ಸ್ವರಾ ಭಾಸ್ಕರ್ 
ಬಾಲಿವುಡ್

'ಕೆಲಸ ಕಳೆದುಕೊಳ್ಳುವ ಭಯವಿತ್ತು': 2011ರಲ್ಲಿ ಶೂಟಿಂಗ್ ವೇಳೆ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಘಟನೆ ನೆನಪಿಸಿಕೊಂಡ ಸ್ವರಾ ಭಾಸ್ಕರ್!

2011ರಲ್ಲಿ ಮಧ್ಯಪ್ರದೇಶದಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ನಿರ್ದೇಶಕರೊಬ್ಬರು ಅವರೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿದ್ದರಂತೆ.

ಬಾಲಿವುಡ್ ನಲ್ಲಿನ ತನ್ನ ಆರಂಭಿಕ ದಿನಗಳ ಕರಾಳ ವಾಸ್ತವಗಳನ್ನು ನೆನಪಿಸಿಕೊಂಡಿರುವ ಖ್ಯಾತ ನಟಿ ಸ್ವರಾ ಭಾಸ್ಕರ್, ಒಂದು ದಶಕದ ಹಿಂದೆ ತಮಗೆ ಎದುರಾದ ಅತ್ಯಂತ ಆಘಾತಕಾರಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

2011ರಲ್ಲಿ ಮಧ್ಯಪ್ರದೇಶದಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ನಿರ್ದೇಶಕರೊಬ್ಬರು ಅವರೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿದ್ದರಂತೆ. ಆಗ ತನ್ನ ರಕ್ಷಣೆಗಾಗಿ ಯಾವುದೇ ಪ್ರತ್ಯೇಕ ತಂಡವನ್ನು ಹೊಂದಿರಲಿಲ್ಲ. ಆ ದುರ್ವರ್ತನೆಯಲ್ಲಿ ಯಾವುದೇ ದೈಹಿಕ ಸಂಪರ್ಕ ಇಲ್ಲದಿದ್ದ ಕಾರಣ, ಅದನ್ನು ಲೈಂಗಿಕ ಕಿರುಕುಳ ಅಂತಾ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

"ಆ ವ್ಯಕ್ತಿ ನನ್ನನ್ನು ಮುಟ್ಟಿರಲಿಲ್ಲವಾದ್ದರಿಂದ ನನಗೆ ಅದು ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ ಎಂದು ಗುರುತಿಸಲೂ ಆಗಲಿಲ್ಲ, ನಂತರ ನನಗೆ ಅರಿವಾಯಿತು. ಅಯ್ಯೋ ದೇವರೇ, ಇದಂತೂ ಸ್ಪಷ್ಟವಾಗಿ ಕಿರುಕುಳವೇ ಆಗಿದೆ. ಇದು ಕಿರುಕುಳದ ಒಂದು ಮಾದರಿ ಉದಾಹರಣೆಯಾಗಿದೆ' ಎಂದು ಅನಿಸಿತು ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಪ್ರಭಾವಿ ವ್ಯಕ್ತಿಗಳ ವಿರುದ್ಧ ತಕ್ಷಣವೇ ಧ್ವನಿ ಎತ್ತಲು ಅನೇಕ ಮಹಿಳೆಯರು ಯಾಕೆ ಹಿಂಜರಿಯುತ್ತಾರೆ ಎಂಬುದನ್ನು ವಿವರಿಸಿದ ನಟಿ, ತಮ್ಮ ವೃತ್ತಿಜೀವನಕ್ಕೆ ಹಾನಿಯಾಗಬಹುದು ಎಂಬ ಸಹಜ ಭಯವೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಕೆಲಸ ಮಾಡುತ್ತಿದ್ದ ಚಿತ್ರದ ಚಿತ್ರೀಕರಣವು 56 ದಿನಗಳ ಸುದೀರ್ಘ ಅವಧಿಯದ್ದಾಗಿತ್ತು ಮತ್ತು ಚಿತ್ರೀಕರಣ ಆರಂಭವಾದ ಕೆಲವೇ ದಿನಗಳಲ್ಲಿ ಈ ಅನುಚಿತ ವರ್ತನೆಗಳು ಶುರುವಾಗಿದ್ದವು. ಕಷ್ಟಪಟ್ಟು ಕಟ್ಟಿಕೊಂಡ ತಮ್ಮ ವೃತ್ತಿಜೀವನಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ, ಆ ಪರಿಸ್ಥಿತಿಯನ್ನು ನಿಭಾಯಿಸಲು ಮೌನವಾಗಿದ್ದೆ. ನಾನು ಈ ಸಿನಿಮಾವನ್ನು ಅರ್ಧಕ್ಕೆ ಬಿಡಲು ಬಯಸಲಿಲ್ಲ. ಕೆಲಸವನ್ನು ಕಳೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ನನಗೂ ನನ್ನದೇ ಆದ ಮಹತ್ವಾಕಾಂಕ್ಷೆಗಳಿದ್ದವು, ಅಲ್ಲವೇ? ಅದು ಸಹಜ ತಾನೇ? ಹಾಗಿದ್ದಾಗ ನಾನು ಯಾಕೆ ಸುಮ್ಮನಿರಬಾರದು? ಎಂದು ಅವರು ಮುಕ್ತವಾಗಿ ಹೇಳಿದರು.

