ಕೃತಿ ಸನೋನ್ 
ಬಾಲಿವುಡ್

'ನಿಮಗೆಲ್ಲರಿಗೂ ಪ್ರೀತಿ ಮತ್ತು ಸಕಾರಾತ್ಮಕತೆ ಸಿಗಲಿ': ಕೃತಿ ಸನೋನ್ ಉಡುಪಿನ ಕುರಿತು ತೀವ್ರ ಟೀಕೆಗಳ ನಂತರ 'ರಕ್ಷಾ ಬಂಧನ' ಜಾಹೀರಾತು ಹಿಂಪಡೆದ 'GIVA'!

ಬ್ರ್ಯಾಂಡ್ ಹಿಂಪಡೆದಿರುವ ಆ ಜಾಹೀರಾತಿನಲ್ಲಿ, ಕೃತಿ ಸನೋನ್ ಅವರು bralette ಶೈಲಿಯ ಬ್ಲೌಸ್, ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿ ರಕ್ಷಾಬಂಧನವನ್ನು ಆಚರಿಸುತ್ತಿರುವುದು ಕಂಡುಬಂದಿತ್ತು.

ನಟಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಬಗ್ಗೆ ಟೀಕೆಗಳು ವ್ಯಕ್ತವಾದ ಬಳಿಕ ಜುವೆಲ್ಲರಿ ಬ್ರಾಂಡ್ 'GIVA' ತನ್ನ ರಕ್ಷಾ ಬಂಧನ ಜಾಹೀರಾತನ್ನು ಹಿಂಪಡೆದಿದೆ. ಕೃತಿ ಸನೋನ್ ತಮ್ಮ ಟೀಕಾಕಾರರ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ, 'ಬಿಕಿನಿ ಧರಿಸಿ ರಾಖಿ ಕಟ್ಟಿದ್ದಕ್ಕಾಗಿ' ಕೃತಿ ಸನೋನ್ ಅವರನ್ನು ಟೀಕಿಸಿದ್ದರು.

ವಿವಾದ ಉಂಟಾದ ಕೆಲವೇ ದಿನಗಳ ನಂತರ 'GIVA' ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಹೇಳಿಕೆಯೊಂದನ್ನು ಹಂಚಿಕೊಂಡಿದ್ದು, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ತನಗಿರುವ ಗೌರವವನ್ನು ಒತ್ತಿಹೇಳಿದೆ. 'ಗೌರವದ ದೃಷ್ಟಿಯಿಂದ' ತಾವು ಆ ಜಾಹೀರಾತನ್ನು ಎಲ್ಲ ಮಾಧ್ಯಮಗಳಿಂದ ಹಿಂಪಡೆದಿರುವುದಾಗಿ ತಿಳಿಸಿದೆ.

'ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳ ಬಗ್ಗೆ ನಮಗೆ ಅತ್ಯಂತ ಹೆಚ್ಚಿನ ಗೌರವ ಮತ್ತು ಆದರಗಳಿವೆ. ಒಂದು ಬ್ರ್ಯಾಂಡ್ ಆಗಿ, ಇಂತಹ ಸಂತೋಷದ ಕ್ಷಣಗಳನ್ನು ಇಡೀ ಕುಟುಂಬದೊಂದಿಗೆ ಆಚರಿಸುವುದರಲ್ಲಿ ನಾವು ಯಾವಾಗಲೂ ನಂಬಿಕೆ ಇಟ್ಟಿದ್ದೇವೆ; ಮತ್ತು ಈ ಬಾರಿ ಆ ಪ್ರೀತಿ ಹಾಗೂ ಸಂಭ್ರಮವನ್ನು ನಮ್ಮ ಸಾಕುಪ್ರಾಣಿಗಳಿಗೂ ವಿಸ್ತರಿಸಲು ನಾವು ಬಯಸಿದ್ದೆವು' ಎಂದಿದೆ.

