ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಬಿಗ್ ಬಿ ಅಮಿತಾಬ್ ಬಚ್ಚನ್'ಗೆ ಮತ್ತೆ ಬಾಂಬ್ ಬೆದರಿಕೆ; ಜಲ್ಸಾ ಬಂಗಲೆ ಸ್ಫೋಟಿಸುವುದಾಗಿ ಇ-ಮೇಲ್!

ಮೇಯರ್ ಕಚೇರಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಜಲ್ಸಾ ಬಂಗಲೆ ಮತ್ತು ನಗರದಾದ್ಯಂತ ಇತರ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ಗುರುವಾರ ಮುಂಬೈನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಅಮಿತಾಬ್ ಬಚ್ಚನ್
Lingaraj Badiger
Updated On : 26 Nov 2026, 5:18 pm

ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದ್ದು, ಅವರ ಜಲ್ಸಾ ಬಂಗಲೆಯನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಮುಂಬೈ ಮೇಯರ್ ರಿತು ತಾವ್ಡೆ ಮತ್ತು ಪುರಸಭೆ ಆಯುಕ್ತ ಅಶ್ವಿನಿ ಭಿಡೆ ಅವರ ಕಚೇರಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ.

ಮೇಯರ್ ಕಚೇರಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಜಲ್ಸಾ ಬಂಗಲೆ ಮತ್ತು ನಗರದಾದ್ಯಂತ ಇತರ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ಗುರುವಾರ ಮುಂಬೈನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮೇಯರ್ ಕಚೇರಿಗೆ ಬಂದಿರುವ ಇಮೇಲ್‌ನಲ್ಲಿ ಮಹಾಲಕ್ಷ್ಮಿ ರೇಸ್‌ಕೋರ್ಸ್, ಸಿಯಾನ್ ಮತ್ತು ಆಚಾರ್ಯ ಮೆಟ್ರೋ ನಿಲ್ದಾಣದಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಹೇಳಲಾಗಿದೆ.

Advertisement

Advertisement

Also Read

ನನಗೂ ಮದುವೆಯಾಗುವ ಆಸೆಯಿದೆ, ಆದರೆ...: ಲವ್, ರಿಲೇಶನ್‌ಶಿಪ್ ಬಗ್ಗೆ ಸೌತ್​ ಬ್ಯೂಟಿ ನಿತ್ಯಾ ಮೆನನ್ ಮಾತು ವೈರಲ್!

ಈ ಇತ್ತೀಚಿನ ಇಮೇಲ್ ಬೆದರಿಕೆ ಅಮಿತಾಬ್ ಬಚ್ಚನ್ ಅವರ ಬಂಗಲೆಯನ್ನು ಗುರಿಯಾಗಿಸಿಕೊಂಡಿರುವುದು ಎರಡನೇ ಬಾರಿಯಾಗಿದೆ. ಕಳೆದ ತಿಂಗಳು, ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪ್ರದೇಶದ ಶಾಲೆಯೊಂದರಿಂದ ಅಮಿತಾಬ್ ಬಚ್ಚನ್ ಅವರ ಬಂಗಲೆ ಜಲ್ಸಾ ಬಗ್ಗೆ ಉಲ್ಲೇಖಿಸಲಾದ ಬೆದರಿಕೆ ಇಮೇಲ್ ಬಂದಿತ್ತು.

ಭದ್ರತೆ ಹೆಚ್ಚಳ

ಬೆದರಿಕೆ ಇ-ಮೇಲ್ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಅಮಿತಾಭ್ ಅವರ ‘ಜಲ್ಸಾ’ ಬಂಗಲೆ ಹಾಗೂ ಮೇಯರ್ ಕಚೇರಿಯ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ತಪಾಸಣೆ ನಡೆಸಲಾಗಿದೆ. ಇ-ಮೇಲ್ ಎಲ್ಲಿಂದ ಬಂದಿದೆ ಮತ್ತು ಕಳುಹಿಸಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಹಾಗೂ ಮುಂಬೈ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement