ಫ್ರೀಡಾ ಪಿಂಟೋ 
ಸಿನಿಮಾ ಲೇಖನ

FREE ಡಾ

ಇಸ್ರೇಲ್, ಸ್ಪೇನ್ನಂಥ ದೇಶಗಳಲ್ಲಿ ಓಡಾಡಿಕೊಂಡಿರುವ ಈ ನಟಿ ಕನ್ನಡದವಳು. ಅದಕ್ಕಿಂತ ಮುಖ್ಯವಾಗಿ ಮಂಗಳೂರಿನ ಕಡಲ ಚೆಲುವೆ. ಆದರೆ, ಈಕೆ ಬಾಲಿವುಡ್ನಲ್ಲಿ ಬಳಕೆಯಾಗದೇ ಹೋಗಿದ್ದು ಯಾಕೆ?

ಒಂದೇ ರಾತ್ರಿಯಲ್ಲಿ ವರ್ಲ್ಡ್ ಫೇಮಸ್ಸಾದವಳು ಈಕೆ. ಮಂಗಳೂರಿನ ಈ ಎಣ್ಣೆಕಪ್ಪು ಸುಂದರಿಯ ಸೌಂದರ್ಯದ ಬಗ್ಗೆ ಗ್ಲ್ಯಾಮರ್ ಲೋಕ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿತು. ಆದರೆ, ತನ್ನ ಮೊದಲ ಚಿತ್ರ ಆಸ್ಕರ್ ಅಂಗಳದಲ್ಲಿ ನಕ್ಕಾಗ ಈಕೆ ಮಾತ್ರ ಬಾಯ್ಫ್ರೆಂಡ್ ಜೊತೆ ಸುತ್ತಾಡಿಕೊಂಡಿದ್ದಳು.

ಹ್ಞಾಂ, ಇಲ್ಲಿ ಹೇಳ್ತಾ ಇರೋದು ಫ್ರೀಡಾ ಪಿಂಟೋ ಬಗ್ಗೆ.

'ಸ್ಲಂ ಡಾಗ್ ಮಿಲೇನಿಯರ್' ಚಿತ್ರದ ನಂತರ ಹೆಚ್ಚೂಕಮ್ಮಿ ರಾತ್ರಿ ಪಾರ್ಟಿಗಳ ಶೋ ಪೀಸ್ ಆಗಿದ್ದ ಈಕೆಗೆ ನಿರೀಕ್ಷೆಯಂತೆ ಹಾಲಿವುಡ್ ಕರೆದು ಕೆಲಸ ಕೊಡಲಿಲ್ಲ. ಕನಿಷ್ಠ ಬಾಲಿವುಡ್ ಕೂಡ 'ಬಾರಮ್ಮ' ಎನ್ನಲಿಲ್ಲ.

