ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಬ್ಬರ 
ಬಾಲಿವುಡ್

ರಾಮಾಯಣ 2 ಬಗ್ಗೆ ಬಿಗ್ ಅಪ್‌ಡೇಟ್: ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಬ್ಬರ; ವಾನರ ಸೇನೆಯ 'ಅದ್ಭುತ ದೃಶ್ಯಗಳು'!

ಮೊದಲ ಭಾಗದಲ್ಲಿ, ಚಿತ್ರತಂಡವು ಹನುಮಂತನ ಒಂದು ಸಣ್ಣ ಝಲಕ್ ಅನ್ನು ಮಾತ್ರ 'ಪೋಸ್ಟ್-ಕ್ರೆಡಿಟ್' ದೃಶ್ಯದಲ್ಲಿ ತೋರಿಸಿತ್ತು. ಈಗ ಪಂಕಜ್ ಕುಮಾರ್ ಅವರು ಎರಡನೇ ಭಾಗದಲ್ಲಿ ಹನುಮಂತನ ಪಾತ್ರಕ್ಕೆ ಸಂಬಂಧಿಸಿದಂತೆ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ 1: ರೈಸ್ ಆಫ್ ಎ ಲೆಜೆಂಡ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಇದೀಗ ಚಿತ್ರತಂಡ ರಾಮಾಯಣ 2 ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ.

ದೀಪಾವಳಿಗೂ ಮೂರು ದಿನ ಮೊದಲು ಅಂದರೆ ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾದ ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ 1' ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭರ್ಜರಿ ಕಮಾಯಿ ಮಾಡಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ.

ಚಿತ್ರಮಂದಿರದಿಂದ ಹೊರಬರುವಾಗ ಪ್ರೇಕ್ಷಕರು ಹನುಮಂತನ ಪಾತ್ರದ ಬಗ್ಗೆ ಅತಿ ಹೆಚ್ಚು ಕುತೂಹಲ ಹೊಂದರುವುದು ಕಂಡುಬರುತ್ತಿದ್ದು, ಇದೀಗ 'ರಾಮಾಯಣ 2'ರಲ್ಲಿ ಹನುಮಂತನ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಸಿನಿಮಾಟೋಗ್ರಾಫರ್ ಪಂಕಜ್ ಕುಮಾರ್ ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.

ಮೊದಲ ಭಾಗದಲ್ಲಿ, ಚಿತ್ರತಂಡವು ಹನುಮಂತನ ಒಂದು ಸಣ್ಣ ಝಲಕ್ ಅನ್ನು ಮಾತ್ರ 'ಪೋಸ್ಟ್-ಕ್ರೆಡಿಟ್' ದೃಶ್ಯದಲ್ಲಿ ತೋರಿಸಿತ್ತು. ಈಗ ಪಂಕಜ್ ಕುಮಾರ್ ಅವರು ಎರಡನೇ ಭಾಗದಲ್ಲಿ ಹನುಮಂತನ ಪಾತ್ರಕ್ಕೆ ಸಂಬಂಧಿಸಿದಂತೆ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಎರಡನೇ ಭಾಗದಲ್ಲಿ ಹನುಮಂತನ ಹಲವು ಅದ್ಭುತ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ಪಂಕಜ್ ತಿಳಿಸಿದ್ದಾರೆ.

ಹನುಮಂತನ ಪಾತ್ರವನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಅವರ ದೃಶ್ಯಗಳು ಅದ್ಭುತ ಅನುಭವ ನೀಡಲಿವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೊದಲ ಭಾಗದಲ್ಲಿ ಸನ್ನಿ ಡಿಯೋಲ್ ಅವರ ಮುಖವನ್ನು ಪೂರ್ಣವಾಗಿ ತೋರಿಸದಿದ್ದಕ್ಕೆ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದು ಚಿತ್ರತಂಡ ಮೊದಲಿನಿಂದಲೂ ಮಾಡಿಕೊಂಡಿದ್ದ ಯೋಜನೆ ಎಂದು ಪಂಕಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸ್ಕ್ರಿಪ್ಟ್‌ನಲ್ಲೂ ಹನುಮಂತನ ಪಾತ್ರವನ್ನು ಸಣ್ಣ ದೃಶ್ಯದ ಮೂಲಕ ಪರಿಚಯಿಸುವಂತೆ ಬರೆಯಲಾಗಿತ್ತು. ಹಾಗಾಗಿಯೇ ಮೊದಲ ಭಾಗದ ಕೊನೆಯಲ್ಲಿ ಅಷ್ಟೇ ತೋರಿಸಲಾಗಿದೆ ಎಂದಿದ್ದಾರೆ.

ವಿಎಫ್‌ಎಕ್ಸ್ ಬಾಕಿ

ಇನ್ನು 'ರಾಮಾಯಣ 2' ಸಿನಿಮಾದ ಸುಮಾರು ಶೇ.60ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಆದರೆ ಎರಡನೇ ಭಾಗದಲ್ಲಿ ಮೊದಲ ಸಿನಿಮಾಕ್ಕಿಂತಲೂ ದೊಡ್ಡ ಮಟ್ಟದ ವಿಎಫ್‌ಎಕ್ಸ್, ಸಿಜಿಐ ಕೆಲಸಗಳು ಇರಲಿವೆ. ವಿಶೇಷವಾಗಿ ಹನುಮಂತ ಹಾಗೂ ಇಡೀ ವಾನರ ಸೇನೆಯ ದೃಶ್ಯಗಳಿಗೆ ಹೆಚ್ಚಿನ ಕಂಪ್ಯೂಟರ್ ಗ್ರಾಫಿಕ್ಸ್ ಬಳಸಲಾಗುತ್ತಿದೆ. ಮೋಷನ್ ಕ್ಯಾಪ್ಚರ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ಇನ್ನೂ ಬಾಕಿ ಇವೆ ಎಂದು ಪಂಕಜ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: ಬೆಂಗಳೂರಿಗೆ 6 ಹೊಸ ಪೊಲೀಸ್‌ ಆಯುಕ್ತರ ನೇಮಕ, ಯಾರು ಹೊಸ ಕಮಿಷನರ್?

ICICI ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್!

'ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಬೇಡ': ಸ್ವಂತ ಖರ್ಚಿನಲ್ಲೇ ಭಾಗವಹಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಪತ್ರ

ಬಿಗ್ ಟ್ವಿಸ್ಟ್ ಕೊಟ್ಟ Akvan ಚಂಡಮಾರುತ: ದಿಕ್ಕು ಬದಲಾವಣೆ, ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸಾಧ್ಯತೆ

ಜಾರ್ಖಂಡ್‌: NTPCಯಲ್ಲಿ 'ಟೇಕ್-ಅಪ್ ಟ್ರಾಲಿ' ಕುಸಿದು ಮೂವರು ಕಾರ್ಮಿಕರು ಸಾವು; ನಾಲ್ವರಿಗೆ ಗಾಯ