ಮಾನಸ ಚಿತ್ರಮಂದಿರದಲ್ಲಿ ಏರೋ 11.1 ಸೌಂಡ್
ಸುಮಾರು 50 ವರ್ಷಗಳ ಇತಿಹಾಸವಿರುವ ಕೋಣನಕುಂಟೆಯ ಮಾನಸ ಚಿತ್ರಮಂದಿರ ಈಗ ಇನ್ನಷ್ಟು ಹೈಟೆಕ್ ಆಗಿದೆ. 1997ರಲ್ಲಿ ಡಿಟ್ಎಸ್ ಅಳವಡಿಸಿಕೊಂಡಿದ್ದ ಮಾನಸ ಚಿತ್ರಮಂದಿರ ಈಗ ಏರೋ 11.1 ಸೌಂಡ್ ಎಫೆಕ್ಟ್ನಲ್ಲಿ ವಿಜೃಂಭಿಸುತ್ತಿದೆ. ಬಾರ್ಕೋ ಕಂಪನಿಯ ಸಹಯೋಗದಿಂದ ಜಾಗತಿಕ ಮಟ್ಟದ ಧ್ವನಿ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಸುಮಾರು 20 ಲಕ್ಷರುಪಾಯಿಗಳ ವೆಚ್ಚದಲ್ಲಿ ಪ್ರೇಕ್ಷಕರಿಗೆ 360 ಡಿಗ್ರಿ ಸೌಂಡ್ ಎಫೆಕ್ಟ್ ಕೇಳಿಸುತ್ತಿದ್ದಾರೆ ಮಾಲೀಕರು. ಥಿಯೇಟರ್ ಮ್ಯಾನೇಜರ್ ಕಾವೇರಪ್ಪ, ಬಾರ್ಕೋ ಕಂಪನಿಯ ಮದುಸೂಧನ್, ಚಿತ್ರಮಂದಿರದ ಸೌಂಡ್ ಎಂಜಿನಿಯರ್ ಫೆಲಿಸ್ ರಾಜ್ ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ವಿವರಗಳನ್ನು ನೀಡಿದರು.