ಸಿನಿಮಾ ಲೇಖನ

ಹೊಸ ರೆಕಾರ್ಡ್

ಹೊಸ ರೆಕಾರ್ಡ್
ಹಾಡು: ಎತ್ತಾಕ್ಕೊಂಡ್ ಹೋಯ್ತಾ ಇರೋದೇ
ಚಿತ್ರ: ದಿಲ್‌ವಾಲಾ
ಸಾಹಿತ್ಯ: ಅನಿಲ್‌ಕುಮಾರ್
ಸಂಗೀತ: ಅರ್ಜುನ್ ಜನ್ಯ
ಗಾಯಕರು: ಕೈಲಾಷ್ ಖೇರ್,
ಪ್ರಿಯಾ ಹಿಮೇಶ್

ಹೆಂಗೆಂಗೋ ಇದ್ದೋನ್ ನಾನು,
ಹೆಂಗೆಂಗೋ ಬೆಳೆದೋನ್ ನಾನು
ಈ ಹುಡುಗಿ ಹಿಂದೆ ಬಿದ್‌ಬಿಟ್ಟೆ
ಕಣ್ಣೀರಲ್ ಕರ್ಚೀಫ್ ಒಗ್ದ್‌ಬಿಟ್ಟೆ
ನಿನ್ ಮೇಲೆ ಶ್ಯಾನೆ ಲವ್ವು ನಂಗೆ,
ಶನಿ ದೇವ್ರು ಬೆನ್ನು ಹತ್‌ದಂಗೆ
ನನ್ನ ಕಟ್ಟಿ ಹಾಕಿಬಿಡು, ಅಪ್ಪಿ ಮುತ್ತ ಕೊಡು
ಎತ್ತಿ ಆಡಿಸಿ ನೋವಾಗ್ದಂಗೆ,
ಎತ್ತಾಕ್ಕೊಂಡ್ ಹೋಯ್ತಾ ಇರೋಲೇ

ಇದು ಅರ್ಜುನ್ ಜನ್ಯ ಅವರ ನ್ಯೂ ಏಜ್ ಲವ್ ಸಾಂಗ್. ಕಾಯ್ತಾ ಕೂತ್ಕೊಳ್ಳೋದೆಲ್ಲ ಇಲ್ಲ, ಎತ್ತಾಕ್ಕೊಂಡ್ ಓಯ್ತಾ ಇರೋದೆ ಎನ್ನುವ ಸಾಲುಗಳಿರುವುದರಿಂದ, ಮಹಾಭಾರತದ ಅರ್ಜುನನ ಓಲ್ಡ್ ಏಜ್ ಸಾಂಗ್ ಎನ್ನಲೂಬಹುದು. ಒಟ್ಟಿನಲ್ಲಿ ಸುಮಂತ್, ರಾಧಿಕಾ ಪಂಡಿತ್ ಅಭಿನಯದ ದಿಲ್‌ವಾಲನ ದಿಲ್ ಕಾ ಗಾನಾ. ಎತ್ತಾಕ್ಕೊಂಡ್ ಹೊಗ್ತೀನಿ ಎನ್ನುವ ನಾಯಕ ನಾಯಕಿಯ ಈ ಹಾಡಿನಲ್ಲಿ ನಯ, ನಾಜೂಕಿನ ಪ್ರಶ್ನೆ ಎತ್ತುವಂತಿಲ್ಲ, ಇಲ್ಲೇನಿದ್ದರೂ, ಸುಮ್ನೆ ಒಂದಿಷ್ಟು ಕಿರೀಕು, ಮತ್ತಿಷ್ಟು ಟಪೋರಿ ಸರಕು. ಕೈ, ಕಾಲಿಗೆ ಕಸರತ್ತು ಎನಿಸಿದರೂ ಅರ್ಜುನ್ ಜನ್ಯ ಸಂಗೀತ ಮತ್ತು ಅನಿಲ್‌ಕುಮಾರ್ ಸಾಹಿತ್ಯ ಸೇರಿ ಪೊರ್ಕಿ ಹಾಡುಗಳ ಪ್ರಿಯರಿಗೆ ಮಜಬೂತಾಗಿದೆ ಎನಿಸಬಹುದು.