'ನಮ್ಮ ಇತ್ತೀಚಿನ ಜಾಹೀರಾತು ಸಮಾಜದ ಕೆಲವು ವರ್ಗಗಳ ಭಾವನೆಗಳಿಗೆ ಅರಿವಿಲ್ಲದೆ ನೋವುಂಟು ಮಾಡಿದ್ದರೆ, ಅದು ನಮ್ಮ ಉದ್ದೇಶವಾಗಿರಲಿಲ್ಲ. ಗೌರವದ ದೃಷ್ಟಿಯಿಂದ, ನಾವು ಆ ಜಾಹೀರಾತನ್ನು ಎಲ್ಲ ಮಾಧ್ಯಮಗಳಿಂದ ಹಿಂಪಡೆದಿದ್ದೇವೆ. ಈ ಹಬ್ಬದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಪ್ರೀತಿ ಮತ್ತು ಸಕಾರಾತ್ಮಕತೆ ಸಿಗಲಿ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಬ್ರ್ಯಾಂಡ್ ಹಿಂಪಡೆದಿರುವ ಆ ಜಾಹೀರಾತಿನಲ್ಲಿ, ಕೃತಿ ಸನೋನ್ ಅವರು bralette ಶೈಲಿಯ ಬ್ಲೌಸ್, ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿ ರಕ್ಷಾಬಂಧನವನ್ನು ಆಚರಿಸುತ್ತಿರುವುದು ಕಂಡುಬಂದಿತ್ತು; ಈ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರ ಒಂದು ವರ್ಗದಿಂದ ವಿರೋಧ ವ್ಯಕ್ತವಾಗಿತ್ತು.

ಕಂಗನಾ ರನಾವತ್ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ಆ ಜಾಹೀರಾತು 'ಉದ್ದೇಶಪೂರ್ವಕವಾಗಿಯೇ ಅಸಹ್ಯಕರವಾಗಿದೆ' ಎಂದು ಬಣ್ಣಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಕೃತಿ ಸನೋನ್, ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ, 'ಹಬ್ಬಗಳ ಸಾರವು ನೀವು ಧರಿಸುವ ಉಡುಪಿನಲ್ಲಿಲ್ಲ, ಬದಲಾಗಿ ಸಂಪ್ರದಾಯಗಳ ಬಗ್ಗೆ ನಿಮಗಿರುವ ಭಾವನೆ ಮತ್ತು ಗೌರವದಲ್ಲಿದೆ... ಅಲ್ಲದೆ, ಮಹಿಳೆಯರು ಏನು ಧರಿಸಬೇಕು ಎಂದು ಅವರಿಗೆ ನಿರ್ದೇಶಿಸುವುದನ್ನು ನಾವೆಂದಾದರೂ ನಿಲ್ಲಿಸುತ್ತೇವೆಯೇ? ಸಾಂಪ್ರದಾಯಿಕ ಉಡುಪಿನ ಶೈಲಿ ಕಾಲಕ್ರಮೇಣ ಬದಲಾಗಿದೆ, ಆದರೂ ಒಬ್ಬ ಮಹಿಳೆಗೆ ತನ್ನ ಸಂಸ್ಕೃತಿಯ ಮೇಲಿರುವ ಗೌರವವನ್ನು ಕೇವಲ ಆಕೆಯ ಉಡುಪಿನ ಮೂಲಕವೇ ಅಳೆಯಲಾಗುತ್ತದೆ! ಸಂಸ್ಕೃತಿ ಮತ್ತು ಸಂಪ್ರದಾಯಗಳು ಆಕೆಯ ಹೃದಯದಲ್ಲಿರುತ್ತವೆಯೇ ಹೊರತು, ಆಕೆಯ ಉಡುಪಿನ ವಿನ್ಯಾಸದಲ್ಲಲ್ಲ!' ಎಂದು ಬರೆದಿದ್ದಾರೆ.

ನಾಯಿಯೊಂದಕ್ಕೆ ರಾಖಿ ಕಟ್ಟಿದ್ದನ್ನು ವಿರೋಧಿಸಿದ ಸಾಮಾಜಿಕ ಜಾಲತಾಣದ ಒಂದು ವರ್ಗದವರನ್ನು 'ಕಾಕ್‌ಟೇಲ್ 2' ಚಿತ್ರದ ನಟಿ ತೀವ್ರವಾಗಿ ಟೀಕಿಸಿದರು.

