ಕಂಗನಾ ರಣಾವತ್ - ಕೃತಿ ಸನೋನ್ 
ಬಾಲಿವುಡ್

'ಮಹಿಳೆಯರು ಏನು ಧರಿಸಬೇಕೆಂದು ಹೇಳುವುದನ್ನು ನಿಲ್ಲಿಸಿ': ಕಂಗನಾ ರಣಾವತ್ ಟೀಕೆಗೆ ಕೃತಿ ಸನೋನ್ ತಿರುಗೇಟು

ಸಾಂಪ್ರದಾಯಿಕ ಹಬ್ಬವಾದ 'ರಕ್ಷಾ ಬಂಧನ'ಕ್ಕೆ ಪಾಶ್ಚಾತ್ಯ ಶೈಲಿಯ ಉಡುಪನ್ನು ಧರಿಸಿದ್ದಕ್ಕಾಗಿ, ಕಂಗನಾ ರಣಾವತ್‌ಗಿಂತ ಮೊದಲೇ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಅಸಮಾಧಾನ ವ್ಯಕ್ತಪಡಿಸಿತ್ತು.

ಮುಂಬೈ: ರಾಖಿ ಹಬ್ಬದ ವಿಶೇಷ ಜಾಹೀರಾತೊಂದರಲ್ಲಿನ ತಮ್ಮ ಉಡುಪಿನ ಕುರಿತು ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಮಾಡಿದ ಟೀಕೆಗೆ ನಟಿ ಕೃತಿ ಸನೋನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮಹಿಳೆಯರ ಉಡುಪಿನ ಆಯ್ಕೆಯು ಸದಾ ಸಮಾಜದ ಸೂಕ್ಷ್ಮ ಪರಿಶೀಲನೆಗೆ ಅಥವಾ ಟೀಕೆಗೆ ಗುರಿಯಾಗುವ ವಿಷಯದ ಕುರಿತಾಗಿಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

'ಅಲ್ಲದೆ, ಮಹಿಳೆಯರು ಏನು ಧರಿಸಬೇಕು ಎಂದು ಅವರಿಗೆ ನಿರ್ದೇಶಿಸುವುದನ್ನು ನಾವೆಂದಾದರೂ ನಿಲ್ಲಿಸುತ್ತೇವೆಯೇ? ಸಾಂಪ್ರದಾಯಿಕ ಉಡುಪಿನ ಶೈಲಿಗಳು ಕಾಲಕ್ರಮೇಣ ಬದಲಾಗಿವೆ, ಆದರೂ ಒಬ್ಬ ಮಹಿಳೆಯ ಸಂಸ್ಕೃತಿಯ ಮೇಲಿನ ಗೌರವವನ್ನು ಕೇವಲ ಆಕೆಯ ಉಡುಪಿನ ಮೂಲಕವೇ ಅಳೆಯಲಾಗುತ್ತದೆ! ಸಂಸ್ಕೃತಿ ಮತ್ತು ಸಂಪ್ರದಾಯಗಳು ಇರುವುದು ಆಕೆಯ ಹೃದಯದಲ್ಲಿಯೇ ಹೊರತು, ಆಕೆಯ ಉಡುಪಿನ ವಿನ್ಯಾಸದಲ್ಲಲ್ಲ!" ಎಂದು ಕೃತಿ ಬರೆದಿದ್ದಾರೆ.

'ಹಬ್ಬಗಳ ಮೂಲ ಸಾರವು ನೀವು ಧರಿಸುವ ಉಡುಪಿನಲ್ಲಿಲ್ಲ, ಬದಲಾಗಿ ಸಂಪ್ರದಾಯಗಳ ಬಗ್ಗೆ ನೀವು ಹೊಂದಿರುವ ಭಾವನೆಗಳು ಮತ್ತು ಅವುಗಳಿಗೆ ನೀಡುವ ಅರ್ಥದಲ್ಲಿ ಅಡಗಿದೆ' ಎಂದು ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಬರೆದಿದ್ದಾರೆ.

ಸಹೋದರನಿಗೆ ರಾಖಿ ಕಟ್ಟುವ ಸಾಂಪ್ರದಾಯಿಕ ಪದ್ಧತಿಯನ್ನು ಬದಿಗಿಟ್ಟು, ತಾನು ಮತ್ತು ತನ್ನ ಸಹೋದರಿ ಈ ಹಬ್ಬವನ್ನು ಅಷ್ಟೇ ಉತ್ಸಾಹ ಹಾಗೂ ಹುರುಪಿನಿಂದ ಆಚರಿಸುವುದಾಗಿ ಕೃತಿ ಸನೋನ್ ತಿಳಿಸಿದ್ದಾರೆ.

'ರಕ್ಷಾಬಂಧನವು ರಕ್ಷಣೆಯ ಬಂಧವಾಗಿದೆ. ನಾವಿಬ್ಬರೂ ಪರಸ್ಪರರಿಗೆ ರಾಖಿ ಕಟ್ಟಿಕೊಳ್ಳುತ್ತೇವೆ. ಒಬ್ಬ ಸಹೋದರ ನೀಡಬಹುದಾದ ರಕ್ಷಣೆಗೆ ಕಡಿಮೆಯಿಲ್ಲದಂತೆ ನಾವಿಬ್ಬರೂ ಪರಸ್ಪರರನ್ನು ರಕ್ಷಿಸಿಕೊಳ್ಳಬಲ್ಲೆವು ಎಂಬುದು ನಮಗೆ ತಿಳಿದಿದೆ. ನಾವು ಪರಸ್ಪರರ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ನಮ್ಮ ಪಾಲಿಗೆ, ಈ ಪ್ರಾರ್ಥನೆ ಮತ್ತು ಭರವಸೆಯು ನಮ್ಮ ಸಾಕು ನಾಯಿಗಳಿಗೂ ಅನ್ವಯಿಸುತ್ತದೆ! ಏಕೆಂದರೆ, ಅವು ಕೂಡ ನಮ್ಮ ಕುಟುಂಬದ ಸದಸ್ಯರೇ' ಎಂದು ಅವರು ಹೇಳಿದ್ದಾರೆ.

ಆಭರಣದ ಜಾಹೀರಾತೊಂದರಲ್ಲಿ, ಕೃತಿ ಅವರು ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್‌ನೊಂದಿಗೆ ಬ್ರಾಲೆಟ್-ಶೈಲಿಯ ಬ್ಲೌಸ್ ಧರಿಸಿ ಕಾಣಿಸಿಕೊಂಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಾಂಪ್ರದಾಯಿಕ ಹಬ್ಬವಾದ 'ರಕ್ಷಾ ಬಂಧನ'ಕ್ಕೆ ಪಾಶ್ಚಾತ್ಯ ಶೈಲಿಯ ಉಡುಪನ್ನು ಧರಿಸಿದ್ದಕ್ಕಾಗಿ, ಕಂಗನಾ ರಣಾವತ್‌ಗಿಂತ ಮೊದಲೇ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಅಸಮಾಧಾನ ವ್ಯಕ್ತಪಡಿಸಿತ್ತು.

ಕೃತಿ ಅವರ ಜಾಹೀರಾತಿನ ಕುರಿತು ವ್ಯಂಗ್ಯವಾಡುತ್ತಾ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ, 'ಮಹಿಳೆಯಾಗಿ ಇದೊಂದು ಅದ್ಭುತ ಸಮಯ. ನಮ್ಮ ವಾರ್ಡ್‌ರೋಬ್‌ಗಳು ವೈವಿಧ್ಯಮಯ ಬಟ್ಟೆಗಳಿಂದ ತುಂಬಿವೆ; ಇಂದಿನ ಮಹಿಳೆ ಜಾಗತಿಕ ಮಟ್ಟದ ಮಹಿಳೆಯಾಗಿ ಗುರುತಿಸಿಕೊಂಡಿದ್ದಾಳೆ. ಕಾಕ್‌ಟೈಲ್ ಡ್ರೆಸ್‌ಗಳಿಂದ ಹಿಡಿದು ಲೆಹಂಗಾ-ಚೋಲಿ, ಜೀನ್ಸ್‌ನಿಂದ ಸೀರೆ, ಬಿಕಿನಿಯಿಂದ ಸಲ್ವಾರ್-ಕಮೀಜ್‌ವರೆಗೆ ನಮಗೆ ಇಂದು ಅನೇಕ ಆಯ್ಕೆಗಳು ಲಭ್ಯವಿವೆ. ಹೀಗಿರುವಾಗ, ಬಿಕಿನಿ ಅಥವಾ ಒಳ ಉಡುಪು ಧರಿಸಿ ಸಹೋದರನಿಗೆ ರಾಖಿ ಕಟ್ಟುವುದೇಕೆ? ನಿಮ್ಮ ಸ್ಟೈಲಿಂಗ್ ಆಯ್ಕೆಗಳೆಲ್ಲ ಎಲ್ಲಿ ಹೋದವು? ಹಾ ಹಾ, ಈ ಜಾಹೀರಾತು ಉದ್ದೇಶಪೂರ್ವಕವಾಗಿಯೇ ವಿಚಿತ್ರವಾಗಿ (creepy) ಕಾಣುತ್ತಿದೆ!' ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್