ಗುಬ್ಬಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ನಮ್ ದುನಿಯಾ ನಮ್ ಸ್ಟೈಲ್ ಚಿತ್ರ ಮಾಸಾಂತ್ಯಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪ್ರೀತಂ ಗುಬ್ಬಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಶಾನ್ ರೆಹಮಾನ್ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ ಸಾಹಸ, ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿದೆ. ಕೃಷ್ಣನಾಗಪ್ಪ, ವಿನಾಯಕಜೋಷಿ, ಲಿಖಿತ್ ಶೆಟ್ಟಿ, ಮಿಲನ ನಾಗರಾಜ್, ಕಾವ್ಯಾಶೆಟ್ಟಿ, ರಂಗಾಯಣರಘು, ಸಾಧುಕೋಕಿಲಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. .