ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ 
ಬಾಲಿವುಡ್

'ರಾಮಾಯಣ' ಸಂಗೀತಕ್ಕಾಗಿ 3 ವರ್ಷ ಮೀಸಲು; 10-12 ಸಿನಿಮಾಗಳ ಆಫರ್ ತಿರಸ್ಕರಿಸಿದ್ದೆ: ಎ.ಆರ್. ರೆಹಮಾನ್

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ನಿರ್ದೇಶಕ ಭರತ್ ಬಾಲಾ ಅವರ 'ಬನಾರಸ್' ಚಿತ್ರದ ಪ್ರದರ್ಶನದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರೆಹಮಾನ್ ಮಾತನಾಡಿದರು.

ಪಣಜಿ: ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್ ನಲ್ಲಿ ಭಾರಿ ಸುದ್ದು ಮಾಡುತ್ತಿರುವ ರಾಮಾಯಣ ಚಿತ್ರಕ್ಕಾಗಿ ನನ್ನ 3 ವರ್ಷ ಸಮಯ ಮೀಸಲಿಟ್ಟಿದ್ದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ.

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ನಿರ್ದೇಶಕ ಭರತ್ ಬಾಲಾ ಅವರ 'ಬನಾರಸ್' ಚಿತ್ರದ ಪ್ರದರ್ಶನದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರೆಹಮಾನ್ ಮಾತನಾಡಿದರು.

'ರಾಮಾಯಣ' ಸಿನಿಮಾದ ಸಂಗೀತ ಸಂಯೋಜನೆಗಾಗಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಈ ಯೋಜನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು 10ರಿಂದ 12 ಸಿನಿಮಾಗಳ ಸಂಗೀತ ಸಂಯೋಜನೆಯ ಅವಕಾಶಗಳನ್ನು ತಿರಸ್ಕರಿಸಿದ್ದೇನೆ ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ.

ನಟ ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರಕ್ಕೆ ಎ.ಆರ್. ರೆಹಮಾನ್ ಮತ್ತು ಖ್ಯಾತ ಜರ್ಮನ್ ಸಂಗೀತ ನಿರ್ದೇಶಕ ಹಾನ್ಸ್ ಜಿಮ್ಮರ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಕೆಲವು ಹಾಡುಗಳು ಮತ್ತು ಸಂಗೀತದ ತುಣುಕುಗಳನ್ನು ಅಂತಿಮಗೊಳಿಸುವ ಮೊದಲು ಹಲವು ಬಾರಿ ಬದಲಾವಣೆ ಮಾಡಲಾಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ.

'ರಾವಣ ತಾಂಡವ್' ಸಂಗೀತಕ್ಕೆ 12-13 ಆವೃತ್ತಿಗಳು

'ರಾಮಾಯಣ' ಚಿತ್ರದ ಸಂಗೀತಕ್ಕಾಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಅದರಲ್ಲಿನ ಕೆಲವು ಸಂಗೀತ ಸಂಯೋಜನೆಗಳನ್ನು 12ರಿಂದ 13 ಬಾರಿ ಬದಲಾಯಿಸಿದ ಬಳಿಕ ಅಂತಿಮಗೊಳಿಸಲಾಗಿದೆ.

ವಿಶೇಷವಾಗಿ 'ರಾವಣ ತಾಂಡವ್' ಸಂಗೀತದ 12-13 ಆವೃತ್ತಿಗಳನ್ನು ಸಿದ್ಧಪಡಿಸಿದ ನಂತರ ಎಲ್ಲರಿಗೂ ಇಷ್ಟವಾದ ಆವೃತ್ತಿಯನ್ನು ಆಯ್ಕೆ ಮಾಡಲಾಯಿತು ಎಂದು ಅವರು ವಿವರಿಸಿದ್ದಾರೆ.

