ರಣವೀರ್ ಸಿಂಗ್ 
ಬಾಲಿವುಡ್

ಬಾಲಿವುಡ್ ಚಿತ್ರರಂಗದಿಂದ 'ರಣವೀರ್ ಸಿಂಗ್' ಬ್ಯಾನ್: ಸಿನಿಮಾ ನೌಕರರ ಒಕ್ಕೂಟ ಮಹತ್ವದ ನಿರ್ಧಾರ; ಏನಿದು ವಿವಾದ?

ಈ ವಿಷಯವು ನಮ್ಮ ವ್ಯಾಪ್ತಿಯೊಳಗೆ ಬರುವುದಿಲ್ಲ ಮತ್ತು ಅದರಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳುವ ಇಮೇಲ್ ರಣವೀರ್ ಸಿಂಗ್ ಕಳುಹಿಸಿದ್ದಾರೆ.

ಮುಂಬೈ: ಫರ್ಹಾನ್ ಅಖ್ತರ್ ನಿರ್ದೇಶನದ ಡಾನ್ 3 ಚಿತ್ರದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಆರೋಪದ ಮೇಲೆ ನಟ ರಣವೀರ್ ಸಿಂಗ್ ವಿರುದ್ಧ ದಾಖಲಾಗಿರುವ ದೂರನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಗಂಭೀರವಾಗಿ ಪರಿಗಣಿಸಿದೆ.

ಫರ್ಹಾನ್ ಅಖ್ತರ್ ಅವರು ಏಪ್ರಿಲ್ 11, 2026 ರಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ (IFTDA) ಮುಂದೆ ದೂರು ನೀಡಿದ್ದರು. ತದನಂತರ ಮುಂದಿನ ಕ್ರಮಕ್ಕಾಗಿ ಈ ವಿಷಯವನ್ನು FWICE ಗೆ ವರ್ಗಾಯಿಸಲಾಗಿತ್ತು.

ಆದರೆ ರಣವೀರ್ ಸಿಂಗ್ ಒಕ್ಕೂಟದ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಬಳಿಕ ರಣವೀರ್ ಅವರ ಪ್ರತಿಕ್ರಿಯೆಯನ್ನು FWICE ಗಂಭೀರವಾಗಿ ಪರಿಗಣಿಸಿದ್ದು, ತನ್ನ ಯಾವುದೇ ನೌಕರರು ರಣವೀರ್ ಸಿಂಗ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದೆ.

ಈ ಕುರಿತು FWICE ಅಧಿಕೃತ ಆದೇಶ ಹೊರಡಿಸಿದ್ದು, ನಮ್ಮ ಸಂಘದ ಸದಸ್ಯರಾಗಿರುವ ಫರ್ಹಾನ್ ಅಖ್ತರ್ ಅವರು ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಡಾನ್ 3’ ಸಿನಿಮಾ ಸಿದ್ಧವಾಗುತ್ತಿತ್ತು. ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಈ ಚಿತ್ರದಿಂದ ಹೊರನಡೆದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರು ಸ್ವೀಕರಿಸಿದ ಕೂಡಲೇ ಔಪಚಾರಿಕವಾಗಿ ನೋಂದಾಯಿಸಿದ್ದೇವೆ. ಬಳಿಕ ರಣವೀರ್ ಸಿಂಗ್‌ಗೆ ಮೂರು ನೋಟಿಸ್‌ಗಳನ್ನು ನೀಡಿದ್ದೇವೆ. ಪ್ರತಿ ಹತ್ತು ದಿನಗಳಿಗೊಮ್ಮೆ ನೋಟಿಸ್ ಕಳುಹಿಸಿದ್ದೇವೆ. ಮೂರು ಬಾರಿ ಜ್ಞಾಪನೆ ಕೂಡಾ ಮಾಡಿದ್ದೇವೆ. ಆದಾಗ್ಯೂ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಈ ವಿಷಯವು ನಮ್ಮ ವ್ಯಾಪ್ತಿಯೊಳಗೆ ಬರುವುದಿಲ್ಲ ಮತ್ತು ಅದರಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳುವ ಇಮೇಲ್ ನ್ನು ರಣವೀರ್ ಸಿಂಗ್ ಕಳುಹಿಸಿದ್ದಾರೆ. ನಾವು ಅವರ ನಿಲುವನ್ನು ಗಮನಿಸಿದ್ದೇವೆ ಮತ್ತು ಅದಕ್ಕೆ ಅನುಗುಣವಾಗಿ ಮುಂದುವರಿಯಲು ನಿರ್ಧರಿಸಿದ್ದೇವೆ. "ಪರಿಣಾಮವಾಗಿ ರಣವೀರ್ ಸಿಂಗ್ ವಿರುದ್ಧ 'ಅಸಹಕಾರ' ನಿರ್ದೇಶನ ಹೊರಡಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದರರ್ಥ ನಮ್ಮ ಯಾವುದೇ ಕಾರ್ಮಿಕರು ಅಥವಾ ಸದಸ್ಯರು ಅವರ ಮುಂದಿನ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಇಂತಹ ನಕಾರಾತ್ಮಕ ಪ್ರವೃತ್ತಿ, ಬೇರೂರಲು ಬಿಡಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಒಕ್ಕೂಟ ಹೇಳಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಮೇಕೆದಾಟು ಯೋಜನೆಗೆ ವಿಜಯ್ ಅಡ್ಡಗಾಲು: ಕಾನೂನು ಕ್ರಮ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ತಮಿಳುನಾಡು ಸಿಎಂ ಸೂಚನೆ

ಶತಾವಧಾನಿ ಆರ್. ಗಣೇಶ್, ಅಂಕೇ ಗೌಡ, ಸುಶೀಲಮ್ಮಗೆ ಪದ್ಮ ಪ್ರಶಸ್ತಿ ಪ್ರದಾನ

ಕಾರ್ಮಿಕರಿಗೆ ಕನಿಷ್ಠ ವೇತನ: ಹೋಟೆಲ್ ಗಳಲ್ಲಿ ಊಟ, ತಿಂಡಿ ಬೆಲೆಗಳಲ್ಲಿ ದುಪ್ಪಟ್ಟು ಹೆಚ್ಚಳದ ವಾರ್ನಿಂಗ್!

T20ಯಲ್ಲಿ 200 ರನ್ ಬಾರಿಸುವ ಮೂಲಕ ಗೇಲ್ ದಾಖಲೆ ಮುರಿಯುವುದು ನನ್ನ ಗುರಿ: ವೈಭವ್ ಸೂರ್ಯವಂಶಿ

SCROLL FOR NEXT