'ರಕ್ಷಾಬಂಧನವು ರಕ್ಷಣೆಯ ಬಂಧವಾಗಿದೆ. ನಾನೂ ಮತ್ತು ನನ್ನ ಸಹೋದರಿಯೂ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಒಬ್ಬ ಸಹೋದರ ನೀಡುವಷ್ಟೇ ಸಮರ್ಥವಾಗಿ ನಾವು ಪರಸ್ಪರರನ್ನು ರಕ್ಷಿಸಿಕೊಳ್ಳಬಲ್ಲೆವು ಎಂಬುದು ನಮಗೆ ತಿಳಿದಿದೆ. ನಾವು ಪರಸ್ಪರರ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ನಮ್ಮ ಪಾಲಿಗೆ, ಈ ಪ್ರಾರ್ಥನೆ ಮತ್ತು ವಾಗ್ದಾನವು ನಮ್ಮ ನಾಯಿಗಳಿಗೂ ಅನ್ವಯಿಸುತ್ತದೆ! ಏಕೆಂದರೆ, ಅವು ಕೂಡ ನಮ್ಮ ಕುಟುಂಬದ ಭಾಗವೇ' ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣದ ಕೆಲವರು ಹಿಂದೂ ಹಬ್ಬಗಳನ್ನು ಹಗುರವಾಗಿ ಪರಿಗಣಿಸಿದ್ದಕ್ಕಾಗಿ 'GIVA' ಸಂಸ್ಥೆಯನ್ನು ಟೀಕಿಸಿದರೆ, ಇನ್ನು ಕೆಲವರು ಒಳ ಉಡುಪು ಧರಿಸಿ ರಾಖಿ ಕಟ್ಟಿದ್ದಕ್ಕಾಗಿ ನಟಿಯನ್ನು ಟೀಕಿಸಿದರು.

ಕಂಗನಾ ರಣಾವತ್ ಅವರಿಗೆ ಕೃತಿ ಸನೋನ್ ನೀಡಿದ ಪ್ರತಿಕ್ರಿಯೆ ವೈರಲ್ ಆದ ನಂತರ, ಅವರ ಸಹೋದರಿ ನೂಪುರ್ ಸನೋನ್ ಕೂಡ ಈ ವಿವಾದದ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದು, ಬಿಜೆಪಿ ಸಂಸದೆಗೆ 'ಗೌರವಯುತವಾಗಿ ಪ್ರಬುದ್ಧರಾಗಿ' ಎಂದು ಸಲಹೆ ನೀಡಿದ್ದಾರೆ.

ನೂಪುರ್ ಸನೋನ್ ಅವರು ಕೃತಿಯ ಪೋಸ್ಟ್ ಅನ್ನು ಹಂಚಿಕೊಂಡು, 'ಮತ್ತೊಬ್ಬ ಮಹಿಳೆ ಏನು ಧರಿಸಬೇಕು ಎಂಬುದರ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುವುದನ್ನು ಒಮ್ಮೆ ಊಹಿಸಿಕೊಳ್ಳಿ. ದಯವಿಟ್ಟು ಗೌರವಯುತವಾಗಿ ಪ್ರಬುದ್ಧರಾಗಿ. ವಿಶೇಷ ಸೂಚನೆ: ಆಕೆ ರಾಖಿ ಕಟ್ಟಿದ್ದು ನನಗೇ; ಆ ವಿಷಯದಲ್ಲಿ ನನಗೇ ಯಾವುದೇ ಸಮಸ್ಯೆಯಿಲ್ಲದಿರುವಾಗ, ನಿಮಗೇಕೆ ಸಮಸ್ಯೆ?' ಎಂದು ಪ್ರಶ್ನಿಸಿದ್ದಾರೆ.

ಕೃತಿ ಸನೋನ್ ಅವರು ಟೀಕೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ಮತ್ತು ಚರ್ಚೆ ಉಂಟಾದ ಹಿನ್ನೆಲೆಯಲ್ಲಿ, 'GIVA' ಸಂಸ್ಥೆಯು ತನ್ನ ರಕ್ಷಾ ಬಂಧನ ಜಾಹೀರಾತನ್ನು ಹಿಂಪಡೆಯಲು ನಿರ್ಧರಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