಕೆ ಎಳೆದಿದ್ದಾರೆ.

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಕಾಜೋಲ್‌ ಅವರು ಸಂಭ್ರಮದಿಂದ ವಿಜಯದಶಮಿ ಆಚರಿಸಲು ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದ ವೇಳೆ ವ್ಯಕ್ತಿಯೊಬ್ಬರು ಅವರ ಖಾಸಗಿ ಭಾಗ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಘಟನೆಯ ಅಸಲೀಯತ್ತು ಇದೀಗ ಬಯಲಾಗಿದೆ.

ದಶಮಿಯಂದು (ಅಕ್ಟೋಬರ್ 2) ಉತ್ತರ ಮುಂಬೈನಲ್ಲಿ ನಡೆದ ದುರ್ಗಾ ಪೂಜೆ 2025 ರ ಆಚರಣೆಯ ಸಮಯದಲ್ಲಿ, ನಟಿ ಕಾಜೋಲ್ ವಿಧಿವಿಧಾನಗಳ ನಂತರ ಪೂಜೆ ಮುಗಿಸಿಕೊಂಡು ಮೆಟ್ಟಿಲುಗಳಿಂದ ಇಳಿಯುತ್ತಿದ್ದಾಗ ವ್ಯಕ್ತಿಯೋರ್ವ ಅವರನ್ನು ಮುಟ್ಟಿ ಹಿಂದಕ್ಕೆ ಎಳೆದಿದ್ದಾರೆ.

ಈ ವೇಳೆ ನಟಿ ಸ್ವಲ್ಪ ಸಮಯ ಸಮತೋಲನ ತಪ್ಪಿದರು. ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವ್ಯಕ್ತಿ ಅವರ ಖಾಸಗಿ ಭಾಗ ಮುಟ್ಟಿದ್ದಾನೆ ಎಂದು ವರದಿಯಾಗುತ್ತಿದೆ. ಅಲ್ಲದೆ ನಟಿ ಕೂಡ ಇದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಸಲೀಯತ್ತೇನು?

ಇನ್ನು ವೈರಲ್ ವಿಡಿಯೋದಲ್ಲಿರುವಂತೆ ನಟಿ ಕಾಜೋಲ್ ಗೆ ಲೈಂಗಿಕ ಕಿರುಕುಳ ನೀಡಲಾಗಿಲ್ಲ.. ಬದಲಿಗೆ ಆತ ಆಕೆಯ ಖಾಸಗಿ ಭಾಗವನ್ನಲ್ಲ.. ಬದಲಿಗೆ ನಟ ಕೈ ಹಿಡಿದುಕೊಂಡಿದ್ದಾನೆ. ಇದ್ದಕ್ಕಿದ್ದಂತೆ ಯಾರೊ ಒಬ್ಬರು ತಮ್ಮ ಕೈ ಹಿಡಿದುಕೊಂಡಾಗ ಅಚ್ಚರಿ ಹಾಗೂ ಆಘಾತವಾಗುತ್ತದೆ.

ಅದೇ ರೀತಿ ನಟಿ ಕಾಜೋಲ್ ಕೂಡ ಅಚ್ಚರಿಗೊಂಡಿದ್ದಾರೆ. ಆದರೆ ಬಳಿಕ ಅದು ಪರಿಚಿತ ವ್ಯಕ್ತಿಯಾದ್ದರಿಂದ ಮತ್ತು ಆತ ಕಾಜೋಲ್ ಕುಟುಂಬದ ಆಪ್ತರಾದ್ದರಿಂದ ಅವರು ಅವರ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.

ಆಕೆಯೊಂದಿಗೆ ಫೋಟೋ ತೆಗೆಸಿಕೊಳ್ಳುವ ಉದ್ದೇಶದಿಂದಲೇ ಆ ವ್ಯಕ್ತಿ ನಟಿ ಕೈ ಹಿಡಿದು ಮತ್ತೆ ಮೇಲೆ ಬನ್ನಿ.. ಫೋಟೋ ತೆಗೆಸಿಕೊಳ್ಳೋಣ ಎಂದು ಕೈ ಹಿಡಿದು ಎಳೆದಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅರ್ಧ ವಿಡಿಯೋ ವೈರಲ್

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅರ್ಧಕ್ಕೆ ವಿಡಿಯೋ ಕಟ್ ಮಾಡಿ ಅದನ್ನು ವೈರಲ್ ಮಾಡಲಾಗುತ್ತಿದೆ. ಆದರೆ ಸಂಪೂರ್ಣ ವಿಡಿಯೋದಲ್ಲಿ ಬಳಿಕ ನಡೆದ ಎಲ್ಲವೂ ದಾಖಲಾಗಿದೆ. ವ್ಯೂಸ್ ಮತ್ತು ಫಾಲೋವರ್ ಗಳ ಸಂಖ್ಯೆ ಏರಿಸಿಕೊಳ್ಳಲು ಕೆಲ ಕಿಡಿಗೇಡಿಗಳು ಈ ರೀತಿ ವಿಡಿಯೋ ಎಡಿಟ್ ಮಾಡಿದ್ದಾರೆ ಎಂದು ಕಾಜೋಲ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸಮೀಕರಣ: ವಿಜಯ್ ಜೊತೆ ಬಿಜೆಪಿ ಮಾತುಕತೆ? ಕಾಲ್ತುಳಿತ ಘಟನೆಯ ನಂತರ TVKಗೆ ಪ್ರಮುಖ ಭರವಸೆ?

ತಕ್ಷಣ ದಾಳಿ ನಿಲ್ಲಿಸುವಂತೆ ಟ್ರಂಪ್ ಆದೇಶಕ್ಕೆ ಡೋಂಟ್ ಕೇರ್: ಇಸ್ರೇಲ್ ದಾಳಿಗೆ ಇಬ್ಬರು ಮಕ್ಕಳು ಸೇರಿ ಏಳು ಮಂದಿ ಪ್ಯಾಲೆಸ್ತೀನಿಯರು ಬಲಿ

ಅಸ್ಥಿರಂಧ್ರತೆ (Osteoporosis) ಚಿಕಿತ್ಸೆಯಲ್ಲಿ ಹೊಸ ಬೆಳಕು: ಮೂಳೆ ಬಲದ ಮೂಲ ರಹಸ್ಯ ಪತ್ತೆ!

ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ'ಬಿಗ್ ಟ್ವಿಸ್ಟ್': ಸ್ಪೋಟಕ ಮಾಹಿತಿ ಹೊರಹಾಕಿದ Bandmate ಶೇಖರ್ ಜ್ಯೋತಿ ಗೋ ಸ್ವಾಮಿ!

ಬೆಂಗಳೂರಿನಲ್ಲಿ ಗಣತಿದಾರರ ಪ್ರತಿಭಟನೆ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅಡ್ಡಿ!

SCROLL FOR NEXT