ಆದರೆ, ಈ ಸ್ಲಂ ಸುಂದರಿ ಸದ್ಯ ಇಸ್ರೇಲ್ ಹಾಗೂ ಟುನಿಶಿಯಾ ದೇಶಗಳ ಚಿತ್ರಗಳಲ್ಲಿ ಅಭಿನಯಿಸು ಅವಕಾಶ ಗಿಟ್ಟಿಸಿಕೊಂಡಳು. ಅರೇಬಿಕ್ ಭಾಷೆಯ 'ಬ್ಲ್ಯಾಕ್ ಗೋಲ್ಡ್' ಹಾಗೂ 'ಮಿರಾಲ್' ಚಿತ್ರಗಳು ಈಕೆಗೆ ಇನ್ನಷ್ಟು ಜಾಗತಿಕ ಗತ್ತು ತಂದುಕೊಟ್ಟವು. ಸ್ಪ್ಯಾನಿಷ್ನ 'ಯು ವೆಲ್ ಮೀಟ್ ಎ ಟೆಲ್ ಡಾರ್ಕ್ ಸ್ಟ್ರೇಂಜರ್' ಚಿತ್ರವೂ ಈಕೆಗೆ ಪ್ರಚಾರದ ಪರದೆ ಹೊದಿಸಿದವು. ಪಿಂಟೋ ಒಟ್ಟು ಅಭಿನಯಿಸಿದ್ದು 9 ಚಿತ್ರಗಳಲ್ಲಿ. ಸದ್ಯ ಎರಡು ಚಿತ್ರಗಳ ಶೂಟಿಂಗ್ನಲ್ಲಿ ಬ್ಯುಸಿ. ಆದರೆ 'ಸ್ಲಂ ಡಾಗ್ ಮಿಲೇನಿಯರ್' ಚಿತ್ರದ ನಂತರ ಫ್ರೀಡಾ ಬಾಲಿವುಡ್ನ ಮೋಸ್ಟ್ ಫೇವರೆಟ್ ನಟಿಯಾಗುತ್ತಾಳೆಂದು ನಿರೀಕ್ಷಿಸಲಾಗಿತ್ತು. ಆದರೆ, ಈಕೆ ನಟ ದೇವ್ಪಟೇಲ್ ಜೊತೆ ಸುತ್ತಾಡಿಕೊಂಡಿದ್ದೇ ಹೆಚ್ಚು ಸುದ್ದಿಯಾಯಿತೇ ಹೊರತು ಚಿತ್ರರಂಗದಲ್ಲಿ ಬೆಳಗದೆ ಹೋದಳು.
ಸಾಮಾನ್ಯವಾಗಿ ಆಸ್ಕರ್ನಂಥ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಕೇಳಿ ಬರುವ ಹೆಸರುಗಳು ಹಾಲಿವುಡ್ಗೆ ಮಾತ್ರ ಸೀಮಿತ. ಅವರು ಬಾಲಿವುಡ್ಗೆ ಕಾಲಿಡೋದಿಲ್ಲ ಎನ್ನುವ ಮಾತುಗಳಿವೆ. ಇದು ಫ್ರೀಡಾಳ ವಿಚಾರದಲ್ಲಿ ನಿಜವಾಯಿತು. ಮೊದಲ ಚಿತ್ರ ಬಾಲಿವುಡ್ನದ್ದಾದರೂ ಈಕೆಯ ಕಣ್ಣು ಮಾತ್ರ ಹಾಲಿವುಡ್ ಮೇಲೆ ಬಿತ್ತು. ಅಮೆರಿಕ ಚಿತ್ರರಂಗವೇ ತನ್ನ ತವರುಮನೆ ಎಂದುಕೊಂಡು ಅಲ್ಲಿನ ರೆಡ್ಕಾರ್ಪೆಟ್ ಮೇಲೆ ಕಿಲಕಿಲನೆ ಹೆಜ್ಜೆ ಹಾಕತೊಡಗಿದಳು. ಆದರೆ, ಅಮೆರಿಕನ್ನರು ಈ ಎಣ್ಣೆಕಪ್ಪು ಸುಂದರಿಯನ್ನು ಅಷ್ಟಾಗಿ ಮೆಚ್ಚಿಕೊಳ್ಳಲಿಲ್ಲ. ಬಯಸಿ ಬಂದ ಮನೆಯಲ್ಲಿ ಫ್ರೀಡಾ ಮೂಲೆಗುಂಪಾದಳು. ಹೀಗಾಗಿ, ಅಲ್ಲಿ ಇಲ್ಲಿ ಅಂಥ ಅಪರೂಪಕ್ಕೆ ಎರಡು- ಮೂರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತ ಆರಕ್ಕೇರದೆ, ಮೂರಕ್ಕಿಳಿಯದೆ ಶೋಪೀಸ್ ಆಗಿಯೇ ಉಳಿದುಕೊಂಡಿದ್ದಾಳೆ ಫ್ರೀಡಾ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!