ಗೌರಿ ಸ್ಪ್ರಾಟ್ - ಆಮಿರ್ ಖಾನ್ 
ಬಾಲಿವುಡ್

ಕೊನೆಗೂ ಗುಟ್ಟು ಬಿಚ್ಚಿಟ್ಟ ಆಮೀರ್ ಖಾನ್: ಗೌರಿ ಸ್ಪ್ರಾಟ್ ಜೊತೆ 3ನೇ ಮದುವೆ, ಜುಲೈ 5ರಂದು ಮುಂಬೈ ನಿವಾಸದಲ್ಲೇ ಸರಳ ವಿವಾಹ..!

ನನ್ನ ಮದುವೆ ಜುಲೈ 5ರಂದು ನಡೆಯುತ್ತಿದೆ. ತುಂಬಾ ಸಣ್ಣ ಮಟ್ಟದಲ್ಲಿ ಮನೆಯಲ್ಲಿಯೇ ಮದುವೆ ಮಾಡಿಕೊಳ್ಳುತ್ತಿದ್ದೇವೆ. ಇದು ನಮ್ಮಿಬ್ಬರಿಗೂ ಬಹಳ ವಿಶೇಷ ದಿನ" ಎಂದು ಹೇಳಿದ್ದಾರೆ.

ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ತಮ್ಮ ಮೂರನೇ ಮದುವೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.

ತಮ್ಮ ಪ್ರೇಯಸಿ ಗೌರಿ ಸ್ಪ್ರಾಟ್ ಅವರನ್ನು ಇದೇ ಜುಲೈ 5ರಂದು ವಿವಾಹವಾಗುತ್ತಿರುವುದಾಗಿ ಸ್ವತಃ ಆಮೀರ್ ಖಾನ್ ಬಹಿರಂಗಪಡಿಸಿದ್ದಾರೆ.

ಕಳೆದ ತಿಂಗಳು ಆಮೀರ್ ಖಾನ್ ಜುಲೈನಲ್ಲಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.

ಇದೀಗ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಮೊದಲ ವೆಬ್ ಸರಣಿ Peter and Pedro ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ವೇಳೆ, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಆಮೀರ್, ಮದುವೆಯ ವಿಚಾರವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ.

ನನ್ನ ಮದುವೆ ಜುಲೈ 5ರಂದು ನಡೆಯುತ್ತಿದೆ. ತುಂಬಾ ಸಣ್ಣ ಮಟ್ಟದಲ್ಲಿ ಮನೆಯಲ್ಲಿಯೇ ಮದುವೆ ಮಾಡಿಕೊಳ್ಳುತ್ತಿದ್ದೇವೆ. ಇದು ನಮ್ಮಿಬ್ಬರಿಗೂ ಬಹಳ ವಿಶೇಷ ದಿನ" ಎಂದು ಹೇಳಿದ್ದಾರೆ.

ಎರಡೂ ಕುಟುಂಬಗಳ ಸದಸ್ಯರು ಮತ್ತು ಕೆಲವೇ ಆಪ್ತ ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ನಾವು ಎಲ್ಲರ ಆಶೀರ್ವಾದ ಮತ್ತು ಶುಭಹಾರೈಕೆಗಳನ್ನು ಬಯಸುತ್ತೇವೆ. ನಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಪ್ರಾರ್ಥಿಸಿ" ಎಂದು ತಿಳಿಸಿದದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ

ಆಮೀರ್ ಅವರ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ನೆಟ್ಟಿಗ, "ಈ ಬಾರಿಯಾದರೂ ನಿಮ್ಮ ಸಂಬಂಧ ಶಾಶ್ವತವಾಗಿರಲಿ, ಶುಭವಾಗಲಿ" ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, "ಇದು ಅವರ ವೈಯಕ್ತಿಕ ಜೀವನ. ಮದುವೆಯ ಬಗ್ಗೆ ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಇಬ್ಬರೂ ಸಂತೋಷವಾಗಿದ್ದರೆ ಸಾಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಮೀರ್ ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದು, ಬಳಿಕ ವಿಚ್ಛೇದನ ಪಡೆದಿದ್ದರು. ನಂತರ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಪರಸ್ಪರ ಒಪ್ಪಿಗೆಯಿಂದ ಇಬ್ಬರೂ ಬೇರ್ಪಟ್ಟಿದ್ದರು. ಇದೀಗ ಗೌರಿ ಸ್ಪ್ರಾಟ್ ಅವರೊಂದಿಗೆ ಆಮೀರ್ ಖಾನ್ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ನೆಕ್ಲೆಸ್ ಕದ್ದ ಮಹಿಳೆಯರು; ಖತರ್ನಾಕ್ ಕಳ್ಳಿಯರ "ಕೈ"ಚಳಕ CCTVಯಲ್ಲಿ ಸೆರೆ!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!