ದಂಗಲ್' ಮತ್ತು 'ಸೀಕ್ರೆಟ್ ಸೂಪರ್‌ಸ್ಟಾರ್' ಖ್ಯಾತಿಯ ಮಾಜಿ ಬಾಲಿವುಡ್ ನಟಿ ಝೈರಾ ವಾಸಿಮ್ ವಿವಾಹವಾಗಿದ್ದಾರೆ. ತಮ್ಮ 'ನಿಕಾಹ್' ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮದುವೆಯನ್ನು ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ 2019 ರಲ್ಲಿ ಬಾಲಿವುಡ್ ತೊರೆದಿದ್ದ ಝೈರಾ, ಶುಕ್ರವಾರ ಸಂಜೆ ಮದುವೆ ಸಮಾರಂಭದ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ ಮದುವೆಯಾಗಿರುವ ವಿಷಯ ತಿಳಿಸಿದ್ದಾರೆ.
ಕಬೂಲ್ ಹೈ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿರುವ ಪೋಟೋಗಳಿಗೆ ಸಾಕಷ್ಟು ಅಭಿಮಾನಿಗಳು ಲೈಕ್ ಮಾಡುವ ಮೂಲಕ ಶುಭಾಶಯ ಕೋರುತ್ತಿದ್ದಾರೆ.
ಮೊದಲ ಫೋಟದಲ್ಲಿ ಝೈರಾ, ಮೆಹೆಂದಿ ಮತ್ತು ಪಚ್ಚೆ ಉಂಗುರ ಧರಿಸಿ ತನ್ನ ಮದುವೆಯ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ ಝೈರಾ ತನ್ನ ಪತಿಯೊಂದಿಗೆ ಚಂದ್ರನನ್ನು ನೋಡುತ್ತಿರುವುದು ಕಾಣಿಸುತ್ತದೆ.
ತಮ್ಮ ಮುಖಚಹರೆಯಾಗಲಿ ಅಥವಾ ತಮ್ಮ ಕೈ ಹಿಡಿದ ಹುಡುಗನ ಮುಖವನ್ನಾಗಲಿ ಝೈರಾ ಇಲ್ಲಿ ತೋರಿಸಿಲ್ಲ. ತಮ್ಮ ಮದುವೆಯ ಕುರಿತು ಹೆಚ್ಚಿನ ವಿವರಗಳನ್ನು ಕೂಡ ಹಂಚಿಕೊಂಡಿಲ್ಲ. ಹೀಗಾಗಿಯೇ ಇದು ಅನೇಕ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.