ಈ ಯೋಜನೆಗಾಗಿ ಹಲವು ಪ್ರಮುಖ ಚಿತ್ರ ನಿರ್ದೇಶಕರ ಸಿನಿಮಾಗಳ ಅವಕಾಶಗಳನ್ನು ಕೈಬಿಟ್ಟಿದ್ದೇನೆ. 'ರಾಮಾಯಣ' ಚಿತ್ರಕ್ಕಾಗಿ ಬೇರೆ ಸಿನಿಮಾಗಳನ್ನು ತಿರಸ್ಕರಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ಈ ಕೆಲಸದ ಪ್ರಕ್ರಿಯೆ ತುಂಬಾ ಸುಂದರವಾಗಿತ್ತು ಎಂದು ರೆಹಮಾನ್ ಹೇಳಿದ್ದಾರೆ.

ಇಷ್ಟವಾದ ಯೋಜನೆಗಳನ್ನಷ್ಟೇ ಒಪ್ಪಿಕೊಳ್ಳುತ್ತೇನೆ

'ರಾಮಾಯಣ' ಚಿತ್ರದ 'ರಾವಣ ತಾಂಡವ್' ಮತ್ತು 'ಮಂಗಳ್ ರಂಗ್' ಹಾಡುಗಳು ಈಗಾಗಲೇ ಸಂಗೀತಪ್ರಿಯರ ಗಮನ ಸೆಳೆದಿವೆ. ಈ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿರುವುದರ ಜತೆಗೆ ಕೆಲವು ಟೀಕೆಗಳೂ ಕೇಳಿಬಂದಿವೆ.

ಸಿನಿಮಾಗಳಿಗೆ ಸಂಗೀತ ಸಂಯೋಜಿಸುವ ಅವಕಾಶಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರೆಹಮಾನ್ ಅವರು, ತಮಗೆ ನಿಜವಾಗಿಯೂ ಇಷ್ಟವಾಗುವ ಮತ್ತು ಕಲಾತ್ಮಕವಾಗಿ ತೃಪ್ತಿ ನೀಡುವ ಯೋಜನೆಗಳನ್ನು ಮಾತ್ರ ಒಪ್ಪಿಕೊಳ್ಳುವುದಾಗಿ ಹೇಳಿದರು.

"ಒಂದು ಯೋಜನೆಯೊಂದಿಗೆ ನನಗೆ ಉತ್ತಮ ಬಾಂಧವ್ಯ ಮೂಡಿದಾಗ ಮಾತ್ರ ಅದನ್ನು ಒಪ್ಪಿಕೊಳ್ಳುತ್ತೇನೆ. ಆ ಕೆಲಸ ನನಗೆ ಕಲಾತ್ಮಕವಾಗಿ ಸಂತೋಷ ನೀಡಬೇಕು. ನನ್ನ ತಂಡವೂ ಆ ಕೆಲಸದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು" ಎಂದು ರೆಹಮಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Haryana: ಸೇನಾ ತರಬೇತಿ ವೇಳೆ ಭೀಕರ ದುರಂತ: ಟ್ಯಾಂಕ್ ಹರಿದು ಇಬ್ಬರು ಯೋಧರು ಸಾವು

Bisleri ನೀರು ಕೂಡ ಅಸುರಕ್ಷಿತ; ಅಪಾಯಕಾರಿ ರಾಸಾಯನಿಕಗಳಿದ್ದು ಕ್ಯಾನ್ಸರ್ ಕಾರಕ; ಕಾನೂನು ಕ್ರಮಕ್ಕೆ FSSAI ಅನುಮತಿ!

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ: ಮರಕ್ಕೆ ಕಾರು ಡಿಕ್ಕಿ; 8 ಮಂದಿ ಸಾವು; ಸಿಎಂ ವಿಜಯ್ ಸಂತಾಪ!

ಪ್ಯಾಲೆಸ್ ವಿವಾದ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈಡ್ರಾಮಾ.. YS ಶರ್ಮಿಳಾರನ್ನು ತಡೆದ ಪೊಲೀಸರು! Video

'BJP-RSS ಸಂಸ್ಕಾರಹೀನ; ದುರಾಸೆ, ಜಾತಿವಾದಿ ಪುರುಷ ಪ್ರಧಾನ ಮನೋಭಾವ ಹೊಂದಿವೆ': ರಾಹುಲ್ ಗಾಂಧಿ