ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಆರಂಭಿಕ ವರದಿಗಳಲ್ಲಿ ಬಾಂಬ್ ಬೆದರಿಕೆ ಎಂದು ಹೇಳಲಾಗಿತ್ತಾದರೂ, ಇದು ವಿಮಾನ ಅಪಹರಣದ ವದಂತಿಗೆ ಸಂಬಂಧಿಸಿದ ಎಚ್ಚರಿಕೆಯಾಗಿತ್ತು ಎಂದು ವಿಮಾನ ನಿಲ್ದಾಣದ ಮೂಲವೊಂದು ಮಾಧ್ಯಮಗಳಿಗೆ ತಿಳಿಸಿದೆ.
Air India
ಏರ್ ಇಂಡಿಯಾ
Updated on: 

ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದನ್ನು ಭದ್ರತಾ ಎಚ್ಚರಿಕೆಯ ಹಿನ್ನೆಲೆಯಲ್ಲಿ ಜೈಪುರಕ್ಕೆ ಮಾರ್ಗ ಬದಲಾಯಿಸಲಾಗಿದ್ದು, ವಿಮಾನವು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಆರಂಭಿಕ ವರದಿಗಳಲ್ಲಿ ಬಾಂಬ್ ಬೆದರಿಕೆ ಎಂದು ಹೇಳಲಾಗಿತ್ತಾದರೂ, ಇದು ವಿಮಾನ ಅಪಹರಣದ ವದಂತಿಗೆ ಸಂಬಂಧಿಸಿದ ಎಚ್ಚರಿಕೆಯಾಗಿತ್ತು ಎಂದು ವಿಮಾನ ನಿಲ್ದಾಣದ ಮೂಲವೊಂದು ಮಾಧ್ಯಮಗಳಿಗೆ ತಿಳಿಸಿದೆ.

AI 2030 ವಿಮಾನವು ಜೈಪುರದಲ್ಲಿ ಇಳಿದ ಬಳಿಕ ಅದನ್ನು ಪ್ರತ್ಯೇಕ ಪ್ರದೇಶದಲ್ಲಿ ನಿಲ್ಲಿಸಲಾಯಿತು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಸ್ಥಳೀಯ ಪೊಲೀಸರು ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ (BDDS) ಸಿಬ್ಬಂದಿ ವಿಮಾನ ಮತ್ತು ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸಲು ಆರಂಭಿಸಿದರು.

Air India
ಯುಎಇಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್ ಆಯಿಲ್ ಪ್ರೆಶರ್ ದಿಢೀರ್ ಕುಸಿತ: ಕೊಚ್ಚಿಗೆ ವಾಪಸ್; ತಪ್ಪಿದ ದೊಡ್ಡ ಅನಾಹುತ

ಇದು ವಿಮಾನ ಅಪಹರಣದ ವದಂತಿಯೇ ಹೊರತು ಬಾಂಬ್ ಬೆದರಿಕೆಯಲ್ಲ. ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಲು ಇದು ತುಂಬಾ ಆರಂಭಿಕ ಹಂತವಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನವು ಭಾರತದ ವಾಯುಪ್ರದೇಶವನ್ನು ಸಮೀಪಿಸುತ್ತಿದ್ದಾಗ ಭದ್ರತಾ ಎಚ್ಚರಿಕೆ ವರದಿಯಾಗಿದೆ. ಬಳಿಕ ವಾಯು ಸಂಚಾರ ನಿಯಂತ್ರಣ (ATC) ಹಾಗೂ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ವಿಮಾನವನ್ನು ಜೈಪುರಕ್ಕೆ ಮಾರ್ಗ ಬದಲಾಯಿಸಲಾಯಿತು.

ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಿ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿರುವ ನಿಗದಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com