ಕಂಗನಾ ರಣಾವತ್, ನಸೀರುದ್ದೀನ್ ಶಾ 
ಬಾಲಿವುಡ್

ಇದು ಮುದಿ ಗುಳ್ಳೆ ನರಿ: ಬಾಲಿವುಡ್ ನಟ ನಸೀರುದ್ದೀನ್ ಶಾ ವಿರುದ್ಧ BJP ಸಂಸದೆ ಕಂಗನಾ ಕಿಡಿ! Video

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯ ನಂತರ ಹಿರಿಯ ನಟ ನಸೀರುದ್ದೀನ್ ಶಾ ಮತ್ತು ಪಿಯೂಷ್ ಮಿಶ್ರಾ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಈ ಮಧ್ಯೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಸಹ ನಸೀರುದ್ದೀನ್ ಶಾರನ್ನು ಟೀಕಿಸಿದ್ದಾರೆ.

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯ ನಂತರ ಹಿರಿಯ ನಟ ನಸೀರುದ್ದೀನ್ ಶಾ ಮತ್ತು ಪಿಯೂಷ್ ಮಿಶ್ರಾ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಈ ಮಧ್ಯೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಸಹ ನಸೀರುದ್ದೀನ್ ಶಾರನ್ನು ಟೀಕಿಸಿದ್ದಾರೆ. ವಿದ್ಯಾರ್ಥಿ ಪ್ರತಿಭಟನೆಯ ಸಮಯದಲ್ಲಿ ಬಾಲಿವುಡ್ ತಾರೆಯರ ಮೌನದ ಬಗ್ಗೆ ಶಾ ಅವರ 'ಶ್ವಾನ' ಹೇಳಿಕೆಗೆ ಪಿಯೂಷ್ ಮಿಶ್ರಾ ಟೀಕಿಸಿದ್ದರು. ಕಂಗನಾ ಈಗ ಪಿಯೂಷ್ ಮಿಶ್ರಾ ಅವರನ್ನು ಬೆಂಬಲಿಸಿದ್ದು ಶಾ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

ಪಿಯೂಷ್ ಮಿಶ್ರಾ ಅವರ ಇತ್ತೀಚಿನ ನಸೀರುದ್ದೀನ್ ಶಾ ಹೇಳಿಕೆಗೆ ಸಂಬಂಧಿಸಿದಂತೆ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದ್ದಿ ವರದಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಶಾರ ಶ್ವಾನ ಹೇಳಿಕೆಯನ್ನು ಸಹ ಅವರು ಉಲ್ಲೇಖಿಸಿದ್ದಾರೆ. ನಾಯಿ ಎಂದರೆ ನಿಯತ್ತು. ಆದರೆ ನಾನು ತಿನ್ನುವ ಮನೆ (ದೇಶ) ಯನ್ನು ನಾನು ರಕ್ಷಿಸುತ್ತೇನೆ ಮತ್ತು ಹೋರಾಡುತ್ತೇನೆ ಎಂದು ನನಗೆ ಹೆಮ್ಮೆ ಇದೆ. ಆದರೆ ನಸೀರುದ್ದೀನ್ ಶಾ ಈ ದೇಶದಲ್ಲಿ ತಿನ್ನುತ್ತಾರೆ. ಆದರೆ ನೆರೆಯ ದೇಶಕ್ಕಾಗಿ ಹೋರಾಡುವ ಮನಸ್ಥಿತಿ ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ.

ಕಂಗನಾ ಅವರು ನಸೀರುದ್ದೀನ್ ಶಾ ಅವರನ್ನು 'ಗುಳ್ಳೆ ನರಿ' ಎಂದು ಕರೆದರು. ಇಂದಿನ ಕಾಲದಲ್ಲಿ, ಯಾರನ್ನಾದರೂ 'ನಾಯಿ' ಎಂದು ಕರೆಯುವುದು ಕೂಡ ಒಂದು ಮೆಚ್ಚುಗೆಯಾಗಿತ್ತು. ಏಕೆಂದರೆ ನಿಷ್ಠೆ ಮತ್ತು ಮುಗ್ಧತೆ ಪ್ರತಿರೂಪ. ನಾಸಿರುದ್ದೀನ್ ಶಾರನ್ನು ನಾಯಿಗಿಂತ ನರಿ ಅಂತ ಎಂದು ಕರೆಯಲು ಬಯಸುತ್ತಾರೆ ಎಂದು ಹೇಳಿದರು.

ಬಾಲಿವುಡ್‌ನ ಮೌನದ ಬಗ್ಗೆ ನಸೀರುದ್ದೀನ್ ಶಾ ಏನು ಹೇಳಿದರು?

ವಾಸ್ತವವಾಗಿ, ಸಿಜೆಪಿ ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯ ಸಮಯದಲ್ಲಿ ಅನೇಕ ಬಾಲಿವುಡ್ ತಾರೆಯರ ಮೌನವನ್ನು ನಸೀರುದ್ದೀನ್ ಶಾ ಪ್ರಶ್ನಿಸಿದ್ದರು. ಅವರ ಆತ್ಮಸಾಕ್ಷಿ ಹೇಳಿದಾಗ ಮಾತನಾಡುವುದಾಗಿ ಅವರು ಹೇಳಿದ್ದರು. ಬಾಯಿಯಲ್ಲಿ ಮೂಳೆ ಇರುವ ನಾಯಿ ಬೊಗಳಲು ಸಾಧ್ಯವಿಲ್ಲ ಎಂದು ನಾಸೀರುದ್ದೀನ್ ಶಾ ಒಂದು ಗಾದೆಯನ್ನು ಉಲ್ಲೇಖಿಸಿ ಹೇಳಿದರು. ಮೂಳೆ ಬಾಯಿಯಿಂದ ಬಿದ್ದಾಗ ಅಥವಾ ಹಲ್ಲು ಮುರಿದಾಗ ಮಾತ್ರ ಅದು ಬೊಗಳುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!