ಕೋಮಲ್‌ಗೆ ಮತ್ತೆ ಪ್ಯಾರ್ಗೆ ಆಗ್ಬುಟೈತೆ
ರಕ್ಷಿತ್ ಫಿಲ್ಮ್ಸ್ ಲಾಂಛನದಲ್ಲಿ ಶೋಭಾಪ್ರಕಾಶ್ ನಿರ್ಮಿಸುತ್ತಿರುವ 'ಪ್ಯಾರ್ಗೆ ಆಗ್ಬುಟೈತ'ೆ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ. ಅಭಿಮಾನಿ, ಸೆಂಟ್ರಲ್ ಜೈಲ್ ಚಿತ್ರಗಳಿಗೆ ಸಂಗೀತ ನೀಡಿರುವ ಧರ್ಮತೇಜ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು ಚಿತ್ರದಲ್ಲಿ ಐದು ಹಾಡುಗಳಿವೆ.
ಮೇ ಹದಿನಾರರಿಂದ ಬೆಂಗಳೂರು, ಮೈಸೂರು, ಸಕಲೇಶಪುರ, ಉಡುಪಿ, ಮಡಿಕೇರಿ, ಮಂಗಳೂರು, ಕಾಸರಗೋಡಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿ ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿರುವ ಕವಿನ್ ಬಾಲ ಈ ಚಿತ್ರದ ನಿರ್ದೇಶಕರು. ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದ ನಾಯಕರಾಗಿ ಕೋಮಲ್ ಅಭಿನಯಿಸುತ್ತಿದ್ದಾರೆ. ಬಾಲಭರಣಿ ಛಾಯಾಗ್ರಹಣ, ಸುರೇಶ್‌ಅರಸ್ ಸಂಕಲನವಿರುವ ಈ ಚಿತ್ರಕ್ಕೆ ಕೇಶವಾದಿತ್ಯ(ರಾಮಜೋಗಿಹಳ್ಳಿ) ಸಂಭಾಷಣೆ ಬರೆದಿದ್ದಾರೆ.