ಹಳೆ ರೆಕಾರ್ಡ್
ಹಾಡು: ಕುವರಿ ಮುಂದುವರಿ
ಚಿತ್ರ: ಹೊಂಗನಸು
ಸಂಗೀತ, ಸಾಹಿತ್ಯ: ಹಂಸಲೇಖ
ಗಾಯಕರು: ರಾಜೇಶ್ ಕೃಷ್ಣನ್

ಒಂಟೊಂಟೊಂಟಿ, ಇರ್‌ಬ್ಯಾಡಿನ್ನು,
ಜಂಟ್, ಜಂಟ್,
ಜಂಟಿ ತಿರ್‌ಗಾಡ್ ಚಿನ್ನು.
ಪ್ರೀತಿಯಲ್ಲಿ ಬುದ್ಧಿ ಸ್ತಬ್ಧ,
ಇಲ್ಲಿ ಬರಿ ಹೃದಯವೆ ಶಬ್ದ
ಹೃದಯಾ ಸಿಗೋ ಸಮಯಾ ಇದು,
ಕಳುವಾಗುವಾ ಶಕುನಾ ಇದು
ಗಿಡಮರಕ್ಕೆ ಕಿವಿಗೊಟ್ಟಾಗ
ಮಾತುಗಳೆಲ್ಲ ಲಯಬದ್ಧ
ಮನವೇ ಮೀಯ ಹೊರಟಾಗ
ಪ್ರೀತಿಯ ಗಾಳ ಶತಸಿದ್ಧ

ಹಂಸಲೇಖ ಅವರು ಮಾಡಿದ ಅಸಂಖ್ಯ ವಿಭಿನ್ನ ಪ್ರಯೋಗಗಳಲ್ಲಿ ಈ ಹಾಡೂ ಒಂದು. ಹೊಂಗನಸು ಚಿತ್ರದಲ್ಲಿ ಹೆಸರಿಗೆ ತಕ್ಕಂಥ ಸಾಫ್ಟ್ ಹಾಡುಗಳಿದ್ದರೂ ಅದ್ಯಾಕೋ ಈ ಹಾಡು ಹೆಚ್ಚು ಪ್ರೆಷ್ ಎನಿಸಿದರೆ ಅದಕ್ಕೆ ಈ ಹಾಡಿನಲ್ಲಿರುವ ಲವಲವಿಕೆಯ ಕಾರಣ ಕೊಡಬಹುದು. ಹಂಸಲೇಖ ಅವರಲ್ಲಿರುವ ಎನರ್ಜಿ, ತುಂಟತನ ಮತ್ತು ಕಾಲಕ್ಕೆ ತಕ್ಕಂತೆ ನಡೆಯಬೇಕು ಎನ್ನುವ ಟೈಮಿಂಗ್ ಸೆನ್ಸ್ ಎಲ್ಲವೂ ಇಲ್ಲಿದೆ. ಮತ್ತದು ಹಂಸಲೇಖನಿಯಿಂದ ರಾಜೇಶ್ ಕೃಷ್ಣನ್ ಅವರ ಕಂಠಕ್ಕೆ ವರ್ಗಾವಣೆಯಾಗಿ ಮತ್ತಷ್ಟು ಕಳೆ ಪಡೆದುಕೊಂಡಿದೆ. ಟ್ಯೂನೂ ನನ್ನದೆ,  ಹಾಡೂ ನನ್ನದೆ ಎನ್ನುವ ಹಂಸ ಕೊಡ್ತಾ ಇರ್ತೀನಿ, ತಗೋತಾ ಇರ್‌ಬೇಕು ಎಂಬ ಉತ್ಸಾಹದಲ್ಲಿ ಬರೆದ ಹಾಡು ಎನಿಸಬಹುದು. ಹಾಗಾಗಿ, ಇದನ್ನು ಹಂಸಲೇಖ ಪ್ರಾಯೋಜಿತ, ಪ್ರಾಯೋಗಿಕ ಗೀತೆ ಎನ್ನಬಹುದು.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