ಸಿನಿಮಾ ಲೇಖನ

ಭಜರಂಗಿ ಮೇನಿಯಾ

ಕರುನಾಡ ಚಕ್ರವರ್ತಿಎಂಬ ಹೊಸ ಬಿರುದಿಗೆ ಭರ್ಜರಿಯಾಗಿಯೇ ನ್ಯಾಯ ಒದಗಿದೆ. ಲೇಟೆಸ್ಟ್ ಸುದ್ದಿಯ ಪ್ರಕಾರ, ಶಿವಣ್ಣ ತಮ್ಮದೇ...

ಕರುನಾಡ ಚಕ್ರವರ್ತಿಎಂಬ ಹೊಸ ಬಿರುದಿಗೆ ಭರ್ಜರಿಯಾಗಿಯೇ ನ್ಯಾಯ ಒದಗಿದೆ. ಲೇಟೆಸ್ಟ್ ಸುದ್ದಿಯ ಪ್ರಕಾರ, ಶಿವಣ್ಣ ತಮ್ಮದೇ ಚಿತ್ರದ ರೆಕಾರ್ಡುಗಳನ್ನಷ್ಟೇ ಅಲ್ಲ ಗಾಂಧಿನಗರದ ಈವರೆಗಿನ ಎಲ್ಲ ಚಿತ್ರಗಳ ಓಪನಿಂಗ್ ರೆಕಾರ್ಡನ್ನೂ ಚಿಂದಿ ಮಾಡಿಹಾಕಿದ್ದಾರೆ. ಇನ್ನೂರ ಮೂವತ್ತಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡ ಭಜರಂಗಿಯ ಮೊದಲ ದಿನದ ಕಲೆಕ್ಷನ್ನೇ ಒಂದು ಮೂಲದ ಪ್ರಕಾರ ಎರಡೂವರೆ ಕೋಟಿ. ಗುರುವಾರ  ತೆರೆಕಂಡ ಈ ಚಿತ್ರ, ಮೊದಲ ದಿನ ಹೆಚ್ಚೂಕಮ್ಮಿ ಎಲ್ಲ ಕಡೆಯೂ ಬೆಳಿಗ್ಗೆ ಏಳು ಗಂಟೆಯಿಂದಲೇ ಪ್ರದರ್ಶನಗೊಂಡಿದೆ. ದಿನಕ್ಕೆ ಐದು-ಆರು ಜನಭರಿತ ಶೋಗಳನ್ನು ಕಂಡ ಚಿತ್ರ, ಭಾನುವಾರದ ತನಕವೂ ಅದೇ ಅಬ್ಬರ ಮುಂದುವರೆಸಿದೆ. ಆ ಲೆಕ್ಕದಲ್ಲಿ ಕೆಲವು ವರದಿಗಳ ಪ್ರಕಾರ, ಮೊದಲ ನಾಲ್ಕು ದಿನಕ್ಕೆ ಚಿತ್ರ ಹತ್ತು ಕೋಟಿ ಗಳಿಸಿ ದಾಖಲೆ ಮಾಡಿದೆ. ಸಂಕೋಚ ವ್ಯಕ್ತಿತ್ವದ ನಿರ್ಮಾಪಕ ಮಂಜುನಾಥ್ ಭಾನುವಾರದವರೆಗಿನ ಗಳಿಕೆ ನಾಲ್ಕು ಕೋಟಿ ಅಂತ ಹೇಳಿದರೂ ಫೇಸ್ಬುಕ್ ಪ್ರತಿಕ್ರಿಯೆಗಳು, ವೆಬ್‌ಸೈಟ್ ವರದಿಗಳು ಹಾಗೂ ಇತರೆ ಸಿನಿಮಾ ರಿಪೋರ್ಟುಗಳು, ಚಿತ್ರಮಂದಿರದ ಮುಂದೆ ಇನ್ನೂ ಮುಗಿಬಿದ್ದಿರುವ ಜನ, ಬ್ಲಾಕ್ ಟಿಕೆಟ್ ಮಾರಾಟ, ಹೌಸ್‌ಫುಲ್ ಬೋರ್ಡು ನೋಡಿದರೆ, ಚಿತ್ರ ಈಗಾಗಲೇ ಬಂಡವಾಳದ ಮೂರುಪಟ್ಟು ಗಳಿಸಿರೋ ಬಗ್ಗೆ ಅನುಮಾನವೇ ಇಲ್ಲ.  ಮೂರೂವರೆ ಕೋಟಿ ಸ್ಯಾಟಲೈಟ್ ರೈಟ್‌ನಿಂದಲೇ ಗಳಿಸಿಕೊಂಡಿರೋ ಭಜರಂಗಿ ಈ ವರ್ಷದ ಅತಿ ದೊಡ್ಡ ಹಿಟ್ ಅನ್ನೋದನ್ನು ಈಗಾಗಲೇ ಖಚಿತಪಡಿಸಿದೆ. ಸ್ವಮೇಕ್ ಚಿತ್ರಗಳನ್ನೇ ಮಾಡಿ,  ಹೊಸ ನಿರ್ದೇಶಕರಿಗೂ ಕಾಲ್‌ಶೀಟ್ ಕೊಟ್ಟು,  ಜೊತೆಗೆ  ಪ್ರಯೋಗಗಳಿಗೂ ಒಡ್ಡಿಕೊಂಡು ಆಕ್ಷನ್‌ಗೂ ಜೈ, ಡ್ಯಾನ್ಸ್‌ಗೂ ಸೈ   ಎನ್ನುತ್ತಿರುವ  ಐವತ್ತೆರಡರ ಹರೆಯದ ಶಿವರಾಜ್‌ಕುಮಾರ್, ಭಜರಂಗಿ ಮೂಲಕ ಮತ್ತೊಮ್ಮೆ ತಮ್ಮ  ಸಾರ್ವಭೌಮತ್ವ ಸಾಬೀತುಪಡಿಸಿದ್ದಾರೆ. 

- ನವೀನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!