ಧುರಂಧರ್ 2 ಚಿತ್ರದ ಪೋಸ್ಟರ್ 
ಬಾಲಿವುಡ್

‘ಧುರಂಧರ್’ ಹೊಸ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ!

ಆದಿತ್ಯ ಧರ್ ನಿರ್ದೇಶನ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು,ಗಲ್ಲಾಪೆಟ್ಟಿಗೆಯಲ್ಲಿ ‘ಧುರಂಧರ್’ ಸರಣಿಯ ಎರಡು ಸಿನಿಮಾಗಳು ಒಟ್ಟಾರೆಯಾಗಿ 3100 ಕೋಟಿ ರೂಪಾಯಿ ಗಳಿಸಿವೆ.

ನವದೆಹಲಿ: ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಇದೀಗ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ ಎಂಬ ಗೌರವಕ್ಕೆ ಪಾತ್ರವಾಗಿದೆ.

ಆದಿತ್ಯ ಧರ್ ನಿರ್ದೇಶನ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು,ಗಲ್ಲಾಪೆಟ್ಟಿಗೆಯಲ್ಲಿ ‘ಧುರಂಧರ್’ ಸರಣಿಯ ಎರಡು ಸಿನಿಮಾಗಳು ಒಟ್ಟಾರೆಯಾಗಿ 3100 ಕೋಟಿ ರೂಪಾಯಿ ಗಳಿಸಿವೆ. ಥಿಯೇಟರ್‌ಗಳಲ್ಲಿ ಮಾತ್ರವಲ್ಲದೆ ಒಟಿಟಿಯಲ್ಲೂ ಮಹತ್ವದ ದಾಖಲೆಯನ್ನು ಧುರಂದರ್ ತನ್ನ ಹೆಸರಿಗೆ ಬರೆದುಕೊಂಡಿದೆ.

ಒಟಿಟಿ ದೈತ್ಯ ನೆಟ್​​ಫ್ಲಿಕ್ಸ್​​ನಲ್ಲಿ ಸ್ಟ್ರೀಂ ಆಗುತ್ತಿರುವ ‘ಧುರಂಧರ್’ ಈ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಬಗ್ಗೆ ಖುದ್ದು ನೆಟ್​​ಫ್ಲಿಕ್ಸ್​ ಸಿಇಓ ಮಾಹಿತಿ ಹಂಚಿಕೊಂಡಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಗೋಯೆಂಕಾ ಅವರೊಂದಿಗಿನ ಸಂದರ್ಶನದಲ್ಲಿ ನೆಟ್‌ಫ್ಲಿಕ್ಸ್‌ನ ಸಹ-ಸಿಇಒ ಟೆಡ್ ಸರಂಡೋಸ್ ಅವರು, ಈ ವರ್ಷ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲಿಷೇತರ (non-English) ಸಿನಿಮಾ ‘ಧುರಂಧರ್’ ಎಂದು ಹೇಳಿದ್ದಾರೆ. ಇದು ಇತರ ಹಲವು ಇಂಗ್ಲಿಷ್ ಚಿತ್ರಗಳಿಗಿಂತ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ ಮತ್ತು ವೀಕ್ಷಣೆಯ (ವೀವರ್ಸ್) ವಿಷಯದಲ್ಲಿ ಅಮೆರಿಕ ಮತ್ತು ಬ್ರಿಟನ್ ನಂತರದ ಸ್ಥಾನದಲ್ಲಿದೆ’ ಎಂದು ಹೇಳಿದ್ದಾರೆ.

‘ಧುರಂಧರ್’ ಸಿನಿಮಾವು 2026ರ ಜನವರಿಯಿಂದ ಜೂನ್ ವರೆಗೆ 37 ಮಿಲಿಯನ್ (3,70,00,000) ವೀಕ್ಷಣೆಗಳನ್ನು ಗಳಿಸಿದೆ. ಇದು 22 ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತೀಯ ಸಿನಿಮಾಗಳು ವಿದೇಶಗಳಲ್ಲಿ ದೊಡ್ಡ ಮಟ್ಟದ ಪ್ರದರ್ಶನ ನೀಡುವುದು ತುಸು ಕಡಿಮೆಯೇ ಆದರೆ ‘ಧುರಂಧರ್’ ವಿದೇಶಗಳಲ್ಲಿಯೇ ಅಪ್ರತಿಮ ದಾಖಲೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿವಾದ: ಮಾತುಕತೆ ಅಂದ್ರೆ ರಾಜಿ ಎಂದರ್ಥವಲ್ಲ; ಬೆಂಗಳೂರು ಭೇಟಿ ಪ್ರಯತ್ನ ಸಮರ್ಥಿಸಿಕೊಂಡ ತಮಿಳುನಾಡು ಸಿಎಂ ವಿಜಯ್!

ಸಚಿವ ಸ್ಥಾನಕ್ಕಾಗಿ ಕೃಷ್ಣಪ್ಪ ಬಿಗಿ ಪಟ್ಟು: ಡಿಕೆಶಿ ಸಂಪುಟದಿಂದ ಒಬ್ಬರಿಗೆ ಕೊಕ್? ‘ನಾನು ರಾಜೀನಾಮೆಗೆ ಸಿದ್ಧ’ ಎಂದ ಬಾಲಕೃಷ್ಣ!

ವಿಜ್ಞಾನಿಗಳಿಗೇ ಶಾಕ್; ಸುರಕ್ಷಿತ ಸ್ಯಾಂಡ್‌ಬಾಕ್ಸ್‌ನಿಂದ ಹೊರಬಂದ ಚೀನಾದ ಅತ್ಯಂತ ಶಕ್ತಿಶಾಲಿ Ai ಮಾದರಿ: ವರದಿ

ದಳಪತಿ ದಾಂಪತ್ಯದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ; ಪ್ರಕರಣ ಇತ್ಯರ್ಥ

ಮೊದಲು BJPಯ 'ದೇಶ ವಿರೋಧಿ' ಟೀಕೆಗಳಿಗೆ ಬ್ರೇಕ್ ಹಾಕಿ; ಮೋದಿಗೆ ನೀವು ಗಾಡ್‌ಫಾದರ್ ಇದ್ದಂತೆ: Gen Z ಬೆಂಬಲಿಸಿದ ಮೋಹನ್ ಭಾಗವತ್​ಗೆ ದೀಪ್ಕೆ ಆಗ್ರಹ!