ಸ್ಯಾಂಡಲ್ವುಡ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಕ್ವಾಟ್ಲೆ ಚಿತ್ರಕ್ಕೆ ಶ್ರೀಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಮುಕ್ತಾಯವಾಗಿದೆ. ಗೌತಮ್ ಶ್ರೀವತ್ಸಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದಾರೆ. ಚಂದ್ರಕಲಾ(ಜೆ.ಸಿ.ಕೆ) ರಚನೆ ಹಾಗೂ ನಿರ್ದೇಶನದ ಈ ಚಿತ್ರ 'ಪಕ್ಕಾ 420ನನ್ಮಗ' ಎಂಬ ಅಡಿಬರಹ ಹೊಂದಿದೆ. ಚಂದ್ರಕಲಾ ಈ ಚಿತ್ರದ ನಿರ್ಮಾಪಕರು ಕೂಡ. ಪಾರ್ಥ ಈ ಚಿತ್ರದ ನಾಯಕ. ಯಜ್ಞಾ ಶೆಟ್ಟಿ ಚಿತ್ರದ ನಾಯಕಿ. ಐದು ಹಾಡುಗಳಿರುವ ಈ ಚಿತ್ರಕ್ಕೆ ಲಿಯೋ ಸಂಗೀತ ಮ್ತತು ಚೆಲ್ವ ಅವರ ಛಾಯಾಗ್ರಹಣವಿದೆ.