ಸಿನಿಮಾ ಲೇಖನ

ಭೂಮಿ ಹುಣ್ಣಿಮೆ

ದೊಡ್ಡ ದೊಡ್ಡ ಕನಸುಗಳನ್ನು ಇಟ್ಟಿಕೊಂಡು ಕ್ಯಾಮೆರಾ ಮುಂದೆ ನಿಂತಿರುವ ಭೂಮಿಕಾ ಈಗಷ್ಟೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ.

ದೊಡ್ಡ ದೊಡ್ಡ ಕನಸುಗಳನ್ನು ಇಟ್ಟಿಕೊಂಡು ಕ್ಯಾಮೆರಾ ಮುಂದೆ ನಿಂತಿರುವ ಭೂಮಿಕಾ ಈಗಷ್ಟೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ.
ಸಣ್ಣ ಸಣ್ಣ ಪಾತ್ರಗಳ ಮೂಲಕವೇ ನಾಯಕಿ ಸ್ಥಾನಕ್ಕೆ ಬಡ್ತಿ ಪಡೆದಾಕೆ.

ಸಿನಿಮಾಗಳಲ್ಲಿ ನಟಿಸಬೇಕೆನ್ನುವುದು ನನ್ನ ದೊಡ್ಡ ಕನಸು. ಆದರೆ ಇಷ್ಟು ಬೇಗ ಕ್ಯಾಮೆರಾ ಮುಂದೆ ನಿಲ್ಲುವ ಅದೃಷ್ಟಕ್ಕೆ ಪಾತ್ರಳಾಗುತ್ತೇನೆಂದು ಗೊತ್ತಿರಲಿಲ್ಲ... ಎನ್ನುತ್ತ ಸಂಭ್ರಮಿಸಿದ ನಟಿ ಭೂಮಿಕಾ. ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭೂಮಿಕ ಹೆಸರಿನ ನಟಿ ಮಿಂಚುತ್ತಿದ್ದಾಳೆ. ನಾವು ಹೇಳಲು ಹೊರಟಿರುವ ಭೂಮಿಕಾ ಅವಳಲ್ಲ. ಈಕೆ ಚಂದನವನದ ಗೊಂಬೆ.
ಗಾಂಧಿನಗರದಲ್ಲಿ ಈಗಷ್ಟೇ ಬೆಳೆಯುತ್ತಿರುವ ನಟಿ. ನಾಲ್ಕೈದು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಭೂಮಿಕಾ ಎರಡು ತಮಿಳು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾಳೆ. ಮಂಗಳೂರು ಮೂಲದ ಭೂಮಿಕಾ, 'ಬಿಡಲಾರೆ ಎಂದೂ ನಿನ್ನ', 'ಪ್ರಧಾರೆ' ಹಾಗೂ ತಮಿಳಿನ 'ಗ್ಯಾಮ್ಲರ್‌', 'ಕರತಕರಿ' ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ನಟ ನವೀನ್ ಕೃಷ್ಣರ ಜೊತೆ ಅಭಿನಯಿಸಿರುವ 'ಬಿಡಲಾರೆ ಎಂದೂ ನಿನ್ನ' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಚಿತ್ರದ ನಿರ್ದೇಶಕರು ಉಮೇಶ್ ಬಾದರದಿನ್ನಿ, ನಿರ್ಮಾಪಕರು ಮುರಳಿ. ಸ್ವಾತಿ ಚಿತ್ರದ ಮತ್ತೊಬ್ಬ ನಾಯಕಿ.
ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಆ್ಯಂಡ್ ತಂಡದ ಬ್ಯಾನರ್‌ನಲ್ಲಿ '12 ಎಎಂ' ಚಿತ್ರ ಬಂದಿದ್ದು. ಪ್ರೇಕ್ಷಕರನ್ನು ಹೆದರಿಸುವ ಹಾರರ್ ಚಿತ್ರವಾದರೂ ಚಿತ್ರ ನೋಡಿದವರು 'ಸೂಪರ್‌' ಎಂದರು. ಈಗ 'ಬಿಡಲಾರೆ ಎಂದೂ ನಿನ್ನ' ಚಿತ್ರ ಕೂಡ ಹಾರರ್ ಆಗಿದ್ದು, ಇದು ಪ್ರೇಕ್ಷಕರನ್ನು ಹೆದರಿಸುತ್ತದೋ ಅಥವಾ ಪ್ರೇಕ್ಷಕರಿಗೆ ಈ ಚಿತ್ರ ಬೆವರುತ್ತದೋ ನೋಡಬೇಕು. ಆದರೆ ಅಪರೂಪ ಚಿತ್ರದಲ್ಲಿ ತಾನು ನಾಯಕಿಯಾಗಿ ಕಾಣಿಸಿಕೊಂಡಿದ್ದಕ್ಕೆ ಭೂಮಿಕಾ ಖುಷಿಯಾಗಿದ್ದಾರೆ. 'ಚಿತ್ರದ ಶೀರ್ಷಿಕೆ ನೋಡಿದವರು ಇದು ಕೇವಲ ದೆವ್ವದ ಚಿತ್ರ ಎಂದುಕೊಳ್ಳುತ್ತಾರೆ. ಆದರೆ ಪೂರ್ತಿ ಸಿನಿಮಾ ಅದಲ್ಲ. ವಿಭಿನ್ನ ಕಥೆ ಇಲ್ಲಿದೆ. ನಿರ್ದೇಶಕರು ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ನವೀನ್ ಕೃಷ್ಣರಂಥ ಒಳ್ಳೆಯ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದೆ' ಎನ್ನುತ್ತಾರೆ ಭೂಮಿಕಾ.
ಇನ್ನೂ 'ಹಾಕು ಹೆಜ್ಜೆ ಹಾಕು', 'ಡ್ರೀಮ್ ಗರ್ಲ್ಸ್‌' ಮುಂತಾದ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿರುವ ಭೂಮಿಕಾ, ಚಿತ್ರರಂಗಕ್ಕೆ ಬಂದ ಅತ್ಯಂತ ಕಡಿಮೆ ಅವಧಿಯಲ್ಲೇ ತಮಿಳಿನಲ್ಲೂ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ನನಗೆ ಇಂಥದೇ ಪಾತ್ರ ಬೇಕು ಎನ್ನುವ ಷರತ್ತು ಇಲ್ಲ. ಆದರೆ ಸಿನಿಮಾ ನೋಡುವ ಪ್ರೇಕ್ಷಕನಿಗೆ ನನ್ನ ಪಾತ್ರ ಮತ್ತು ಅಭಿನಯ ಖುಷಿ ಕೊಡಬೇಕು. ಅಂಥ ಪಾತ್ರಗಳಲ್ಲಿ ಅಭಿನಯಿಸಲು ನಾನು ಸಿದ್ಧ' ಎಂಬುದು ಭೂಮಿಕಾಳ ಮಾತು. ಹಳ್ಳಿಯ ಹುಡುಗಿಯ ಲುಕ್ಕು, ಸಿಟಿ ಗ್ಲ್ಯಾಮರ್ ಇರುವ ಭೂಮಿಕಾಳಿಗೆ ಕನ್ನಡದಲ್ಲಿ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಗಲಿ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!