ಹಾವು ರಕ್ಷಕ ವಿಕ್ಕಿ ದುಬೆ  
ಬಾಲಿವುಡ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಮನ್ನತ್' ನಿವಾಸದಲ್ಲಿ 8 ಅಡಿ ಉದ್ದದ ಹಾವಿನ ರಕ್ಷಣೆ! ಮತ್ತೊಂದು ನಾಪತ್ತೆ

ಶೆಡ್ ಒಂದರ ಕೆಳಗೆ ಎರಡು ಹಾವುಗಳು ಹೆಣೆದುಕೊಂಡಿರುವುದು ಕಂಡುಬಂದಿವೆ. ಬಳಿಕ ಹಾವು ರಕ್ಷಕ ವಿಕ್ಕಿ ದುಬೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶೋಧ ಕಾರ್ಯವನ್ನು ಕೈಗೊಂಡಿತು.

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಬಾಂದ್ರಾದಲ್ಲಿರುವ 'ಮನ್ನತ್' ನಿವಾಸದಿಂದ 8 ಅಡಿ ಉದ್ದದ ಹಾವನ್ನು ರಕ್ಷಿಸಲಾಗಿದ್ದು, ಮತ್ತೊಂದು ನಾಪತ್ತೆಯಾಗಿದೆ. ನಿನ್ನೆ ಸಂಜೆ ಮನೆಯ

ಶೆಡ್ ಒಂದರ ಕೆಳಗೆ ಎರಡು ಹಾವುಗಳು ಹೆಣೆದುಕೊಂಡಿರುವುದು ಕಂಡುಬಂದಿವೆ. ಬಳಿಕ ಹಾವು ರಕ್ಷಕ ವಿಕ್ಕಿ ದುಬೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶೋಧ ಕಾರ್ಯವನ್ನು ಕೈಗೊಂಡಿತು.

ಸುಮಾರು 8 ಅಡಿ ಉದ್ದವಿದ್ದ ಹಾವುಗಳಲ್ಲಿ ಒಂದನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ದುಬೆ ಯಶಸ್ವಿಯಾದರು. ಈ ಹಾವು 'ಧಮನ್' ಅಥವಾ 'ಇಂಡಿಯನ್ ರಾಟ್ ಸ್ನೇಕ್' (ಭಾರತೀಯ ಇಲಿ ಹಾವು) ಎಂದು ಗುರುತಿಸಲಾಗಿದೆ. ಇದು ವಿಷಕಾರಿಯಲ್ಲದ ಜಾತಿಯಾಗಿದ್ದು, ಮನುಷ್ಯರಿಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ ಎನ್ನಲಾಗಿದೆ.

ಆದರೆ, ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ಎರಡನೇ ಹಾವು ತಪ್ಪಿಸಿಕೊಂಡು ಹೋಯಿತು. ಅದು ಕಾಣೆಯಾದದ್ದು 'ಮನ್ನತ್'ನ ಭದ್ರತಾ ಸಿಬ್ಬಂದಿ ಮತ್ತು ಮನೆಯವರಲ್ಲಿ ಆತಂಕವನ್ನು ಉಂಟುಮಾಡಿದ್ದರಿಂದ ಮನೆ ಆವರಣದಲ್ಲಿ ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಯಿತು. ಎಷ್ಟೇ ಪ್ರಯತ್ನಿಸಿದರೂ, ಎರಡನೇ ಹಾವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ರಕ್ಷಿಸಲಾದ ಹಾವು ಅಪಾಯಕಾರಿಯಲ್ಲ, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ದುಬೆ ಅಲ್ಲಿದ್ದವರಿಗೆ ಭರವಸೆ ನೀಡಿದರು. ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ, ಸೆರೆಹಿಡಿಯಲಾದ 'ಧಮನ್' ಹಾವನ್ನು ನಂತರ ಅದರ ನೈಸರ್ಗಿಕ ಆವಾಸಸ್ಥಾನದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!