ಬಾಲಿವುಡ್ ನಟಿ ದಿಯಾ ಮಿರ್ಜಾ 
ಬಾಲಿವುಡ್

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!

2004ರ 'ತುಮ್ಸಾ ನಹೀಂ ದೇಖಾ' (Tumsa Nahin Dekha) ಚಿತ್ರದ ಬಗ್ಗೆ ಮಾತನಾಡುತ್ತಾ, 'ಮುಝೇ ತುಮ್ಸೆ ಮೊಹಬ್ಬತ್ ಹೈ' (Mujhe Tumse Mohabbat Hai) ಹಾಡಿನ ಶೂಟಿಂಗ್ ವೇಳೆ ಆಗಿದ್ದ ಮುಜುಗರವನ್ನು ನಟಿ ದಿಯಾ ಮಿರ್ಜಾ ಮೆಲುಕು ಹಾಕಿದ್ದಾರೆ.

ಇತ್ತೀಚಿಗೆ ಬಾಲಿವುಡ್ ನಟಿ ಕೃತಿ ಸನೋನ್ ಬಿಕಿನಿ ಧರಿಸಿ ರಾಕಿ ಕಟ್ಟಿದ ವಿವಾದ ಹಿನ್ನೆಲೆಯಲ್ಲಿ ನಟಿಯರ ಡ್ರೆಸ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಂತೆಯೇ ಮತ್ತೊರ್ವ ಬಾಲಿವುಡ್ ನಟಿ ದಿಯಾ ಮಿರ್ಜಾ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿದ್ದ ಒಂದು ಕಠಿಣ ಅನುಭವವನ್ನು ನೆನಪಿಸಿಕೊಂಡಿದ್ದಾರೆ.

2004ರ 'ತುಮ್ಸಾ ನಹೀಂ ದೇಖಾ' (Tumsa Nahin Dekha) ಚಿತ್ರದ ಬಗ್ಗೆ ಮಾತನಾಡುತ್ತಾ, 'ಮುಝೇ ತುಮ್ಸೆ ಮೊಹಬ್ಬತ್ ಹೈ' (Mujhe Tumse Mohabbat Hai) ಹಾಡಿನ ಶೂಟಿಂಗ್ ವೇಳೆ, ಪುರುಷರೇ ಹೆಚ್ಚಿದ್ದ ಚಿತ್ರೀಕರಣದ ತಂಡದ ಮುಂದೆ ಮೈತೋರಿಸುವಂತಹ (revealing) ಉಡುಪುಗಳನ್ನು ಧರಿಸಿ ನಟಿಸಬೇಕಾದಾಗ ತಮಗಾದ ಮುಜುಗರ ಮತ್ತು ಅಸಹಜ ಭಾವನೆಯ ಬಗ್ಗೆ ವಿವರಿಸಿದ್ದಾರೆ.

ಆದರೆ, ಈ ಅನುಭವ ಅವರಿಗೆ ಕೇವಲ ಒಂದು ಸವಾಲಿನ ದಿನವಾಗಿ ಉಳಿಯಲಿಲ್ಲ. ಬದಲಿಗೆ ಇದು ತಮ್ಮ ದೇಹದ ಬಗ್ಗೆ ಹೆಚ್ಚು ಮುಕ್ತವಾಗಿರಲು ಮತ್ತು ಹಿಂದೆಂದೂ ಕಾಣದಂತಹ ಆತ್ಮವಿಶ್ವಾಸವನ್ನು ಪಡೆಯಲು ನೆರವಾಯಿತು ಎಂದು ಅವರು ಹೇಳಿದ್ದಾರೆ. 'ಬಾಲಿವುಡ್ ಬಬಲ್' (Bollywood Bubble) ಜೊತೆಗೆ ಮಾತನಾಡಿದ, ಮಿರ್ಜಾ ಆ ಹಾಡಿನ ಚಿತ್ರೀಕರಣದ ಸಂದರ್ಭಗಳನ್ನು ಮೆಲುಕು ಹಾಕಿದರು.

ಚಿತ್ರೀಕರಣದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪುರುಷರ ನಡುವೆ ಅವರು ಅತ್ಯಲ್ಪ ಬಟ್ಟೆಯನ್ನು ಧರಿಸಿ ನಟಿಸಬೇಕಾದ ಪರಿಸ್ಥಿತಿ ಇತ್ತು. ತಮ್ಮ ವೃತ್ತಿಜೀವನದ ಆರಂಭದಲ್ಲಿದ್ದ ಯುವತಿಯಾಗಿ ಈ ಅನುಭವವು ಖಂಡಿತವಾಗಿಯೂ ಸುಲಭವಾಗಿರಲಿಲ್ಲ. ತಮಗೆ ರಕ್ಷಣೆ ಮತ್ತು ಬೆಂಬಲ ಸಿಗುವಂತಹ ವಾತಾವರಣವನ್ನು ಸೃಷ್ಟಿಸಿದ್ದಕ್ಕಾಗಿ ನೃತ್ಯ ನಿರ್ದೇಶಕಿ ವೈಭವಿ ಮರ್ಚೆಂಟ್ ಮತ್ತು ಇಡೀ ತಂಡಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. "ಇದು ನನ್ನನ್ನು ನಾನು ಊಹಿಸಿಕೊಳ್ಳದ ರೀತಿಯಲ್ಲಿ ಮುಕ್ತಗೊಳಿಸಿತು. ಆ ಹಾಡಿಗೆ ನಾನು ಆತ್ಮವಿಶ್ವಾಸದಿಂದ ನಟಿಸಲು ಸಾಧ್ಯವಾಗಿದ್ದಕ್ಕೆ ಮುಖ್ಯ ಕಾರಣ ನೃತ್ಯ ನಿರ್ದೇಶಕಿ ವೈಭವಿ ಮರ್ಚೆಂಟ್ ಮತ್ತು ಇಡೀ ತಂಡ. ಅವರು ನನಗೆ ಸಂಪೂರ್ಣ ಸುರಕ್ಷಿತ ಭಾವನೆಯನ್ನು ನೀಡಿದರು ಎಂದು ತಿಳಿಸಿದರು.

