ಕೋಮಲ್ ರಾಣಿ ಮತ್ತು ಗೋವಿಂದ 
ಬಾಲಿವುಡ್

ಪ್ರೇಯಸಿ ಜೊತೆ ಗೋವಿಂದ: ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಮೇಲು; ಏಕಾಂಗಿಯಾಗಿ 'ಲಾಲ್‌ಬಾಗ್‌ಚಾ ರಾಜ್' ದರ್ಶನ ಪಡೆದು ಸುನೀತಾ ಆಕ್ರೋಶ !

ʻಲಾಲ್‌ಬಾಗ್‌ಚಾ ರಾಜʼನ ದರ್ಶನಕ್ಕೆ ಮಂಗಳವಾರ ಬೆಳಗ್ಗೆ ಸುನೀತಾ ಅಹುಜಾ ಅವರು ಏಕಾಂಗಿಯಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದರು. ಆದರೆ, ಅದೇ ದಿನ ಸಂಜೆ ನಟ ಗೋವಿಂದ ಅವರು ನಟಿ ಕೋಮಲ್‌ ರಾಣಿ ಜೊತೆಗೆ ಆಗಮಿಸಿ ಗಣೇಶನ ಆಶೀರ್ವಾದ ಪಡೆದ್ರು.

ಬಾಲಿವುಡ್‌ನ ಹಿರಿಯ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ಅವರ ವೈಯಕ್ತಿಕ ಜೀವನದ ಕೋಲ್ಡ್‌ ವಾರ್ ಮತ್ತೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮುಂಬೈನ ಅತ್ಯಂತ ಪ್ರಸಿದ್ದ ʻಲಾಲ್‌ಬಾಗ್‌ಚಾ ರಾಜʼ ಗಣಪತಿಯ ದರ್ಶನದ ವೇಳೆ ನಡೆದಿರುವ ಘಟನೆಯೊಂದು ಇಬ್ಬರ ನಡುವಿನ ಮನಸ್ತಾಪವನ್ನ ಮತ್ತೊಮ್ಮೆ ಸಾರ್ವಜನಿಕವಾಗಿ ಬಯಲು ಮಾಡಿದೆ. ಗಣೇಶೋತ್ಸವದ ಶುಭ ಸಂದರ್ಭದಲ್ಲೇ ಈ ದಂಪತಿ ಪ್ರತ್ಯೇಕವಾಗಿ ಬಂದು ಗಣಪತಿಯ ದರ್ಶನ ಪಡೆದಿರುವುದು ಬಾಲಿವುಡ್‌ ಅಂಗಳದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.‌

ʻಲಾಲ್‌ಬಾಗ್‌ಚಾ ರಾಜʼನ ದರ್ಶನಕ್ಕೆ ಮಂಗಳವಾರ ಬೆಳಗ್ಗೆ ಸುನೀತಾ ಅಹುಜಾ ಅವರು ಏಕಾಂಗಿಯಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದರು. ಆದರೆ, ಅದೇ ದಿನ ಸಂಜೆ ನಟ ಗೋವಿಂದ ಅವರು ನಟಿ ಕೋಮಲ್‌ ರಾಣಿ ಜೊತೆಗೆ ಆಗಮಿಸಿ ಗಣೇಶನ ಆಶೀರ್ವಾದ ಪಡೆದ್ರು.

ಬಳಿಕ ಪಾಪರಾಜಿಗಳನ್ನು ಕಂಡ ನಟ, ‘ಗಣಪತಿ ಬಪ್ಪ ಮೊರಿಯಾ’ ಎಂದು ಕೂಗಿದರೆ, ಕೋಮಲ್, ಕ್ಯಾಮೆರಾಗಳತ್ತ ಕೈಬೀಸಿದ್ದರು. ಇವರಿಬ್ಬರ ಭೇಟಿಗೂ ಕೆಲವೇ ಗಂಟೆಗಳ ಮೊದಲು ಅವರ ಪತ್ನಿ ಸುನೀತಾ ಅಹುಜಾ ಒಬ್ಬರೇ ಲಾಲ್ ಬಾಗ್ ಚಾ ರಾಜನ ಆಶೀರ್ವಾದ ಪಡೆದು, ಪೂಜೆ ಸಲ್ಲಿಸಿದ್ದರು.

ಈ ಘಟನೆಯ ನಂತರ ಪತ್ನಿ ಸುನೀತಾ ಅಹುಜಾ ಅವರು, ‘ಮನುಷ್ಯರಿಗಿಂತ ಪ್ರಾಣಿಗಳೇ ಮೇಲು’ ಎಂದು ಮಾಧ್ಯಮಗಳ ಎದುರು ಕಿಡಿಕಾರಿದ್ದಾರೆ. ‘ಮನುಷ್ಯರನ್ನು ಎಷ್ಟೇ ಪ್ರೀತಿಸಿದರೂ ಅವರು ಮೋಸ ಮಾಡುತ್ತಾರೆ. ಪ್ರಾಣಿಗಳನ್ನು ಪ್ರೀತಿಸಿದರೆ ಅವು ನಿಮ್ಮ ಜೊತೆ ನಿಷ್ಠೆಯಿಂದ ಇರುತ್ತವೆ. ಮನುಷ್ಯರು ನಂಬಿಕೆದ್ರೋಹಿಗಳು’ ಎಂದಿದ್ದಾರೆ.

ಕೋಮಲ್‌ ರಾಣಿ ಹಾಗೂ ಗೋವಿಂದ ಪ್ರಸ್ತುತ ಹೊಸ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದು, ಸಿನಿಮಾದ ನೆಪದಲ್ಲಿ ಅವರಿಬ್ಬರೂ ಆಗಾಗ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಆದರೆ, ಇವರಿಬ್ಬರ ಬಗ್ಗೆ ಸುನೀತಾ ಅಹುಜಾ ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ನಿತ್ಯ 4,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ; CM ಡಿಕೆಶಿ ಹೇಳಿದ್ದೇನು?

ಸಂಘರ್ಷ ಹಿಂದೂ ಮಹಾಸಾಗರವನ್ನೂ ತಲುಪಬಹುದು: ಮಧ್ಯಪ್ರಾಚ್ಯ ಯುದ್ಧ ವಿಸ್ತರಣೆ ಸುಳಿವು ನೀಡಿದ ಇರಾನ್; ಭಾರತದ ಇಂಧನ-ಸಾಗರ ವ್ಯಾಪಾರಕ್ಕೆ ಹೆಚ್ಚಿದ ಆತಂಕ..!

Yamuna Expressway ದುರಂತ: ನೀವು ಸತ್ತರೂ ಚಿಂತೆಯಿಲ್ಲ, ಬಸ್ ಮಾತ್ರ ನಿಲ್ಲಿಸಲ್ಲ: ಪ್ರಯಾಣಿಕರ ಎಚ್ಚರಿಕೆ ನಿರ್ಲಕ್ಷಿಸಿ 9 ಜನರ ಸಾವಿಗೆ ಕಾರಣವಾದ ಚಾಲಕ..!

ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಕಾವೇರಿ ಕದನ: 20 TMC ನೀರಿಗೆ ತಮಿಳುನಾಡು ಪಟ್ಟು, ಬರ ಪರಿಸ್ಥಿತಿ ಮುಂದಿಟ್ಟ ಕರ್ನಾಟಕ..!

ಮೈಸೂರು ದಸರಾ: ಜಿಲ್ಲಾ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಡಿಸಿಎಂ ತವರು ತುಮಕೂರಿಗೆ ಅವಕಾಶವೇ ಇಲ್ಲ; ಭುಗಿಲೆದ್ದ ಆಕ್ರೋಶ!