ಗಾಯಕಿ ಹಾಗೂ ಬಾಲಿವುಡ್ ನಟಿ ಶೆಹನಾಜ್ ಗಿಲ್ ಅವರು ಶೂಟಿಂಗ್ ಸೆಟ್‌ನಲ್ಲಿ ಆಕಸ್ಮಿಕವಾಗಿ ಅವರ ಮೂಗುತಿ ಬಾಯಿಗೆ ಬಿದ್ದಿದ್ದು, ಅದನ್ನು ನುಂಗಿ ಒದ್ದಾಡಿದ ಆಘಾತಕಾರಿ ಘಟನೆ ಸಂಭವಿಸಿದೆ.
ತೆರೆಯ ಹಿಂದಿನ ಆಘಾತಕಾರಿ ಘಟನೆಯ ವಿಡಿಯೋವನ್ನು ಸ್ವತಃ ನಟಿ ಶೆಹನಾಜ್ ಅವರೇ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, 'ಇಷ್ಕ್ ನಾಮಾ' ಸಿನಿಮಾ ಚಿತ್ರೀಕರಣ ವೇಳೆ ಶೂಟಿಂಗ್ ಸೆಟ್‌ನಲ್ಲಿ ನಟಿ ಓಡುತ್ತಿದ್ದಾಗ, ಅವರ ಮುಗುತಿ ಇದ್ದಕ್ಕಿದ್ದಂತೆ ಅವರ ಬಾಯಿಗೆ ಹೋಯಿತು. ಅದನ್ನು ಅವರು ಆಕಸ್ಮಿಕವಾಗಿ ನುಂಗಿದರು. ಈ ಘಟನೆಯ ಹೊರತಾಗಿಯೂ, ಶೆಹನಾಜ್ ಚಿತ್ರೀಕರಣವನ್ನು ನಿಲ್ಲಿಸಲಿಲ್ಲ ಮತ್ತು ಕೆಲಸವನ್ನು ಪೂರ್ಣಗೊಳಿಸಿದರು.
ಸಹ ನಟ ಸೌರಭ್ ಸಚ್‌ದೇವ ಅವರು ನಟಿಯ ಬೆನ್ನು ತಟ್ಟುವ ಮೂಲಕ ಆಕೆಗೆ ಸಹಾಯ ಮಾಡುತ್ತಾರೆ. ಈ ವೇಳೆ ಪಂಜಾಬಿ ನಟಿ ಕೆಮ್ಮುತ್ತಿರುವುದು ಮತ್ತು ವಾಂತಿ ಮಾಡಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶೂಟಿಂಗ್ ಸೆಟ್‌ನಲ್ಲಿ ನಡೆದ ಈ ಅನಿರೀಕ್ಷಿತ ಕ್ಷಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಜೊತೆಗೆ ಶೆಹ್ನಾಜ್ ಗಿಲ್, ಈ ಘಟನೆಗೂ ಮುನ್ನ ನಡೆದ ಸಣ್ಣ ಬಿಹೈಂಡ್ ದಿ ಸೀನ್ಸ್ ಕಥೆಯನ್ನು ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ಪ್ರತಿಕ್ರಿಯಿಸಿದ್ದಾರೆ. ನಟಿಯೇ ವಿಡಿಯೋ ಹಂಚಿಕೊಂಡಿರುವುದರಿಂದ ಈ ಘಟನೆ ಮತ್ತಷ್ಟು ಗಮನ ಸೆಳೆದಿದೆ.