ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಲೇಖನ

ಚಿತ್ರ ತಂಡ ಪ್ರಕಾಶಿಸುತ್ತಿದೆ

Mainashree
Updated On : 22 Mar 2013, 12:25 pm

ಚಿತ್ರರಂಗದಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವವರು ಹೆಚ್ಚು. ಆದರೆ ಯೋಗರಾಜಭಟ್ ನಿರ್ದೇಶನದ, ಸುದೀಪ್ ಅಭಿನಯದ 'ರಂಗ ಎಸ್‌ಎಸ್‌ಎಲ್‌ಸಿ' ಚಿತ್ರ ತೆರೆಕಂಡು ಸೋಲನುಭವಿಸಿದ್ದರೂ 'ವಿಠಲಾ, ರಂಗಾ' ಎನ್ನುತ್ತಾ 'ಟೋಪಿವಾಲ'ನ ಶೈಲಿಯಲ್ಲಿ ಎರಡೆರಡು ಚಿತ್ರಗಳು ರಂಗನ ಮೊರೆ ಹೋಗಿವೆ. ಅದರಲ್ಲಿ ಒಂದು ಸುದೀಪ್‌ರ ಸಿಸಿಎಲ್ ಸ್ನೇಹಿತ ಪ್ರದೀಪ್ ಅವರದ್ದು ಎನ್ನುವುದು ವಿಶೇಷ.
ಹೀಗೆ ರಂಗನಾಯಕರಾಗಲು ಹೊರಟಿರುವ ಹೊಸಬರ ಈ ಎರಡು ಚಿತ್ರಗಳ ಹೆಸರು 'ರಂಗನ್ ಸ್ಟೈಲ್‌' ಮತ್ತು 'ರಂಗನ್ ಲವ್ ಸ್ಟೋರಿ'. ಈ ಇಬ್ಬರೂ ರಂಗಂದಿರು ರಂಗೇನಹಳ್ಳಿಯಿಂದ ಬಂದವರಾ ಎಂಬ ಬಗ್ಗೆ ಮಾಹಿತಿ ಇಲ್ಲದಿದ್ದರೂ ಸದ್ಯಕ್ಕೆ ಇವರು ಗಾಂಧಿನಗರವನ್ನು ರಂಗೇರಿಸಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ತಮ್ಮ ತಮ್ಮ ಚಿತ್ರಗಳ ಮುಹೂರ್ತ ಮಾಡಿಕೊಂಡ ಈ ಚಿತ್ರದ ನಾಯಕರು ರಂಗಪ್ರವೇಶವನ್ನಂತೂ ಮಾಡಿದ್ದಾರೆ.
ಈ ಪೈಕಿ ಪ್ರದೀಪ್ ನಾಯಕತ್ವದ 'ರಂಗನ್ ಸ್ಟೈಲ್‌' ಚಿತ್ರಕ್ಕೆ ಪ್ರಶಾಂತ್ ನಿರ್ದೇಶನ, ಗುರುಕಿರಣ್ ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣವಿದೆ. ಇನ್ನು ಪ್ರೇಮ್ ಚವ್ಹಾಣ್ ನಾಯಕತ್ವದ ರಂಗನ್ ಲವ್ ಸ್ಟೋರಿಗೆ ರಾಮು ಅವರ ನಿರ್ದೇಶನವಿದೆ.
ಪ್ರೇಕ್ಷಕ ರಂಗನ ಈ ಎರಡು ಚಿತ್ರಗಳನ್ನು ನೋಡಿ ರಾಂಗ್ ಆಗಿ, ರಾಂಗ್ ನಂಬರ್ ಎಂಬ ರಾಗ ತೆಗೆಯದಿದ್ದರೆ ಈ ಎರಡೂ ಚಿತ್ರ ತಂಡಗಳ ಆಶಯ ಈಡೇರಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement