ಕಂಗನಾ ರಣಾವತ್, ಸೋನಾಕ್ಷಿ ಸಿನ್ಹಾ 
ಬಾಲಿವುಡ್

ಕೆಲವರು ಮುಸ್ಲಿಮರನ್ನು ಮದುವೆಯಾಗುತ್ತಿದ್ದಂತೆ ಎಡಪಂಥೀಯ ಉಗ್ರಗಾಮಿಗಳ್ತಾರೆ; Hindu ಆಗಿದ್ದ ನಾನು ಈಗ ಅಪ್ಪಟ ಸಂಘಿ: ಕಂಗನಾ

ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರಸ್ತುತ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು ವಿವಿಧ ವಿಷಯಗಳ ಬಗ್ಗೆ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಪ್ರಸ್ತುತ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು ವಿವಿಧ ವಿಷಯಗಳ ಬಗ್ಗೆ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಸೋಮವಾರ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಫಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಆಧ್ಯಾತ್ಮಿಕ ಮತ್ತು ಸೈದ್ಧಾಂತಿಕ ಪ್ರಯಾಣವನ್ನು ಚರ್ಚಿಸಿದ್ದಾರೆ. ಅವರು ಬಾಲಿವುಡ್ ನಟಿಯ ಹೆಸರನ್ನು ಹೇಳದೆ ಟೀಕಿಸಿದ್ದಾರೆ. ಸೋನಾಕ್ಷಿ ಸಿನ್ಹಾ (Sonakshi Sinha) ಬಗ್ಗೆ ಕಂಗನಾ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಂಗನಾ ತಾನು ಹಿಂದೆ ಮಧ್ಯಮ ಹಿಂದೂ ಆಗಿದ್ದೆ, ಆದರೆ ಈಗ ತಾನು ಹೆಮ್ಮೆಯ ಸಂಘಿ ಎಂದು ಪರಿಗಣಿಸುತ್ತೇನೆ. ಭಾರತೀಯ ಜನತಾ ಪಕ್ಷ (BJP) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಿದ್ಧಾಂತದೊಂದಿಗೆ ಹೊಂದಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ನಂತರ ತನ್ನ ಅಭಿಪ್ರಾಯಗಳನ್ನು ಬದಲಾಯಿಸಿದ ನಟಿಯ ಹೆಸರನ್ನು ಹೇಳದೆ ಅವರನ್ನು ಗುರಿಯಾಗಿಸಿಕೊಂಡರು.

ಇದು ಸೋನಾಕ್ಷಿ ಸಿನ್ಹಾ ಅವರನ್ನು ಉಲ್ಲೇಖಿಸಿತ್ತೇ?

ಕಂಗನಾ ವೀಡಿಯೊದಲ್ಲಿ, ಬಾಲಿವುಡ್ ನಲ್ಲಿ ಅನೇಕ ಹಿಂದೂ ನಟಿಯರು ನನಗೆ ತುಂಬಾ ಹತ್ತಿರದಿಂದ ಗೊತ್ತು. ಅವರು ಹಿಂದೂಗಳು, ಆದರೆ ಅವರಿಗೆ ರಾಜಕೀಯದ ಬಗ್ಗೆ ಯಾವುದೇ ನಿರ್ದಿಷ್ಟ ದೃಷ್ಟಿಕೋನಗಳಿಲ್ಲ. ಅವರು ಸಾಮಾನ್ಯವಾಗಿ ತಟಸ್ಥರಾಗಿರುತ್ತಾರೆ. ಆದರೆ ಕೆಲ ನಟಿಯರು ಮುಸ್ಲಿಂ ಜನರೊಂದಿಗೆ ಸಂಪರ್ಕಕ್ಕೆ ಬಂದ ತಕ್ಷಣ, ಅದು ಮದುವೆ ಅಥವಾ ಸ್ನೇಹದ ಮೂಲಕವೇ ಆಗಿರಲಿ, ಅವರ ಚಿಂತನೆ ಇದ್ದಕ್ಕಿದ್ದಂತೆ ತೀವ್ರವಾಗಿ ಬದಲಾಗುತ್ತದೆ. ಅವರು ಎಡಪಂಥೀಯ ಉಗ್ರಗಾಮಿಗಳಾಗುತ್ತಾರೆ ಎಂದು ಕಂಗನಾ ಹೇಳಿದ್ದಾರೆ.

