ಯಶ್, ಸ್ಪರ್ಧಿ ಹಾಗೂ ಅಮಿತಾಬ್ ಬಚ್ಚನ್ ಅವರ ಸಾಂದರ್ಭಿಕ ಚಿತ್ರ 
ಬಾಲಿವುಡ್

ಕೌನ್ ಬನೇಗಾ ಕರೋಡ್ಪತಿ KBC18: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶ್ನೆ ಕೇಳಿದ ಅಮಿತಾಬ್ ಬಚ್ಚನ್; Video ವೈರಲ್!

ಅಮಿತಾಬ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿಯ 18ನೇ ಸೀಸನ್‌ನೊಂದಿಗೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಹೊಸ ಸೀಸನ್ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

ಅಮಿತಾಬ್ ಬಚ್ಚನ್ ಅವರ ಜನಪ್ರಿಯ 'ಕೌನ್ ಬನೇಗಾ ಕರೋಡ್ಪತಿ (KBC) ಕಾರ್ಯಕ್ರಮದ ಇತ್ತೀಚಿನ ಸೀಸನ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶೇಷವಾಗಿ ಕನ್ನಡದ ಹೆಮ್ಮೆಯ ಸೂಪರ್‌ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' (Toxic) ಬಿಡುಗಡೆಗೆ ಮುನ್ನವೇ ಅವರನ್ನು ಕುರಿತಾದ ಒಂದು ಪ್ರಶ್ನೆಯನ್ನು ಕೇಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಕಿಂಗ್ ಸ್ಟಾರ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿಯ 18ನೇ ಸೀಸನ್‌ನೊಂದಿಗೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಹೊಸ ಸೀಸನ್ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

ಆಗಸ್ಟ್ 10 ರಂದು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ, ಬಚ್ಚನ್ ಅವರು ಸ್ಪರ್ಧಿಗಳಿಗೆ ಸವಾಲಿನ ಪ್ರಶ್ನೆಗಳನ್ನು ಕೇಳುತ್ತಾ ಕಾರ್ಯಕ್ರಮವನ್ನು ಮುನ್ನಡೆಸುತ್ತಾರೆ. ಇದೀಗ ಈ ರಸಪ್ರಶ್ನೆ ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.

ಯಶ್ ಕುರಿತಾದ KBC 18ರ ಪ್ರಶ್ನೆ ವೈರಲ್: ವೈರಲ್ ವಿಡಿಯೋದಲ್ಲಿ ಅಮಿತಾಬ್ ಬಚ್ಚನ್ ಅವರು ಸ್ಪರ್ಧಿಯೊಬ್ಬರಿಗೆ 20,000 ರೂ. ಮೌಲ್ಯದ ಪ್ರಶ್ನೆಯೊಂದನ್ನು ಕೇಳುತ್ತಾರೆ. ರಜನಿಕಾಂತ್ 'ಸೂಪರ್' Super ಸ್ಟಾರ್ ಆಗಿದ್ದರೆ, ಚಿರಂಜೀವಿ 'ಮೆಗಾ' ಸ್ಟಾರ್, ಮತ್ತು ಪವನ್ ಕಲ್ಯಾಣ್ 'ಪವರ್' (Power) ಆಗಿದ್ದರೆ, ಯಶ್ ಏನಾಗಿದ್ದಾರೆ? ಎಂಬ ಪ್ರಶ್ನೆ ಇದಾಗಿದೆ.

ತದನಂತರ ಸ್ಪರ್ಧಿ ರಾಕಿಂಗ್ ಸ್ಟರ್ ಯಶ್ ಎಂದು ಸರಿಯಾದ ಉತ್ತರ ನೀಡುವ ಮೂಲಕ ಬಹುಮಾನ ಗೆದ್ದಿದ್ದಾರೆ. ಇದು ಆನ್ ಲೈನ್ ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ದಕ್ಷಿಣ ಭಾರತದ ಕೆಲವು ಅತ್ಯುನ್ನತ ಸ್ಟಾರ್ ಗಳೊಂದಿಗೆ ಕನ್ನಡದ ಸ್ಟಾರ್ ಬೆಳವಣಿಗೆ ಬಗ್ಗೆ ಅವರ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'SIR ದೊಡ್ಡ ಪಿತೂರಿ; ಅರ್ಹ ಮತದಾರರ ಹೆಸರು ಅಳಿಸಲು ಪೂರ್ವಮುದ್ರಿತ Form-7 ಪೂರೈಕೆ': ಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ; Video

ಶಾಸನಬದ್ಧ ಕಾರ್ಯವಿಧಾನ ಅನುಸರಿಸದೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಿಲ್ಲ: ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಕೆಂಡ..!

ಪ್ರದೋಷ್ ಮಾಫಿ ಸಾಕ್ಷಿ ಟೆನ್ಶನ್‌: ಕೋಪ, ಮಾನಸಿಕ ಒತ್ತಡ ತಣಿಸಿಕೊಳ್ಳಲು ಮಳೆಯಲ್ಲೇ ದರ್ಶನ್‌ ವಾಕಿಂಗ್‌!

Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಳ, ವಿಮಾನ ಇಂಧನವೂ ದುಬಾರಿ..!