ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಾಜಿ ಅಳಿಯ ಖ್ಯಾತ ನಟ ಧನುಷ್ ಅವರು ಖ್ಯಾತ ನಟಿ ಮೃಣಾಲ್ ಠಾಕೂರ್ ಅವರನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನ ವಿವಾಹವಾಗುತ್ತಿದ್ದಾರೆಯೇ?
ಧನುಷ್ ಮತ್ತು ಮೃಣಾಲ್ ಠಾಕೂರ್ ಅವರು ಪ್ರೇಮಿಗಳ ದಿನದಂದು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಇಂಟರ್ನೆಟ್ ತುಂಬ ಹರಿದಾಡುತ್ತಿದೆ.
ಇವರಿಬ್ಬರು ಸಂಬಂಧದಲ್ಲಿದ್ದಾರೆ ಎಂಬ ವದಂತಿ ಕೆಲವು ಸಮಯಗಳಿಂದ ಹರಿದಾಡುತ್ತಿತ್ತು. ಆ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ, ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ.
ಧನುಷ್-ಮೃಣಾಲ್ ಠಾಕೂರ್
ಧನುಷ್ ಮತ್ತು ಮೃಣಾಲ್ ಇಬ್ಬರೂ ಒಟ್ಟಿಗೆ ಚಿತ್ರದಲ್ಲಿ ಇದುವರೆಗೆ ನಟಿಸಿಲ್ಲ. ಆದರೆ ಕಳೆದ ಆಗಸ್ಟ್‌ನಲ್ಲಿ ಅಜಯ್ ದೇವಗನ್ ಅವರೊಂದಿಗೆ ಮೃಣಾಲ್ ಅವರ ಚಿತ್ರ ಸನ್ ಆಫ್ ಸರ್ದಾರ್ 2 ರ ಪ್ರೀಮಿಯರ್ ಪ್ರದರ್ಶನಕ್ಕೆ ನಟ ಧನುಷ್ ಹಾಜರಾಗಿದ್ದಾಗ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಕೇಳಿಬಂದಿತ್ತು.
ನಂತರ, ಧನುಷ್ ಮೃಣಾಲ್ ಅವರ ಚಿತ್ರ ದೋ ದಿವಾನೆ ಶಹರ್ ಮೇ ಬಗ್ಗೆ ಕಮೆಂಟ್ ಮಾಡಿದ್ದರು. ನೋಡಲು ಮತ್ತು ಕೇಳಲು ಸೊಗಸಾಗಿದೆ ಎಂದು ಬರೆದಿದ್ದರು. ಅದಕ್ಕೆ ಮೃಣಾಲ್ ಹಾರ್ಟ್ ಮತ್ತು ಸೂರ್ಯಕಾಂತಿ ಎಮೋಜಿಗಳೊಂದಿಗೆ ಉತ್ತರಿಸಿದ್ದರು. ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಮೃಣಾಲ್ ಕೂಡ ಹಾಜರಿದ್ದರು.
ಐಶ್ವರ್ಯ ಜೊತೆಗೆ ಧನುಷ್ ಮದುವೆ, ವಿಚ್ಛೇದನ
ಧನುಷ್ ಅವರ ಮಾಜಿ ಪತ್ನಿ ಐಶ್ವರ್ಯ ರಜನಿಕಾಂತ್ ಅವರೊಂದಿಗೆ 2022ರಲ್ಲಿ ಬೇರ್ಪಟ್ಟಿದ್ದರು. ನಂತರ 2024ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. 18 ವರ್ಷಗಳ ದಾಂಪತ್ಯ ಜೀವನದಲ್ಲಿ ಅವರಿಗೆ ಲಿಂಗಾ ಮತ್ತು ಯಾತ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.