ಆದಾಗ್ಯೂ, ಭಾರತೀಯ ಸಂವಿಧಾನವು ಪ್ರತಿಯೊಬ್ಬರಿಗೂ ಅವರ ಆಯ್ಕೆಯ ಧರ್ಮ ಮತ್ತು ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿರುವುದರಿಂದ ಯಾರಾದರೂ ತಮ್ಮ ಧರ್ಮ ಅಥವಾ ಸಿದ್ಧಾಂತವನ್ನು ಬದಲಾಯಿಸುವುದಕ್ಕೆ ತನಗೆ ಯಾವುದೇ ಅಭ್ಯಂತರವಿಲ್ಲ. ಆದರೆ ತಾನು ತನ್ನ ಸಿದ್ಧಾಂತವನ್ನು ಬದಲಾಯಿಸಿದರೇ ಜನರು ತನ್ನನ್ನು ಏಕೆ ಗುರಿಯಾಗಿಸಿಕೊಳ್ಳುತ್ತಾರೆ ಎಂದು ಅವರು ಪ್ರಶ್ನಿಸಿದರು.

ಹೌದು, ನಾನು ಮೊದಲು ಮಧ್ಯಮ ಹಿಂದೂ ಆಗಿದ್ದೆ. ಆದರೆ ನನಗೆ, 'ನೀವು ಯಾವಾಗ ಸಂಘಿಯಾದಿರಿ?' ಎಂದು ಕೇಳುತ್ತೀರೀ? ನಾನು ಸಂಘಿಯಾಗಲು ಬಯಸುತ್ತೇನೆ. ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಜಾಗೃತ ಹಿಂದೂ ಸಿದ್ಧಾಂತವನ್ನು ಅಳವಡಿಸಿಕೊಳ್ಳಲು ಬಯಸುತ್ತೇನೆ. ನಾನು ಏಕೆ ಬದಲಾಗಬಾರದು? ಇದು ನಮ್ಮ ಸಮಾಜದ ದ್ವಂದ್ವ ನೀತಿ. ಕೆಲವರು ನನ್ನ 10 ವರ್ಷದ ಹಳೆಯ ವೀಡಿಯೊಗಳನ್ನು ಹಾಕಿ, 'ನೀವು ಮೊದಲು ಪಾರ್ಟಿ ಮಾಡುತ್ತಿದ್ದಿರಿ' ಎಂದು ಹೇಳುತ್ತಾರೆ. ಹೌದು, ನಾನು ಅಂದು ಹಾಗೇ ಇದ್ದೆ. ಆದರೆ ಇಂದು ನಾನು ಪ್ರಜ್ಞಾಪೂರ್ವಕ ಹಿಂದೂವಾಗಲು ಬಯಸುತ್ತೇನೆ. ನಮ್ಮ ಹಿಂದೂ ಹೆಣ್ಣುಮಕ್ಕಳು ಪ್ರಜ್ಞಾಪೂರ್ವಕ ಹಿಂದೂಗಳಾಗಲು ಬಯಸಿದರೆ ಏನು ತಪ್ಪಾಗಿದೆ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

ರಷ್ಯಾ ಸಂಸತ್ ಚುನಾವಣೆ: 355ಕ್ಕೂ ಹೆಚ್ಚು ಸ್ಥಾನ ಗೆದ್ದ ಪುಟಿನ್ ಪಕ್ಷ; ಹೊಸ ಇತಿಹಾಸ ಸೃಷ್ಟಿ!

Video: ಮಿಲ್ಕ್ ಟ್ಯಾಂಕರ್ ಪಲ್ಟಿ; ಹೆದ್ದಾರಿಯಲ್ಲಿ ಹಾಲಿನ ಹೊಳೆ, ಕ್ಯಾನ್​ ಹಿಡಿದು ಮುಗಿಬಿದ್ದ ಜನ!

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ- ರಾಹುಲ್ ಗಾಂಧಿ