ಚಿತ್ರವನ್ನು ಅರ್ಧಕ್ಕೆ ಬಿಡದೆ ಸಹಾಯ ಪಡೆಯಲು ಬಯಸಿದ ಸ್ವರಾ ಭಾಸ್ಕರ್, ಅಂತಿಮವಾಗಿ ಆ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರ ಬಳಿ ವಿಷಯವನ್ನು ಹಂಚಿಕೊಂಡು, ನಿರ್ದೇಶಕರ ವರ್ತನೆಯ ಬಗ್ಗೆ ಎಚ್ಚರಿಸಿದ್ದಾಗಿ ವಿವರಿಸಿದ್ದಾರೆ.

ನಿರ್ಮಾಪಕರು ಬೆಂಬಲದ ಪ್ರಮುಖ ಆಧಾರಸ್ತಂಭವಾಗಿ ನಿಂತು, ಸುದೀರ್ಘ ಹೊರಾಂಗಣ ಚಿತ್ರೀಕರಣದ (outdoor schedule) ಅವಧಿಯುದ್ದಕ್ಕೂ ನನ್ನನ್ನು ರಕ್ಷಿಸಿದರು. "ಅವರು ನಿಜವಾಗಿಯೂ ನನ್ನ ಸ್ನೇಹಿತರಾದರು. ಅಂದು ಮಾತ್ರವಲ್ಲ, ಇಂದಿಗೂ ಅವರೇ ನನ್ನ ಮ್ಯಾನೇಜರ್ ಆಗಿದ್ದಾರೆ ಎಂದು ಅವರು ಹೇಳಿದರು.

2011 ರಿಂದ ಬಾಲಿವುಡ್ ನಲ್ಲಿ ಆಗಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಯುವ ನಟಿಯರು ಆರಂಭದಿಂದಲೇ ಸ್ಪಷ್ಟವಾದ ಗಡಿರೇಖೆಗಳನ್ನು (boundaries) ಹಾಕಿಕೊಳ್ಳಬೇಕೆಂದು ಭಾಸ್ಕರ್ ಬಲವಾಗಿ ಸಲಹೆ ನೀಡಿದರು. ಜನರೊಂದಿಗೆ ಮಾತನಾಡಿ, ಸಹಾಯ ಹಾಗೂ ಬೆಂಬಲವನ್ನು ಕೋರಿ ಮತ್ತು ತಪ್ಪು ನಡೆಯುತ್ತಿದೆ ಎಂದಾದಲ್ಲಿ ತಕ್ಷಣವೇ ಅದನ್ನು ಪ್ರಶ್ನಿಸಿ, ಏಕೆಂದರೆ ಈಗ ನಮಗೆ ಹಾಗೆ ಮಾಡುವ ಅವಕಾಶವಿದೆ ಎಂದು ಅವರು ತಮ್ಮ ಮಾತನ್ನು ಮುಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆ

ಮಿಯಾಮಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ; ಟ್ಯಾಕ್ಸಿವೇಯಲ್ಲಿ ಬೋಯಿಂಗ್ ವಿಮಾನಗಳ ಡಿಕ್ಕಿ, ಇಬ್ಬರಿಗೆ ಗಾಯ!

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಉತ್ತರಾಖಂಡ ಸಿಎಂಗೆ ಬಹಿರಂಗ ಸವಾಲು!

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್: ಕಿದ್ವಾಯಿಯಲ್ಲಿ 200 ಹಾಸಿಗೆಗಳ ಹೊಸ ಘಟಕ, 5 ಜಿಲ್ಲೆಗಳಲ್ಲಿ ಆಸ್ಪತ್ರೆ: ಸಿಎಂ ಡಿಕೆಶಿ ಘೋಷಣೆ