ಧುರಂಧರ್‌ 2 
ಬಾಲಿವುಡ್

Dhurandhar 2: ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ರೂ ಕಲೆಕ್ಷನ್‌!

Sacnilk ಪ್ರಕಾರ, ಮಾರ್ಚ್ 18 ರಂದು ಬಿಡುಗಡೆಯಾದ ಚಿತ್ರ ಮೊದಲ ದಿನವೇ ಭಾರತದಲ್ಲಿ ದಾಖಲೆಯ 43 ಕೋಟಿ ರೂ. ಗಳಿಸಿತ್ತು.

ಆದಿತ್ಯ ಧಾರ್‌ ನಿರ್ದೇಶನದ, ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್‌ 2’ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿದ್ದು, ವಿಶ್ವದಾದ್ಯಂತ 500 ಕೋಟಿ ರೂ. ಕ್ಲಬ್‌ ಸೇರಿದೆ.

Sacnilk ಪ್ರಕಾರ, ಮಾರ್ಚ್ 18 ರಂದು ಬಿಡುಗಡೆಯಾದ ಚಿತ್ರ ಮೊದಲ ದಿನವೇ ಭಾರತದಲ್ಲಿ ದಾಖಲೆಯ 43 ಕೋಟಿ ರೂ. ಗಳಿಸಿದೆ.

ಭಾರತದಲ್ಲಿ ಮೊದಲ ದಿನ ಒಟ್ಟಾರೇ ರೂ.102.55 ಕೋಟಿ ಗಳಿಸಿದ ಸಿನಿಮಾ, ಎರಡನೇ ದಿನ ರೂ. 145.55 ಕೋಟಿ ಸೇರಿದಂತೆ ಒಟ್ಟಾರೇ ಎರಡು ದಿನಗಳಲ್ಲಿ 226.27 ಕೋಟಿ ರೂ. ಗಳಿಸಿದೆ.

ಇನ್ನೂ ವಿಶ್ವದಾದ್ಯಂತ ಬಿಡುಗಡೆಯಾದ ಮೊದಲ ದಿನ ಸುಮಾರು ರೂ.165 ಕೋಟಿ ರೂ.ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಧುರಂಧರ್ 2 ಸಿನಿಮಾ ಆರಂಭಿಕ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಶಾರುಖ್ ಖಾನ್ ಅವರ ಜವಾನ್, ಪಠಾಣ್ ಮತ್ತು ರಣಬೀರ್ ಕಪೂರ್ ಅವರ ಅನಿಮಲ್ ನಂತಹ ಹಿಟ್ ಚಿತ್ರಗಳನ್ನು ಹಿಂದಿಕ್ಕಿದೆ. ಪಠಾಣ್ ಮತ್ತು ಜವಾನ್ ಬಿಡುಗಡೆಯಾದ ಎರಡು ದಿನಗಳಲ್ಲಿ ಕ್ರಮವಾಗಿ 127.50 ಕೋಟಿ ಮತ್ತು 128.23 ಕೋಟಿ ರೂ. ಗಳಿಸಿದರೆ, ಅನಿಮಲ್ 130.07 ಕೋಟಿ ರೂ. ಗಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ಬುಡಕ್ಕೇ ಕೈ ಹಾಕಿದ ಇರಾನ್; Nuclear ಕೇಂದ್ರದ ಮೇಲೆ ಕ್ಷಿಪಣಿ ದಾಳಿ, ಧ್ವಂಸ?

ಆಫ್ರಿಕಾ, ದುಬೈವರೆಗೂ ಹಬ್ಬಿತ್ತು ನಟಿ 'ರನ್ಯಾ ರಾವ್' ಗೋಲ್ಡ್ ಸ್ಮಗ್ಲಿಂಗ್ ನೆಟ್ ವರ್ಕ್!

ಅಮೆರಿಕದ ಮತ್ತೊಂದು F-15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್; 4ನೇ ಯುದ್ಧ ವಿಮಾನ ಪತನ!

ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್ ವಿರುದ್ಧ ಮುಸ್ಲಿಂರ ಆಕ್ರೋಶ ಸ್ಫೋಟ; ಸಾಮೂಹಿಕ ನಾಮಪತ್ರ ಸಲ್ಲಿಕೆಗೆ ನಿರ್ಧಾರ

US ಏರ್​ಪೋರ್ಟ್ ಭದ್ರತಾ ಸಿಬ್ಬಂದಿಯ ವೇತನ ಪಾವತಿಗೆ ಎಲೋನ್ ಮಸ್ಕ್ ಮುಂದು! ಟ್ರಂಪ್ ಕಿಡಿ

SCROLL FOR NEXT