ಚಿತ್ರದ ಪೋಸ್ಟರ್ 
ಬಾಲಿವುಡ್

ಪತಿ ಜಹೀರ್ ಜೊತೆ ಸೋನಾಕ್ಷಿ ನಟಿಸಿದ್ದ ಸಿನಿಮಾ ಬಾಲಿವುಡ್ ನ ಅತೀ ದೊಡ್ಡ ಫ್ಲಾಪ್: ಬಜೆಟ್ 25 ಕೋಟಿ, ಗಳಿಸಿದ್ದು 46 ಲಕ್ಷ!

ನಟಿ ಸೋನಾಕ್ಷಿ ಸಿನ್ಹಾ ನಟನೆಯ 'ತು ಹೈ ಮೇರಿ ಕಿರಣ್' ಚಿತ್ರ ಬಿಡುಗಡೆಯಾಗಿ ಆರು ದಿನ ಕಳೆದಿದೆ. ಆದರೆ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ನವದೆಹಲಿ: ನಟಿ ಸೋನಾಕ್ಷಿ ಸಿನ್ಹಾ ನಟನೆಯ 'ತು ಹೈ ಮೇರಿ ಕಿರಣ್' ಚಿತ್ರ ಬಿಡುಗಡೆಯಾಗಿ ಆರು ದಿನ ಕಳೆದಿದೆ. ಆದರೆ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಗಳಿಕೆಯಲ್ಲೂ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಆರನೇ ದಿನದ ಚಿತ್ರದ ಕಲೆಕ್ಷನ್ ಲಕ್ಷಾಂತರ ರೂಪಾಯಿಗಳಲ್ಲಿಯೇ ಉಳಿದಿದೆ. ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಬಾಲ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಜೋಡಿ ಚಿತ್ರವನ್ನು ಬಾಕ್ಸ್ ಆಫೀಸ್‌ನಲ್ಲಿ ಮುನ್ನಡೆಸುವಲ್ಲಿ ವಿಫಲವಾಗಿದೆ.

ಸ್ಯಾಕ್‌ನೀಲ್ಕ್ ಪ್ರಕಾರ, ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನಟನೆಯ "ತು ಹೈ ಮೇರಿ ಕಿರಣ್" ಚಿತ್ರ ಬಿಡುಗಡೆಯಾದ ಐದನೇ ದಿನದಂದು ಕೇವಲ ₹3 ಲಕ್ಷ ರೂಪಾಯಿಗಳನ್ನು ಗಳಿಸಿದ್ದು, ಭಾರತದ ಒಟ್ಟು ನಿವ್ವಳ ಗಳಿಕೆ ಸುಮಾರು ₹43 ಲಕ್ಷಕ್ಕೆ ತಲುಪಿದೆ. ಈಗ ಅದರ ಒಟ್ಟು ಕಲೆಕ್ಷನ್ 46 ಲಕ್ಷ ರೂಪಾಯಿ ಮಾತ್ರ.

ತು ಹೈ ಮೇರಿ ಕಿರಣ್ ಮೊದಲ ದಿನ 14 ಲಕ್ಷ ಕಲೆಕ್ಷನ್‌ ಮಾಡಿತ್ತು. ಆದರೆ ನಂತರ ಸ್ಥಿರವಾದ ಕುಸಿತ ಕಂಡಿದೆ. ಈ ಚಿತ್ರವು ಎರಡನೇ ಮತ್ತು ಮೂರನೇ ದಿನಗಳಲ್ಲಿ ತಲಾ 10 ಲಕ್ಷ ಗಳಿಸಿದೆ. ನಾಲ್ಕನೇ, ಐದನೇ ಮತ್ತು ಆರನೇ ದಿನವೂ ತಲಾ 3 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

2026ರ ಅಕ್ಟೋಬರ್ 23ರಂದು ಬಿಡುಗಡೆಯಾದ 25 ಕೋಟಿ ಬಜೆಟ್ ನ ತು ಹೈ ಮೇರಿ ಕಿರಣ್ ಚಿತ್ರವನ್ನು ಕರಣ್ ರಾವಲ್ ನಿರ್ದೇಶಿಸಿದ್ದು ಇದು ಮಾನಸಿಕ ಥ್ರಿಲ್ಲರ್ ಚಿತ್ರವಾಗಿದೆ. ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಮತ್ತು ಅಂಕಿತ್ ಗುಪ್ತಾ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದ ಜನತೆಗೆ ಬಿಗ್ ಶಾಕ್: ನಂದಿನ ಹಾಲಿನ ದರ ಲೀಟರ್‌ಗೆ ಬರೋಬ್ಬರಿ 8 ರೂ. ಹೆಚ್ಚಳ; ನವೆಂಬರ್‌ 1 ರಿಂದಲೇ ಜಾರಿ!

ಸ್ಟಿಂಗ್ ಆಪರೇಷನ್ ಕೇವಲ ಕಟ್ಟು ಕಥೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಸಿಬಿ ಕ್ಲೀನ್ ಚಿಟ್!

ನವ ಬೆಂಗಳೂರು ನಿರ್ಮಾಣದತ್ತ ಡಿಕೆಶಿ ದೃಢ ಹೆಜ್ಜೆ: ₹1 ಲಕ್ಷ ಕೋಟಿ ಯೋಜನೆ; ಟನಲ್ ರೋಡ್ ಸೇರಿ 500 ಕಿ.ಮೀ ಹೊಸ ರಸ್ತೆ ನಿರ್ಮಾಣ!

'ನಿಮ್ಮನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿ ಹಾಕ್ತೇನೆ'; ಬೆಟ್ಟಿಂಗ್ ಆಪರೇಟರ್‌`ಗಳಿಗೆ ಗ್ಯಾಂಗ್‌ಸ್ಟರ್ Lawrence Bishnoi ಬೆದರಿಕೆ, ಆಡಿಯೋ ವೈರಲ್!

ಬಿಜೆಪಿಗೆ ಅಷ್ಟು ವಿಶ್ವಾಸವಿದ್ದರೆ, ಸಂಸತ್ತನ್ನು ವಿಸರ್ಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ: ಖರ್ಗೆ