ಅನುಪಮ್ ಖೇರ್ 
ಬಾಲಿವುಡ್

ನನಗೆ ಗೋವಿಂದ ಎಂದರೆ ತುಂಬಾ ಇಷ್ಟ ಆದರೆ... ನಟನ ವೈಯಕ್ತಿಕ ಜೀವನದ ಬಗ್ಗೆ ಅನುಪಮಾ ಕೇರ್ ಸಲಹೆ!

ನಾನು ಅವರೊಂದಿಗೆ 10-12 ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ನಟನೆ, ನೃತ್ಯದಲ್ಲಿ ಯಾರೂ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ವೈಯಕ್ತಿಕ ಜೀವನ ಅಥವಾ ನಿಮ್ಮ ಅಭ್ಯಾಸಗಳು ನಿಮ್ಮ ಇಡೀ ಜೀವನವನ್ನು ಮರೆಮಾಚಲು ಬಿಡಬಾರದು.

ಗೋವಿಂದ ಅವರು ತಮ್ಮ ವೈವಾಹಿಕ ವಿವಾದಗಳು ಮತ್ತು ಸಹನಟಿ ಕೋಮಲ್ ರಾಣಿ ಸ್ವರ್ಣಕರ್ ಅವರೊಂದಿಗಿನ ಸಂಬಂಧದ ವದಂತಿಗಳಿಂದಾಗಿ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಹಿರಿಯ ನಟ ಅನುಪಮ್ ಖೇರ್ ಅವರಿಗೆ ಗೋವಿಂದ ಮತ್ತು ಅವರ ವೈಯಕ್ತಿಕ ಜೀವನದ ಕುರಿತಾದ ಚರ್ಚೆಗಳ ಬಗ್ಗೆ ಕೇಳಲಾಯಿತು.

ನಟನೊಬ್ಬ ತನ್ನ ವೈಯಕ್ತಿಕ ಜೀವನದ ವಿಷಯಗಳು ವೃತ್ತಿಪರ ಕೆಲಸದ ಮೇಲೆ ಪ್ರಭಾವ ಬೀರಲು ಅಥವಾ ಅದನ್ನು ಮರೆಮಾಚಲು ಬಿಡಬಾರದು ಎಂದು ಅವರು ಹೇಳಿದರು. ನನಗೆ ಗೋವಿಂದ ಎಂದರೆ ತುಂಬಾ ಇಷ್ಟ.ನಾನು ಕೆಲಸ ಮಾಡಿದ ನಟರಲ್ಲಿ ಅವರು ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ನಾನು ಅವರೊಂದಿಗೆ 10-12 ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ನಟನೆ, ನೃತ್ಯದಲ್ಲಿ ಯಾರೂ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ವೈಯಕ್ತಿಕ ಜೀವನ ಅಥವಾ ನಿಮ್ಮ ಅಭ್ಯಾಸಗಳು ನಿಮ್ಮ ಇಡೀ ಜೀವನವನ್ನು ಮರೆಮಾಡಲು ನೀವು ಬಿಡಬಾರದು" ಎಂದು ಅನುಪಮ್ ಖೇರ್ ತಿಳಿಸಿದ್ದಾರೆ.

ಇತ್ತೀಚೆಗೆ ಗೋವಿಂದ ಅವರು ತಮ್ಮ ಸಹನಟಿ ಮತ್ತು ಪ್ರೇಮಸಂಬಂಧದ ವದಂತಿಗಳ ಕೇಂದ್ರಬಿಂದುವಾಗಿರುವ ಕೋಮಲ್ ರಾಣಿ ಸ್ವರ್ಣಕರ್ ಅವರೊಂದಿಗೆ 'ಲಾಲ್‌ಬಾಗ್ಚಾ ರಾಜಾ'ದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಗೋವಿಂದ ಅವರು ಕೋಮಲ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