ಅಮೆರಿಕದಲ್ಲಿ ಹಂಸಲೋಕ
ನ್ಯೂಯಾರ್ಕ್ನ ಕನ್ನಡ ಕೂಟಕ್ಕೆ 40ನೇ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ಕಾರ್ಯಕ್ರಮದಲ್ಲಿ, ಅಲ್ಲಿ ಗಾನದ ಹೊಳೆ ಹರಿಸುತ್ತಿರುವವರು ಸಂಗೀತ ನಿರ್ದೇಶಕ ಹಂಸಲೇಖ ಮತ್ತು ತಂಡ. 'ಶಾಂತಿ ನುಡಿ ಕನ್ನಡ' ಎಂಬ ಉದ್ದೇಶವಿಟ್ಟುಕೊಂಡು 'ಹಂಸ'ದನಿ, ಅಲ್ಲಿ ಇಂಪು ತುಂಬಲಿದೆ. ಜು. 13ರಂದು ನ್ಯೂಯಾರ್ಕಿನ ಮ್ಯಾಡಿಸನ್ಥಿಯೇಟರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕೆನೆಕ್ಟಿಕಟ್- ಈ ತ್ರಿವಳಿ ರಾಜ್ಯಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ಕನ್ನಡ ಕೂಟ, 1974ರಲ್ಲಿ ಸ್ಥಾಪನೆಯಾಯಿತು. ಕೂಟದ ಈ ಕಾರ್ಯಕ್ರಮದಲ್ಲಿ ಗಾಯಕಿಯರಾದ ಲತಾ ಹಂಸಲೇಖ, ಅನುರಾಧಾ ಭಟ್, ಚೇತನ್ (ಗಾಯಕ), ವೇಣುಗೋಪಾಲ ರಾಜು (ತಬಲ), ವೇಣು (ಕೀಬೋರ್ಡ್), ಶ್ರೀನಿವಾಸ್ ಆಚಾರ್ (ಗಿಟಾರ್) ಮತ್ತು ಮಂಜುನಾಥ್ (ರಿದಂ) ಅವರು ಹಂಸಲೇಖ ತಂಡದಲ್ಲಿರುತ್ತಾರೆ.