ಒಬ್ಬ ಯುವತಿಯಾಗಿ, ಇದು ಬಹುಶಃ ನಾನು ಮಾಡಿದ ಅತ್ಯಂತ ಕಠಿಣ ಕೆಲಸಗಳಲ್ಲಿ ಒಂದಾಗಿತ್ತು. ನೂರಾರು ಪುರುಷರ ಮುಂದೆ ಒಳ ಉಡುಪುಗಳನ್ನು ಧರಿಸಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಆ ಹಂತದಲ್ಲಿ ನಟನೆಯ ಬಗ್ಗೆ ತಮ್ಮ ತಿಳುವಳಿಕೆ ಹೇಗೆ ಬೆಳವಣಿಗೆಯಾಯಿತು ಎಂಬುದರ ಬಗ್ಗೆಯೂ ಮಿರ್ಜಾ ಮಾತನಾಡಿದರು. ಅವರ ಪಾಲಿಗೆ, ಪ್ರದರ್ಶನವನ್ನು ಎಷ್ಟು ಜನರು ನೋಡುತ್ತಿದ್ದಾರೆ ಎಂಬುದಕ್ಕಿಂತ ಪಾತ್ರದ ಮೂಲ ಸಾರವನ್ನು ಸರಿಯಾಗಿ ಗ್ರಹಿಸುವುದು ಮುಖ್ಯವಾಗಿತ್ತು ಎಂದರು.

ಅಷ್ಟರಲ್ಲಾಗಲೇ, ಒಬ್ಬ ನಟಿಯಾಗಿ ತನ್ನ ಪಾತ್ರದ ಸತ್ಯಾಸತ್ಯತೆಯನ್ನು ಮತ್ತು ಅದರ ಮೂಲಕ ಏನು ಹೇಳಹೊರಟಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ನನಗೆ ಅರಿವಾಗಿತ್ತು. ಹಾಗಾಗಿ, ಕೊಠಡಿಯಲ್ಲಿ 500 ಜನರಿದ್ದಾರೋ ಅಥವಾ 1,000 ಜನರಿದ್ದಾರೋ ಎಂಬುದು ನನಗೆ ಮುಖ್ಯವೆನಿಸಲಿಲ್ಲ ಶೂಟಿಂಗ್ ನಲ್ಲಿ ಪಾಲ್ಗೊಂಡೆ ಎಂದು ತಿಳಿಸಿದರು.

ಹೈದರಾಬಾದ್‌ನ ಸಂಪ್ರದಾಯವಾದಿ ಕುಟುಂಬದಲ್ಲಿ ಬೆಳೆದದ್ದು ಮತ್ತು ಅದು ತಮ್ಮನ್ನು ತಾವು ನೋಡಿಕೊಳ್ಳುವ ದೃಷ್ಟಿಕೋನದ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದರ ಕುರಿತು ಮಿರ್ಜಾ ಮಾತನಾಡಿದರು. ಚಿಕ್ಕ ವಯಸ್ಸಿನಲ್ಲಿದ್ದಾಗ ತಮ್ಮ ದೇಹದ ಬಗ್ಗೆ ತಮಗೆ ಅಷ್ಟೊಂದು ಆತ್ಮವಿಶ್ವಾಸವಿರಲಿಲ್ಲ, 'ತುಮ್ಸಾ ನಹೀಂ ದೇಖಾ' (Tumsa Nahin Dekha) ಚಿತ್ರದಲ್ಲಿ ಕೆಲಸ ಮಾಡಿದ್ದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು; ಅದರಲ್ಲೂ ವಿಶೇಷವಾಗಿ 'ಮುಝೇ ತುಮ್ಸೆ ಮೊಹಬ್ಬತ್ ಹೈ' (Mujhe Tumse Mohabbat Hai) ಹಾಡು ಅವರಿಗೆ ಹೆಚ್ಚಿನ ಮುಕ್ತತೆಯ ಭಾವನೆಯನ್ನು ನೀಡಿತು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

'ಹನೂರು ಎನ್‌ಕೌಂಟರ್'ಗೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆ ಜಾಲ ಪತ್ತೆ!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!